ಕಲಬುರಗಿ: ಜಿಲ್ಲಾ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿಕ್ಷಕ, ಸಾಹಿತಿ ವಿಶ್ವನಾಥ ಭಕರೆ ಸೋಮವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಭಕರೆ ಅವರು, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳ, ಕನ್ನಡಿಗರ ಪರಿಷತ್ತು ಆಗಬೇಕು, ಹಿರಿಯ ಮತ್ತು ಕಿರಿಯ ಸಾಹಿತಿಗಳಿಗೆ ಸ್ಥಾನಮಾನ ಕಲ್ಪಿಸುವ ವ್ಯವಸ್ಥೆ ಮಾಡಲಾಗುವದು, ಪ್ರತಿವರ್ಷ ಜಿಲ್ಲಾ ಮತ್ತು ತಾಲೂಕಾ ಘಟಕಗಳಲ್ಲಿ ಅರ್ಥಪೂರ್ಣ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗುವುದು, ಕನ್ನಡಪರ ಚಟುವಟಿಕೆಗಳು ಚುರುಕುಗೊಳಿಸಲಾಗುವುದು, ಜಿಲ್ಲೆಯ ಕೆಲ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಪ್ರಯತ್ನ ಮಾಡಲಾಗುವುದು.
ಬಸವೇಶ್ವರರ ಪ್ರತಿಮೆಗೆ ಮೆಟ್ಟಿಲುಗಳ ಸೌಧದ ಉದ್ಘಾಟನೆ
ಪುಸ್ತಕ ವಿಮರ್ಶೆ, ವಿಚಾರ ಸಂಕೀರಣ, ಕಾವ್ಯ ಕಮ್ಮಟ, ಕಥಾ ಕಮ್ಮಟ, ರಂಗ ಪರಿಕಲ್ಪನೆ ಹಾಗೂ ಯುವ ಬರಹಗಾರರಿಗೆ ಹಿರಿಯ ಲೇಖಕರಿಂದ ಸೂಕ್ತ ಮಾರ್ಗದರ್ಶನ ತರಬೇತಿ ಕೊಡಿಸಲಾಗುವುದು. ಮಹಿಳಾ ಸಾಹಿತಿಗಳನ್ನು ಪ್ರೋತ್ಸಾಹಿಸಿ ಅವರನ್ನು ತಾಲೂಕು ಅಧ್ಯಕ್ಷತೆ ಹಾಗೂ ಸಮ್ಮೇಳನಗಳ ಸರ್ವಾಧ್ಯಕ್ಷತೆ ಮಾಡಲಾಗುವುದು. ಮಹಿಳಾ, ಮಕ್ಕಳ, ವೈದ್ಯ, ಶಿಕ್ಷಣ, ಕೃಷಿ, ಸಂಗೀತ ಹೀಗೆ ಆಯಾ ಕ್ಷೇತ್ರಗಳ ಸಂಬಂಧಿಸಿದ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ರಮೇಶ ಪಾಟೀಲ, ವಿಜಯಕುಮಾರ ಜಿಡಗೆ, ಗಣೇಶ ಪಾಟೀಲ, ಶರಣಯ್ಯ ಹಿರೇಮಠ, ಶಿವಪುತ್ರ ಭಕರೆ, ಶರಣಬಸಯ್ಯ ಮಠಪತಿ, ಸಂಜಯ ಪಾಟೀಲ, ಜಗನ್ನಾಥ ಹಿರೋಳಿ, ಲಕ್ಷೀಕಾಂತ ಬಿದಿ, ಸಿದ್ಧರಾಮ ಚೌಧರಿ, ಅಂಬಣ್ಣ ಬಿಲ್ಲಾಡ, ಕಲ್ಯಾಣಿ ರುಕ್ಮಾಳೆ ಗುರುರಾಜ ಪಾಟೀಲ, ಬಸವರಾಜ ಕೌವಲಗಿ, ಮಲ್ಲು ದೇವಣಗಾಂವ, ಭಕರೆಯವರ ಅನೇಕ ಗೆಳೆಯರು, ಬೆಂಬಲಿಗರು, ಸಾಹಿತಿಗಳು ಮತ್ತಿತರರು ಉಪಸ್ಥಿತರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…