ಬಿಜೆಪಿ ಪ್ರಥಮ ಕಾರ್ಯಕಾರಿಣಿ ಸಭೆ

ಶಹಾಬಾದ: ಬಿಜೆಪಿ ಪಕ್ಷವನ್ನು ಬಲಪಡಿಸುವಲ್ಲಿ ಯುವ ಮೋರ್ಚಾ ಪ್ರಬಲವಾಗಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತೆಗನೂರ್ ಹೇಳಿದರು.

ಅವರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾದ ಪ್ರಥಮ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಯುವ ಮೋರ್ಚಾ ನಮ್ಮ ಮಂಡಲ ಮೋರ್ಚಾಗಳಲ್ಲಿ ಬಹಳ ಪ್ರಬಲ ಮೋರ್ಚಾವಾಗಿದೆ.ಪಕ್ಷವು ತಮ್ಮನ್ನು ಗುರುತಿಸಿ ಯುವಮೋರ್ಚಾದಲ್ಲಿ ತಮಗೆ ಜವಾಬ್ದಾರಿಯನ್ನು ನೀಡಿದೆ.ತಮಗೆ ನೀಡಿದ ಜವಾಬ್ದಾರಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ತಮ್ಮ ಕಾರ್ಯವೈಖರಿಯನ್ನು ಮಾಡಬೇಕಾಗಿದೆ.ಇಂದಿನ ಯುವ ಮೋರ್ಚಾದ ಯುವಕರು ಮುಂದಿನ ಪಕ್ಷದ ಮಂಡಲ ಮಟ್ಟದ ಜವಾಬ್ದಾರಿಯನ್ನು ಪಡೆಯಬಹುದು.ಅಂತಹ ಜವಾಬ್ದಾರಿ ಪಡೆಯಬೇಕಾದರೆ ನೀವು ಇಂದಿನಿಂದಲೇ ನಿಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.ಆಗ ಪಕ್ಷ ನಿಮ್ಮನ್ನು ಗುರುತಿಸುತ್ತದೆ. ಎಂದರಲ್ಲದೇ, ಯುವ ಮೋರ್ಚಾ ಮಾಡಬೇಕಾದ ಕೆಲವೊಂದು ಕಾರ್ಯಕ್ರಮಗಳ ಬಗ್ಗೆ, ಪಕ್ಷದ ಸಂಘಟನೆ ಬಗ್ಗೆ ವಿವರ ನೀಡಿದರು.

ಸರಳವಾಗಿ ಜಗಜೀವನರಾಮ, ಅಂಬೇಡ್ಕರ್ ಜಯಂತಿ ಆಚರಣೆ: ತಹಸೀಲ್ದಾರ ಸುರೇಶ ವರ್ಮಾ

ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಚಿಂಚನಸೂರ, ನಗರ ಯುವ ಮೋರ್ಚಾ ಅಧ್ಯಕ್ಷ ದಿನೇಶ ಗೌಳಿ, ಸಿದ್ರಾಮ ಕುಸಾಳೆ, ಬಸವರಾಜ ಬಿರಾದಾರ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ರಾಹುಲ ಬಬಲಾದ, ಜಿಲ್ಲಾ  ಕಾರ್ಯಕಾರಿಣಿ ಸದಸ್ಯರಾದ ಮಲ್ಲಿಕಾರ್ಜುನ ಗೋಳೆದ, ಅವಿನಾಶ ಅರಳಿ, ಗುರುರಾಜ ಅಂಬಡಿ, ವಿಶ್ವನಾಥ ಸಾಹುಕಾರ, ಮಂಡಲ ಉಪಾಧ್ಯಕ್ಷ ಆಶೀ? ಮಂತ್ರಿ, ಶರಣು ಕೌಲಗಿ, ರೀತೆಶ ಬೊರಗಾಂವಕರ, ಪವನ ಜಾಧವ,ಕಾರ್ಯದರ್ಶಿಗಳಾದ  ಉಮೆಶ ನಿಂಬಾಳಕರ, ಶೀನೀವಾಸ ನೇದಲಗಿ, ಮೌನೆಶ ಕೊಡ್ಲಿ, ಖಜಾಂಚಿ ಬಾಬು ಕೊಬಾಳ, ಕಾರ್ಯಕಾರಿಣಿ ಸದಸ್ಯರಾದ ಮಲ್ಲಿಕಾರ್ಜುನ ಯಾಂದೆ, ಪ್ರಭು ಪಾಟೀಲ, ರೇವಣಸಿದ್ದ ಮತ್ತಿಮೂಡ, ಅವಿನಾಶ ಸಾಳುಂಕೆ, ಕಿರಣ ದಂಡಗುಲಕರ್, ಸತೀ? ರಾಪನೂರ, ವೀನಾಯಕ ಜಿಪ್ರೆ, ಭೀಮಾಶಂಕರ ಕೊಡ್ಲಿ, ಅಮಿತ ಠಾಕೂರ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ ಮಿಶ್ರಾ ನಿರೂಪಿದರು, ಮಹೇಶ ಯಲೇರಿ ಸ್ವಾಗತಿಸಿದರು, ಜಿಲ್ಲಾ ಕಾರ್ಯದರ್ಶಿ ಮದನ ಹ್ಯಾಗಾಪೂರ ವಂದಿಸಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

34 mins ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

1 hour ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

1 hour ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

1 hour ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

2 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago