ಮಹಾಪುರುಷರ ಕೊಡುಗೆ ಅಪಾರ: ನ್ಯಾಯವಾದಿಗಳಾದ ಸತೀಶ ಅಳ್ಳೊಳ್ಳಿ

0
79

ಕಲಬುರಗಿ: ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನರಾಂರವರು ಕೇವಲ ಹಸಿರುಕ್ರಾಂತಿಯ ಹರಿಕಾರರಾಗಿರಲಿಲ್ಲ. ದೇಶ ರಕ್ಷಣೆಗೆ ಬಾಬಾಸಾಹೇಬ್ ಡಾ. ಬಿ.ಅರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು ಎಂದು ಖ್ಯಾತ ನ್ಯಾಯವಾದಿ ಸತೀಶ ಅಳ್ಳೊಳ್ಳಿ ಹೇಳಿದರು.

ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯುತ್ಸವ ಅಂಗವಾಗಿ ಹಮ್ನಿಕೊಂಡಿದ್ದ ವಿಚಾರ ಕ್ರಾಂತಿ ಸಪ್ತಾಹದಲ್ಲಿ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಫ್ಲಿಪ್ ಕಾರ್ಟ್ ಮತ್ತು ಮಹೀಂದ್ರ ಲಾಜಿಸ್ಟಿಕ್ಸ್ ನ ಇಡಿಇಎಲ್ ಜತೆ ಒಪ್ಪಂದ

ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಆರಂಭವಾದಾಗಿನಿಂದಲೂ ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸಿದ ಮಹಾನ್ ಮುತ್ಸದಿ. ಜವಾಹರ್‍ಲಾಲ್‍ನೆಹರು, ಇಂದಿರಾಗಾಂಧಿರವರ ಜೊತೆ ಒಡನಾಡಿಯಾಗಿದ್ದ ಡಾ.ಬಾಬುಜಗಜೀವನರಾಂರವರು 1972 ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಯುದ್ದ ನಡೆಸಿದಾಗ ಇಂದಿರಾಗಾಂಧಿರವರ ಸಾರಥಿಯಾಗಿ ದೇಶ ರಕ್ಷಣೆಗೆ ಮುಂದಾಗಿದ್ದನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕೆಂದರು.

ವೇದಿಕೆ ಮೇಲೆ ಮುಖ್ಯ ಅತಿಥಿಯಾಗಿ ಸಂತೋಷ ಹಾದಿಮನಿ, ಉಪನ್ಯಾಸಕ ಮಹೇಶ ಇಟಗಿ ಇದ್ದರು. ಪ್ರಾಸ್ತಾವಿಕವಾಗಿ ಮಂಜುನಾಥ ನಾಲವಾರಕರ್ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here