ಸರಳವಾಗಿ ಜಗಜೀವನರಾಮ, ಅಂಬೇಡ್ಕರ್ ಜಯಂತಿ ಆಚರಣೆ: ತಹಸೀಲ್ದಾರ ಸುರೇಶ ವರ್ಮಾ

0
104

ಶಹಾಬಾದ: ತಾಲೂಕಿನ ತಹಸೀಲ್ದಾರ ಕಾರ್ಯಾಲಯ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಬಾಬು ಜಗಜೀವನರಾಮ ಹಾಗೂ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಯಂತಿಗಳನ್ನು  ಕೊವಿಡ್ ಮಾರ್ಗಸೂಚಿಗಳ ಪ್ರಕಾರ ಸರಳವಾಗಿ ಆಚರಿಸಲಾಗುತ್ತಿದೆ.ಅಂದು ಸಮಾಜದ ಮುಖಂಡರು ಬೆಳಿಗ್ಗೆ ೮:೩೦ಕ್ಕೆ ತಹಸೀಲ್ದಾರ ಕಾರ್ಯಾಲಯದಲ್ಲಿ ಆಗಮಿಸಿ ಸರಳವಾಗಿ ಜಯಂತಿಯನ್ನು ಆಚರಿಸಲು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Contact Your\'s Advertisement; 9902492681

ನಳೀನ್ ಕುಮಾರ ಕಟೀಲ್ ಹೇಳಿಕೆಗೆ ಆಕ್ರೋಶ

ಸರ್ಕಾರದ ಸುತ್ತೊಲೆ ಪ್ರಕಾರ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡು ಬರಬೇಕು.ಅಲ್ಲದೇ ಅಂದು ನಗರಸಭೆಯ ಪಕ್ಕದಲ್ಲಿರುವ ಬಾಬು ಜಗಜೀವನರಾಮ ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು.ಈಗಾಗಲೇ ಸರ್ಕಾರ ಕೊವಿಡ್-೧೯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಎಲ್ಲರಿಗೂ ಗೊತ್ತಿದ್ದ ವಿಷಯ.ಅವುಗಳ ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದನ್ನು ಅರಿತುಕೊಂಡು ಈ ಬಾರಿ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.ಅದಕ್ಕೆ ಎಲ್ಲಾ ಸಮುದಾಯದ ಮುಖಂಡರು ಸಹಕಾರ ನೀಡಬೇಕೆಂದು ಕೋರಿದ್ದಾರೆ. ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here