ಕಲಬುರಗಿ: ಐತಿಹಾಸಿಕ ಸ್ಮಾರಕ ರಕ್ಷಣೆಯ ಜೊತೆಗೆ ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಅಭಿವೃದ್ದಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರಿಗೆ ಮಾಜಿ ಸಚಿವರಾದ, ಶಾಸಕ ಪ್ರಿಯಾಂಕ್ ಖರ್ಗೆ ಪತ್ರ ಬರೆದು ಆಗ್ರಹಿಸಿದ್ದಾರೆ
ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ ಕಲಬುರಗಿ ಜಿಲ್ಲೆ ರಾಷ್ಟ್ರಕೂಟರ ಹಾಗೂ ಬಹಮನಿ ಸುಲ್ತಾನರ ಕಾಲದಿಂದಲೂ ವಾಸ್ತು ಶಿಲ್ಪಕ್ಕೆ ಮಹತ್ವ ನೀಡಿದ್ದು ಕಂಡುಬರುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಅನೇಕ ಇಂಡೋ ಸಾರಾಸೇನಿಕ ಶೈಲಿಯ ಸ್ಮಾರಕಗಳು ಲಭ್ಯವಿದ್ದು ಇಲ್ಲಿನ ಪ್ರವಾಸೋದ್ಯಮದ ಭವ್ಯತೆಗೆ ಹೆಸರುವಾಸಿಯಾಗಿವೆ.
ಕಲಬುರಗಿಯ ಪೇದೆ ಬಲರಾಮ ರಜಪೂತಗೆ ಸಿಎಂ ಪದಕ
ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಮಾರಕ, ಕೋಟೆ ಹಾಗೂ ಭವ್ಯ ಪರಂಪರೆ ಹೊಂದಿರುವ ಪ್ರವಾಸೋದ್ಯಮ ತಾಣಗಳ ರಕ್ಷಣೆಗೆ ಮುಂದಾಗುವಂತೆ ಒತ್ತಾಯಿಸಿರುವ ಶಾಸಕರು ತಾವು ಪ್ರವಾಸೋದ್ಯಮ ಸಚಿವರಾಗಿದ್ದಾಗ ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಅಭಿವೃದ್ದಿಗೊಳಿಸುವ ಉದ್ದೇಶದಿಂದ ಹಲವಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ಮೂಲಭೂತ ಸೌಲಭ್ಯ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡಲು ಸಾಕಷ್ಟು ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಜೊತೆಗೆ 2016-17 ರಿಂದ 2019-20 ರವರೆಗೆ ಹಲವಾರು ಪ್ರಮುಖ ಯೋಜನೆಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದೂ ಕೂಡ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2016-17 ರ ಸಾಲಿನಲ್ಲಿ ಪ್ರಸ್ತಾಪಿಸಲಾಗಿದ್ದ ಸೇಡಂ ತಾಲೂಕಿನ ಮಳಖೇಡ ಕೋಟೆ ಸಂರಕ್ಷಣಾ ಕಾಮಗಾರಿಗೆ ರೂ 6 ಕೋಟಿ ಮಂಜೂರಾಗಿದೆ ಮತ್ತು 2018-19 ರ ಸಾಲಿನಲ್ಲಿ ಕಲಬುರಗಿ ನಗರದ ಕುಸನೂರು ಪ್ರದೇಶದಲ್ಲಿರುವ ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಕಲಾಭವನಕ್ಕೆ ಈಗಾಗಲೇ ರೂ 5 ಕೋಟಿ ಮಂಜೂರಾಗಿದೆ. ಆದರೆ, ಟೆಂಡರ್ ಹಂತದಲ್ಲಿ ಇರುವುದರಿಂದಾಗಿ ಈ ಎರಡು ಪ್ರಮಖ ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ. ಆದ್ದರಿಂದ ಈ ಕುರಿತು ತುರ್ತು ಕ್ರಮ ಜರುಗಿಸಿ ಕಾಮಗಾರಿ ಆರಂಭಿಸುವಂತೆ ಪ್ರಿಯಾಂಕ್ ಖರ್ಗೆ ಅವರು ಸಚಿವರಿಗೆ ಮನವಿ ಮಾಡಿದ್ದಾರೆ.
ಫ್ಲಿಪ್ ಕಾರ್ಟ್ ಮತ್ತು ಮಹೀಂದ್ರ ಲಾಜಿಸ್ಟಿಕ್ಸ್ ನ ಇಡಿಇಎಲ್ ಜತೆ ಒಪ್ಪಂದ
ಪ್ರಸ್ತುತ ಕಲಬುರಗಿ ಜಿಲ್ಲೆಯ ಪ್ರವಾಸದಲ್ಲಿರುವ ತಾವು ಅಧಿಕಾರಿಗಳೊಂದಿಗೆ ಈ ಹಿಂದೆ ಪ್ರಸ್ತಾಪಿಸಲಾದ ಕಾಮಗಾರಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿ ಎಂದು ಒತ್ತಾಯಿಸಿರುವ ಶಾಸಕರು ಕಲ್ಯಾಣ ಕರ್ನಾಟಕ ಭಾಗದ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ದಿಗೆ ಒತ್ತುನೀಡಲು ಸಲಹಾ ಸಮಿತಿಯನ್ನು ಪುನಾರಚನೆ ಮಾಡುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
2020-21 ರ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಜಿಲ್ಲೆಗೆ ಯಾವುದೇ ಕಾಮಗಾರಿಗಳ ಅನುಮೋದನೆಗೊಂಡಿರುವುದಿಲ್ಲ. ಹೀಗಾಗಿ, ಈ ಭಾಗದ ಪ್ರವಾಸಿ ತಾಣಗಳ ಅಭಿವೃದ್ದಿ ಕುಂಠಿತವಾಗಲಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಮೂಲಕ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಇನ್ನೂ ಅನುಮೋದನೆಯಾಗದಿರುವ ಕಾಮಗಾರಿಗಳನ್ನು ಅನುಮೋದನೆಗೊಳಿಸುವುದು ಹಾಗೂ ಈಗಾಗಲೇ ಅನುಮೋದನೆಗೊಂಡು ಅನುದಾನದ ಕೊರತೆಯಿಂದ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಅನುದಾನ ದೊರಕಿಸಿ ಪ್ರವಾಸೋದ್ಯಮ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ಅವರು ಸಚಿವರಿಗೆ ಕೋರಿದ್ದಾರೆ.