ಮರಾಠಿ ಭಾಷೆ ಬಳಕೆ: ಆಕ್ಷೇಪ

0
32

ಕಲಬುರಗಿ: ಬಸವಕಲ್ಯಾಣ ಉಪ ಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ. ನಾರಾಯಣರಾವ್ ಅವರು ಕನ್ನಡ ಕಡೆಗಣಿಸಿ ಮರಾಠಿ ಭಾಷೆಯಲ್ಲಿ ಕರಪತ್ರ ಹಂಚುತ್ತಿರುವುದಕ್ಕೆ ಹೆಚ್. ಶಿವರಾಮೇಗೌಡರ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿಯಲ್ಲಿ ಮಂಗಳಾದೇವಿ ಅಂಗಡಿಯವರು ಮರಾಠಿ ಭಾಷೆಯಲ್ಲಿ ಮತ ಯಾಚಿಸುತ್ತಿದ್ದು ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ.ಕನ್ನಡ ಭಾಷಾ ಜ್ಞಾನ ಇದ್ದರೂ ಮರಾಠಿಯಲ್ಲಿ ಭಾಷಣ ಮಾಡುವುದು, ಕರ ಪತ್ರ ಹಂಚುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ರಾಜ್ಯ ಸರಕಾರದ ಮುಖ್ಯಮಂತ್ರಿ ಮರಾಠಾ ಅಭಿವೃದ್ಧಿ ನಿಗಮ ಮಾಡುವ ಮೂಲಕ ಒಂದು ಕನ್ನಡಿಗರ ಮನಸ್ಸಿಗೆ ಘಾಸಿ ಮಾಡಿದ್ದರೆ. ಇನ್ನು ಅಭ್ಯರ್ಥಿಗಳು ಮರಾಠಾ ಭಾಷೆ ಬಳಸುವ ಮೂಲಕ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ಇವರು ಕನ್ನಡಿಗರೇ? ಅಥವಾ ಮರಾಠಿಗರೇ ಎಂಬುದನ್ನು ಮೊದಲು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here