ಬಿಸಿ ಬಿಸಿ ಸುದ್ದಿ

ವಾಲ್ಮೀಕಿ ಕನಸು ಈಡೇರಿಸಲು ಪಣ ತೊಡಿ: ಡಾ.ಜಾಧವ

ವಾಡಿ: ಮತ್ತೊಮ್ಮೆ ಚಿತ್ತಾಪುರದಲ್ಲಿ ಕಮಲ ಅರಳಿಸಬೇಕೆಂದು ಪಣತೊಟ್ಟಿದ್ದ ದಿ.ವಾಲ್ಮೀಕಿ ನಾಯಕರ ಗುರಿ ಸಾಕಾರಗೊಳಿಸಲು ಅವರ ಮಕ್ಕಳು ಮತ್ತು ಭಾಜಪ ಕ್ಷೇತ್ರದ ಕಾರ್ಯಕರ್ತರು ಫೀಲ್ಡಿಗಿಳಿಯಬೇಕು. ವಾಲ್ಮೀಕಿ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ದಿ.ವಾಲ್ಮೀಕಿ ನಾಯಕ ಅವರ ನುಡಿನಮನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸಂಘರ್ಷದ ಜೀವನದಿಂದ ಮೇಲೆ ಬಂದ ದಿ.ವಾಲ್ಮೀಕಿ ನಾಯಕ, ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಮೂಲಕ ಚಿತ್ತಾಪುರ ಮತಕ್ಷೇತ್ರದ ಮೊದಲ ಬಿಜೆಪಿ ಶಾಸಕರಾಗಿ ಗುರುತಿಸಿಕೊಂಡರು.

ಶಾಸಕ ಅಜಯಸಿಂಗ್ ಗೆ ಭೇಟಿ: ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನಕ್ಕೆ ಸ್ಪಂದನೆ

ಡಾ.ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಿಧಾನಸಭೆಗೆ ಸ್ಪರ್ಧಿಸಿ ರಾಜ್ಯದಾಧ್ಯಂತ ಮನೆಮಾತಾದವರು. ಜಾತ್ರೆಯ ರೂಪ ಪಡೆದಿದ್ದ ಅವರ ಶವಯಾತ್ರೆ ನೋಡಿ ವಾಲ್ಮೀಕಿ ಶಕ್ತಿ ಅರಿವಾಯಿತು. ಇಂಥಹ ಸರಳ ಸಜ್ಜನಿಕೆಯ ಧೀಮಂತ ನಾಯಕನನ್ನು ಕಳೆದುಕೊಂಡು ಬಿಜೆಪಿ ಬಡವಾಗಿದೆ. ಅವರ ಸುಪುತ್ರರಾದ ವಿಠ್ಠಲ ನಾಯಕ ಮತ್ತು ರವಿ ನಾಯಕ ಅವರು ತಮ್ಮ ತಂದೆಯ ಗುಣಗಳನ್ನು ಮೈಗೂಡಿಸಿಕೊಂಡು ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸಲು ಮುಂದಾಗಬೇಕು. ಪಕ್ಷ ನಿಮ್ಮ ಬಲವಾಗಿ ನಿಲ್ಲಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಚಿತ್ತಾಪುರದಲ್ಲಿ ದೊಡ್ಡ ಕಾರ್ಯಕರ್ತರ ಪಡೆ ಕಟ್ಟುವಲ್ಲಿ ವಾಲ್ಮೀಕಿ ಶ್ರಮವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆತ್ಮೀಯರೂ ಆಗಿದ್ದರು. ಪಕ್ಷನಿಷ್ಠೆಗೆ ಹೆಸರಾಗಿದ್ದ ವಾಲ್ಮೀಕಿ ನಾಯಕರ ರಾಜಕೀಯ ಗುಣ ಮೆಚ್ಚುವಂತಹದ್ದು. ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಗಾಳಿ ಬೀಸಿತ್ತು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವಾಲ್ಮೀಕಿ ಗೆಲ್ಲುವ ಎಲ್ಲಾ ವಾತಾವರಣ ಸೃಷ್ಠಿಯಾಗಿತ್ತು. ಆದರೆ ಇಷ್ಟುಬೇಗ ಅವರು ನಮ್ಮನ್ನೆಲ್ಲ ಅಗಲಿ ಹೋಗುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ದಿ.ವಾಲ್ಮೀಕಿಯವರು ಅಭಿಮಾನಿಗಳು ಅನಾಥ ಭಾವನೆ ಹೊಂದದೆ ಕ್ಷೇತ್ರದಲ್ಲಿ ಕಮಲ ಅರಳಿಸಲು ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ಪಣ ತೊಡುವುದೇ ನಿಜವಾದ ಶ್ರದ್ಧಾಂಜಲಿಯಾಗಲಿದೆ ಎಂದು ಹೇಳಿದರು.

ಮಹಾಪುರುಷರ ಕೊಡುಗೆ ಅಪಾರ: ನ್ಯಾಯವಾದಿಗಳಾದ ಸತೀಶ ಅಳ್ಳೊಳ್ಳಿ

ದಿ.ವಾಲ್ಮೀಕಿ ನಾಯಕ ಅವರ ಹಿರಿಯ ಪುತ್ರ ವಿಠ್ಠಲ ನಾಯಕ ಮಾತನಾಡಿ, ನಮ್ಮ ತಂದೆಯವರ ಮೇಲೆ ನೀವಿಟ್ಟ ಪ್ರೀತಿಗೆ ನಮ್ಮ ಕುಟುಂಬ ಚಿರಋಣಿಯಾಗಿರಲಿದೆ. ನನ್ನ ಮೇಲೂ ನಿಮ್ಮ ಆಶೀರ್ವಾದ ಇರಲಿ ಎಂದು ಕೈಮುಗಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಬಿರಾದಾರ, ವಾಡಿ ಶಕ್ತಿಕೇಂದ್ರದ ಅಧ್ಯಕ್ಷ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ಮಹಿಳಾ ಮೋರ್ಚಾ ಜಿಲ್ಲಾ ಸಹಕಾರ್ಯದರ್ಶಿ ನಿವೇದಿತಾ ದಹಿಹಂಡೆ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ನಾಮದೇವ ಕರಾರಿ, ಜಿಲ್ಲಾ ಮುಖಂಡರಾದ ಜ್ಯೋತಿ ಶರ್ಮಾ, ಕವಿತಾ ಚವ್ಹಾಣ, ವಿಠ್ಠಲ ಜಾಧವ, ಬಸವರಾಜ ಬೆಣ್ಣೂರ, ಅರವಿಂದ ಚವ್ಹಾಣ, ಪೋಮು ರಾಠೋಡ, ನಾಗಣ್ಣ ಪೊಲೀಸ್ ಪಾಟೀಲ, ಮಲ್ಲಣ್ಣಗೌಡ ಪಾಟೀಲ, ಡಾ.ಗುಂಡಣ್ಣ ಬಾಳಿ, ಶಿವರಾಮ ಪವಾರ, ಸಿದ್ದಣ್ಣ ಕಲಶೆಟ್ಟಿ, ಶಿವುಕುಮಾರ ಸುಣಗಾರ, ಭೀಮಶಾ ಜಿರೊಳ್ಳಿ, ದೇವಿಂದ್ರ ಕರದಳ್ಳಿ, ಬಸವರಾಜ ಕೀರಣಗಿ, ರಮೇಶ ಕಾರಬಾರಿ, ಶ್ರವಣಕುಮಾರ ಮೊಸಲಗಿ, ಶ್ರೀಶೈಲ ನಾಟೀಕಾರ, ಶ್ರೀಕಾಂತ ಚವ್ಹಾಣ, ರಾಮದಾಸ ಚವ್ಹಾಣ ಸೇರಿದಂತೆ ಬೆಜಿಪಿ ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು. ಸಿದ್ಧಯ್ಯಶಾಸ್ತ್ರೀ ನಿರೂಪಿಸಿದರು. ಲೋಕೇಶ ರಾಠೋಡ ವಂದಿಸಿದರು. ಇದಕ್ಕೂ ಮೊದಲು ಸಾಮೂಹಿಕವಾಗಿ ಮೌನ ಆಚಾರಿಸುವ ಮೂಲಕ ಅಗಲಿದ ನಾಯಕನ ಆತ್ಮಕ್ಕೆ ಶಾಂತಿ ಕೋರಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago