ಕಲಬುರಗಿ: ಜನರಲ್ಲಿ ವೈಜ್ಞಾನಿಕ, ವೈಚಾರಿಕ ಮನೋಧರ್ಮ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಅಸ್ತಿತ್ವಕ್ಕೆ ತರಲಾಗಿದೆ. ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದು
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ. ಕೇವಲ ಎರಡು ತಿಂಗಳಲ್ಲಿ ೩೨ ಸಾವಿರ ಜನ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿದ್ದಾರೆ. ಬರುವ ಜೂನ್ ೫ರ ವರೆಗೆ ೧ಲಕ್ಷ ಸದಸ್ಯತ್ವ ಅಭಿಯಾನದ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ವಿಜ್ಞಾನದೆಡೆಗೆ,ಮನದ ನಡಿಗೆ ಎಂಬ ಕಲ್ಪನೆಯೊಂದಿಗೆ ಪ್ರಜ್ಞಾವಂತಿಕೆ ಬೆಳೆಸುವುದು. ಕಂದಾಚಾರ, ವಾಮಾಚಾರ, ಬಾನಾಮತಿ ಹೀಗೆ ಅನೇಕ ಮೌಢ್ಯಗಳ ವಿರುದ್ಧ ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿಇತ್ತೀಚೆಗೆ ಸ್ತ್ರೀ ವಶೀಕರಣದ ಬಗ್ಗೆ ಕೆಲ ಜ್ಯೋತಿಷ್ಯಗಳು, ಮಂತ್ರವಾದಿಗಳು ಉಪದೇಶ ನೀಡುತ್ತಿರವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಈ ಬಗ್ಗೆ ಕಾನೂನು ಪಂಡಿತರಿಂದ ಸಲಹೆ ಪಡೆದು ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಮೇ ೨ರಿಂದ ಪರಿಷತ್ತಿನ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಎರಡು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹುಲಿಕಲ್ ನಟರಾಜ ಹೇಳಿದರು.
ದುರ್ಬಲ ಮನಸ್ಸು ಗಟ್ಟಿಗೊಳಿಸಿ ಮನಧ್ವನಿಯಾಗಿ ಅವರ ಬೆಂಬಲಕ್ಕೆ ನಿಲ್ಲಲಾಗುವುದು. ಮೌಢ್ಯತೆಯಿಂದ ಮೋಸೋದ ಬಡ ಕುಟುಂಬಕ್ಕೆ ಧ್ವನಿಯಾಗಿ ಕೆಲಸ ಮಾಡಲಾಗುವುದು ಎಂದರು.
ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎಂ. ನಾಗಮೋಹನ್ ದಾಸ, ಇಸ್ರೊದ ಡಾ. ಕಿರಣಕುಮಾರ, ನಿವೃತ್ತ ಎಸ್ ಪಿ ಎಂ. ಉಮೇಶ ಮತ್ತು ಲೋಕೇಶ ಅವರು ಮಾರ್ಗದರ್ಶನ ಮಾಡುತ್ತಿದ್ದು, ಇದೊಂದು ನಾಡಿನ ಹೆಮ್ಮೆಯ ಸಂಸ್ಥೆ ಯಾಗಲಿದೆ ಎಂದು ತಿಳಿಸಿದರು.
ಗೀತಾ ಶಾಂತಕುಮಾರ, ರವೀಂದ್ರ ಶಾಬಾದಿ, ಬಸವರಾಜ ಚಟ್ನಳ್ಳಿ, ಡಾ. ಶಿವರಂಜನ್ ಸತ್ಯಂಪೇಟೆ, ಶರಣಬಸವ ಕಲ್ಲಾ, ರೇಣಕಾ ಸಿಂಗೆ, ಸತೀಶ ಸಜ್ಜನ್, ಪರಮೇಶ್ವರ ಶೆಟಕಾರ, ಅಯ್ಯಣ್ಣ ನಂದಿ ಇತರರಿದ್ದರು.