ಕಲಬುರಗಿ: ಜೇವರ್ಗಿ ಮತಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದಾಗಿ ಶಾಸಕರು, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕೋನ ಹಿಪ್ಪರಗಾದಲ್ಲಿನ ತಮ್ಮ 3 ನೇ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಹೆಣ್ಣುಮಕ್ಕಳ ಸಮೂಹದೊಂದಿಗೆ ವಿಸ್ತೃತ ಚರ್ಚೆ ಮಾಡಿದ ಡಾ. ಅಜಯ್ ಸಿಂಗ್ ಹೈನುಗಾರಿಕೆ ಉಪ ಕಸುಬು, ಇದನ್ನು ಆದಾಯದ ಮೂಲವಾಗಿ ರೈತ ಮಹಿಳೆಯರು ಬಳಸಿಕೊಂಡಲ್ಲಿ ಸಂಸಾರಗಳಿಗೆ ಅನುಕೂಲವಾಗಲಿದೆ ಎಂಬ ಮಾಹಿತಿ ನೀಡಿದರು. ಕೃಷಿ ಅನೇಕ ಬಾರಿ ಬೆಲೆ ಇಲ್ಲದೆ, ಬೆಳೆ ಬಾರದೆ ಹಾನಿ ಸಂಭವಿಸುತ್ತದೆ, ಆಗ ಹೈನುಗಾರಿಕೆ ಉಪ ಕಸುಬಾಗಿದ್ದು ಹಸು, ಎಮ್ಮೆ ಜೊತೆಗಿದ್ದಲ್ಲಿ ಹಾನಿಯ ಬಿಸಿ ಸ್ವಲ್ಪ ಮಟ್ಟಿಗೆ ಶಮನ ಮಾಡಬಹುದು ಎಂದು ಹೆಣ್ಣುಮಕ್ಕಳೊಂದಿಗಿನ ಸಂವಾದದಲ್ಲಿ ಅವರು ಒತ್ತಿ ಹೇಳಿದರು.
ವೈಜ್ಞಾನಿಕ ಸಂಶೋಧನಾ ಪರಿಷತ್ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ: ಹುಲಿಕಲ್ ನಟರಾಜ
ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಬರುವ ದಿನಗಳಲ್ಲಿ ಹೈನುಗಾರಿಕೆಗೆ ಪೆÇ್ರೀತ್ಸಾಹ ನೀಡುವ ದಿಶೆಯಲ್ಲಿ ತಾವು ಕಾರ್ಯಪ್ರವೃತ್ತರಾಗೋದಾಗಿ ಸಂಕಲ್ಪ ಮಾಡಿದ ಅವರು ಭೀಮಾನದಿ ತೀರವಿರೋದರಿಂದ ರೈತರು ಕೃಷಿಯೊಂದಿಗೆ ಹೈನುಗಾರಿಕೆಗೂ ಒತ್ತು ನೀಡಿದರೆ ಆದಾಯ ಹೆಚ್ಚಿಗೆ ಪಡೆಯಬಹುದು ಎಂದರು.
ಭೀಮಾನದಿ ಇಲ್ಲಿದೆ, ಜೊತೆಗೇ ಜೇವರ್ಗಿ ಶಾಖಾ ಕಾಲುವೆಯೂ ಇಲ್ಲಿದೆ. ಕೃಷ್ಣೆಯ ನೀರು ಇಲ್ಲಿಗೆ ಹರಿದು ಬಂದಿದ್ದರಿಂದ ಜೇವರ್ಗಿ ಸಮೃದ್ಧಿಯ ತಾಲೂಕು ಆಗಿದೆ. ಹೀಗಾಗಿ ಜೇವರ್ಗಿ ತಾಲೂಕು, ಯಡ್ರಾಮಿ ತಾಲೂಕುಗಳಲ್ಲಿ ನೀರಾವರಿ ಸೌಲಭ್ಯವಿದೆ. ಇದರಿಂದ ಹೈನುಗಾರಿಕೆಗೆ ಹೆಚ್ಚಿನ ಅನುಕೂಲವಿದೆ. ಕಲಬುರಗಿ ಹಾಲು ಒಕ್ಕೂಟದವರ ನೆರವು ಪಡೆದು ಬರುವ ದಿನಗಳಲ್ಲಿ ಹಳ್ಳಿಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದನೆಯಲ್ಲಿ ತೊಡಗುವಂತಾಗಲು ತಾವು ವ್ಯವಸ್ಥೆ ಮಾಡೋದಾಗಿ ಹೇಳಿದರು.
ಟ್ರಸ್ಟ್ ವೆಲ್ ಆಸ್ಪತ್ರೆಯ ತಜ್ಞ ಡಾ. ಸತೀಶ್ ಅವರಿಂದ ಅಪರೂಪದ ಶಸ್ತ್ರಚಿಕಿತ್ಸೆ
ಗ್ರಾಮ ವಾಸ್ತವ್ಯದಲ್ಲಿ ಡಾ. ಅಜಯ್ ಸಿಂಗ್ ಜೊತೆ ಅತಿಥಿಯಾಗಿ ಉಪಸ್ಥಿತರಿದ್ದ ಕಲಬುರಗಿ ಹಾಲು ಒಕ್ಕೂಟದ ನಿರ್ದೇಶಕ ಈರಣ್ಣ ಝಳಕಿ ಹೆಣ್ಣುಮಕ್ಕಳು ಹೈನುಗಾರಿಕೆಗೆ ಬಂದಲ್ಲಿ ಒಕ್ಕೂಟದಲ್ಲಿ ಅನೇಕ ಯೋಜನೆಗಳಿದ್ದು ಅವುಗಳಿಂದ ನೆರವು ನೀಡಬಹುದಾಗಿದೆ. ಮೊದಲು ಹಾಲು ಉತ್ಪಾದಕರ ಸ್ವಸಹಾಯ ಸಂಘ ಸ್ಥಾಪಿಸಿ ಹೈನುಗಾರಿಕೆಗೆ ಎಲ್ಲರು ತೊಡಗಿಸಿಕೊಂಡಲ್ಲಿ ಅದೇ ಆದಾಯದ ಮೂಲವಾಗುತ್ತದೆ ಎಂದರು. ಆಳಂದದಲ್ಲಿ 110 ಸಂಘಗಳಿವೆ, ಜೇವರ್ಗಿಯಲ್ಲಿ ಕೇವಲ 10 ಸಂಘಗಳಿದ್ದವು. ಅವೂ ಸಹ ಕೆಲಸ ಮಾಡುತ್ತಿಲ್ಲವೆಂದ ಅವರು ಬರುವ ದಿನಗಳಲ್ಲಿ ಹಾಲು ಒಕ್ಕೂಟ ಹೊಸ ಸಂಘ ಸ್ಥಾಪನೆಗೆ ಆಸಕ್ತಿ ಹೊಂದಿದ್ದರಿಂದ ಹಳ್ಳಿ ಹೆಣ್ಮಕ್ಕಳ ಸಹಕಾರ ಕೋರಿದರು.
ರೈತರಾದ ಆನಂದ, ಚಂದಪ್ಪ ಪೂಜಾರಿ, ಶರಣಬಸಪ್ಪ ಪೂಜಾರಿ, ಬಾಬೂರಾವ ಪೂಜಾರಿ, ಅಪ್ಪಾಸಾಹೇಬ್ ಪೂಜಾರಿ ಮತ್ತವರ ಕುಟುಂಬದವರು , ಕೋನ ಹಿಪ್ಪರಗಾ ಊರಿನ ಮಹಿಳೆಯರು ಹಾಜರಿದ್ದು ಹೈನುಗಾರಿಕೆಯ ಮಾಹಿತಿ ಪಡೆದರು. ಗ್ರಾಮ ವಾಸ್ತವ್ಯದ ಮೂಲಕ ಹಳ್ಳಿ ಜನ, ರೈತರೊಂದಿಗೆ ಬೆರೆತು ಅಲ್ಲಿನ ಅವರ ಕಷ್ಟ- ನಷ್ಟಗÀಳನ್ನು ಆಲಿಸುತ್ತಿರುವ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕೋನ ಹಿಪ್ಪರಗಾದಲ್ಲಿನ ತಮ್ಮ 3 ನೇ ಗ್ರಾಮ ವಾಸ್ತವ್ಯದ ಮಾರನೆ ದಿನ ಅಪ್ಪಾಸಾಹೇಬ್ ಪೂಜಾರಿ ಇವರ ತೋಟದ ಮನೆಯಲ್ಲಿಯೇ ಇದ್ದು ಬೆಳಗಿನ ಜಾವ ಕರು ಬಿಟ್ಟುಕೊಂಡು ತಾವೇ ಹಾಲು ಕರೆದರಲ್ಲದೆ ಎತ್ತಿನ ಬಂಡಿ ಓಡಿಸಿದರು.
ಅಪ್ಪಾಸಾಹೇಬರ ಕಬ್ಬಿನ ಗದ್ದೆಯಲ್ಲಿರುವ ಅರೆ ಚಪ್ಪರದ ತೋಟದ ಮನೆಯಲ್ಲಿಯೇ ಬುಧವಾರ ವಾಸ್ತವ್ಯ ಹೂಡಿದ್ದ ಡಾ. ಅಜಯ್ ಸಿಂಗ್ ಗುರುವಾರ ಬೆಳಗ್ಗೆ ಎದ್ದವರೇ ರೈತರೊಂದಿಗೆ ಬೆರೆತು ಅವರ ಮನೆಯಲ್ಲಿನ ಹಸುವಿಗೆ ಪೂಜಿಸಿದರು. ನಂತರ ಅದೇ ಹಸುವಿಗೆ ಕರು ಬಿಟ್ಟುಕೊಂಡು ಚರಿಗೆ ಹಿಡಿದು ಹಾಲು ಕರೆದರು. ತಾವು ಕರೆದ ಹಾಲನ್ನು ತಾವೇ ಕುಡಿಯುವ ಮೂಲಕ ಹಸುವಿನ ನೊರೆ ಹಾಲನ್ನು ಸವಿದರು.
ಬಿಜೆಪಿ ಸರಕಾರದಿಂದ ಜನರಿಗೆ ಪೀಕಲಾಟ: ಶಾಸಕ ಖರ್ಗೆ
ನಾಲ್ಕು ದಿನಗಳ ಹಿಂದಷ್ಟೇ ಈ ಹಸು ತನ್ನ 13 ನೇಯ ಕರುವಿಗೆ ಜನ್ಮ ನೀಡಿದ ಸಂಗತಿ ರೈತರು ಹೇಳಿದಾಗ ಅಲ್ಲೇ ಇದ್ದ ಮುದ್ದಾದ ಕರುವನ್ನು ಅಪ್ಪಿ ಮುದ್ದಾಡಿದ ಡಾ. ಅಜಯ್ ಸಿಂಗ್ ರೈತ ಮಹಿಳೆಯರೊಂದಿಗೂ ಹೈನುಗಾರಿಕೆ ವಿಚಾರವಾಗಿ ಮಾತುಕತೆ ನಡೆಸಿ ಮಾಹಿತಿ ಪಡೆದರು. ನಂತರ ಹೂವಿನ ಹಾರ ಹಾಕಿ, ಕುಂಕುಮ- ಅರಿಷಿಣದಿಂದ ಹಸುವನ್ನು ಅಲಂಕರಿಸಿ ಕಾಯಿ- ಕರ್ಪೂರ ಅರ್ಪಿಸಿ ಪೂಜಿಸಿ ಗೋಮಾತೆಯನ್ನು ನಮಿಸಿದರು.
ಇದಾದ ನಂತರ ಹೊಲದಲ್ಲೇ ಎತ್ತಿನ ಬಂಡಿ ಹತ್ತಿದ ಡಾ. ಅಜಯ್‍ಸಿಂಗ್ 2 ಕಿಮೀ ವರೆಗೂ ಎತ್ತಿನ ಬಂಡಿ ಓಡಿಸಿದರು. ಕೋನ ಹಿಪ್ಪರಗಾ ಹೊಲದಿಂದ ಕೂಡಿ ಮುಕಯ್ ರಸ್ತೆಯವರೆಗೂ ಬಂಡಿ ಹೊಡೆದ ಅವರು ದಾರಿಯುದ್ದಕ್ಕೂ ರೈತರೊಂದಿಗೆ ಮಾತುಕತೆಯಲ್ಲಿ ತೊಡಗಿ ಅವರ ಸುಖ- ದುಃಖ ವಿಚಾರಿಸಿ ಗಮನ ಸೆಳೆದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…