ಬಿಸಿ ಬಿಸಿ ಸುದ್ದಿ

ಸಚಿವ ಯೋಗೇಶ್ವರ ಐತಿಹಾಸಿಕ ಜಾಮೀಯಾ ಮಸೀದಿಗೆ ಭೇಟಿ: ಶೀಘ್ರವೇ ಸ್ವಚ್ಛತಾ ಕಾರ್ಯ ಸೂಚನೆ

ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕಲಬುರಗಿ ಕೋಟೆ ಪ್ರದೇಶವನ್ನು ಶೀಘ್ರವೇ ಸ್ವಚ್ಛಗೊಳಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ರಾಜ್ಯದ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಇಲ್ಲಿನ ಕೋಟೆಗೆ ಭೇಟಿ ನೀಡಿ ಮಾತನಾಡಿದ ಅವರು, ಕಲಬುರಗಿ ಕೋಟೆಯಲ್ಲಿರುವ ಮುಳ್ಳುಕಂಟಿ, ಕಸ-ಕಡ್ಡಿಗಳನ್ನು ಶುಚಿಗೊಳಿಸಿ. ಪ್ರವಾಸಿ ತಾಣವಾಗಿಸುವ ಮೂಲಕ ಜಿಲ್ಲೆಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.

ಕೋಟೆಯೊಳಗಿನ ಪ್ರದೇಶ ೭೪.೧೦ ಎಕರೆ ವಿಸ್ತೀರ್ಣದಲ್ಲಿ ಇದ್ದು, ಸ್ವಚ್ಛತಾ ಕಾರ್ಯದ ಮೂಲಕ ಐತಿಹಾಸಿಕ ಪ್ರದೇಶವಾದ ಕಲಬುರಗಿಗೆ ದೇಶ-ವಿದೇಶದ ಪ್ರವಾಸಿಗರನ್ನು ಕರೆತರುವಂತ ಕೆಲಸ ಮಹಾನಗರ ಪಾಲಿಕೆಯಿಂದ ಆಗಬೇಕು ಎಂದು ಅವರು ಸಲಹೆ ನೀಡಿದರು.

ರಾಜ್ಯದ ಆರು ಕಡೆ ಹೆಲಿಪೋರ್ಟ್ ಸ್ಥಾಪನೆ: ಸಿ.ಪಿ.ಯೋಗೇಶ್ವರ

ಹಂಪಿಯಲ್ಲಿರುವ ಭಾರತೀಯ ಪುರಾತತ್ತ್ವ ಇಲಾಖೆಯ (ಪ್ರಭಾರ) ಅಧೀಕ್ಷಕ ಪುರಾತತ್ತ್ವವಿದರು ಎಂ.ಕಾಳಿಮುತ್ತು ಅವರಿಗೆ ಕರೆ ಮಾಡಿ ಮಾತನಾಡಿದ ಸಚಿವರು ಕೋಟೆಯ ಸ್ವಚ್ಛತೆಗೆ ಅನುಮತಿ ಪಡೆದ ೧೫ ದಿನದೊಳಗೆ  ಕಾರ್ಯಕೈಗೊಳ್ಳಿ ಎಂದರು. ಸ್ವಚ್ಛತೆ ಮಾಡುವ ಸಂದರ್ಭದಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಿ. ೧೫ ದಿನಗಳ ನಂತರ ಮತ್ತೆ ನಗರಕ್ಕೆ ಖುದ್ದಾಗಿ ಬಂದು ಸ್ವಚ್ಛತಾ ಕಾರ್ಯಗಳನ್ನು ಪರಿಶೀಲಿಸುವೆ ಎಂದು ಅವರು ತಿಳಿಸಿದರು.

೧೩೬೭ರಲ್ಲಿ ನಿರ್ಮಿಸಲಾದ ಐತಿಹಾಸಿಕ ಜಾಮೀಯಾ ಮಸೀದಿ ವೀಕ್ಷಿಸಿ, ಅದರ ವಾಸ್ತುಶಿಲ್ಪ ಕಂಡು ಬೆರಗಾದರು. ಬೃಹದಾಕಾರದ ಕಂಬಗಳು, ಗೋಪುರ( ಡೂಮ್) ಮುಂತಾದವುಗಳ ವಾಸ್ತುಶಿಲ್ಪದ ಶೈಲಿಯನ್ನು ಸಚಿವರು  ಕಣ್ತುಂಬಿಕೊಂಡರು. ಇನ್ನು ಸೆಂಟರ್ ಡೂಮ್ ಅಡಿಯಲ್ಲಿ ನಿಂತು ಮಾತನಾಡುವ ಮಾತು ಇಡೀ ಮಸೀದಿಯ ಒಳಾಂಗಣದ ಪರಿಸರದಲ್ಲಿ ಕೇಳುವ ವೈಶಿ?ತೆ ಕರ್ಣಾನಂದ ಉಂಟು ಮಾಡಿತು. ಸ್ವತಃ ಸಚಿವರೇ ೨೧೦ ಮೀಟರ್ ದೂರ ನಿಂತುಕೊಂಡರೂ ಸಹ ಕೇಂದ್ರ ಡೂಮ್‌ನಿಂದ ವ್ಯಕ್ತಿ ಮಾತನಾಡುವಾಗ ಅ? ದೂರದವರೆಗೂ ಸ್ಪ?ವಾಗಿ ಮಾತುಗಳನ್ನು ಕೇಳಿ ಸಚಿವರು ಆಶ್ಚರ್ಯ ಚಕಿತರಾದರು.

ಪ್ರವಾಸೋದ್ಯಮ ಅಭಿವೃದ್ದಿಗಾಗಿ ಹೆಚ್ಚಿನ‌ ಅನುದಾನಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ರ

ಈ ಸಂದರ್ಭದಲ್ಲಿ ಕಲಬುರಗಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಶಂಭುಲಿಂಗ ವಾಣಿ ಅವರು ಕೋಟೆ ಹಾಗೂ ಮಸೀದಿಗಳ ನಿರ್ಮಾಣ ಇನ್ನಿತರ ಐತಿಹಾಸಿಕ ಮಹತ್ವದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ನಂತರ ಆದ? ಬೇಗ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಕೋಟೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿ ಎಂದು ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿ?ತ್ ಸದಸ್ಯ ಬಿ.ಜಿ. ಪಾಟೀಲ್, ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್. ಥಳಕಿ, ಭಾರತೀಯ ಪುರಾತತ್ತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

9 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

9 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

11 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

11 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

11 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

12 hours ago