ಬೆಂಗಳೂರು: ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಲಿಮಿಟೆಡ್ (“ಮ್ಯಾಕ್ಸ್ ಲೈಫ್’’/ ಕಂಪನಿ) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2021 ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದೊಂದಿಗೆ ಪಾಲುದಾರಿಕೆಯನ್ನು ಘೋಷಣೆ ಮಾಡಿದೆ.
ಸತತ ಮೂರನೇ ವರ್ಷ ಈ ಪಾಲುದಾರಿಕೆಯನ್ನು ಹೊಂದುತ್ತಿರುವ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡಕ್ಕೆ ಅಧಿಕೃತ ಲೈಫ್ ಇನ್ಶೂರೆನ್ಸ್ ಪಾಲುದಾರ ಸಂಸ್ಥೆಯಾಗಿದೆ.ಇದರ ಅಂಗವಾಗಿ ತಂಡದ ಸದಸ್ಯರ ನಾನ್-ಲೀಡಿಂಗ್ ಟ್ರೌಸರ್ ಲೆಗ್ ನಲ್ಲಿ ಸಂಸ್ಥೆಯ ಲೋಗೋ ಇರಲಿದೆ. ಪ್ರಸಕ್ತಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಪಂದ್ಯ 9 ಏಪ್ರಿಲ್ 2021 ರಂದು ಚೆನ್ನೈನಲ್ಲಿ ನಿಗದಿಯಾಗಿದೆ.
ಈ ಪಾಲುದಾರಿಕೆಯ ಮೂಲಕ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಆರ್ ಸಿಬಿ ಆಟಗಾರರನ್ನು `ರಕ್ಷಣಾತ್ಮಕವಾಗಿ’ ಆಟವಾಡುವಂತೆ ಪ್ರೇರೇಪಣೆ ಮಾಡುವುದಷ್ಟೇ ಅಲ್ಲದೇ ಟರ್ಮ್ ಲೈಫ್ ಇನ್ಶೂರೆನ್ಸ್ ಅನ್ನು ಮಾಡಿಸಿಕೊಂಡುತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತೆ ಆಟಗಾರರ ಅಭಿಮಾನಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನುಹೊಂದಿದೆ.
ಜಿಪಂ ಕ್ಷೇತ್ರ ವಿಂಗಡಣೆಗೆ ಭಾರಿ ವಿರೋಧ: ಅವಕಾಶ ನೀಡದಿದ್ದರೆ ಕೋರ್ಟ್ ಮೊರೆ
ಈ ಪಾಲುದಾರಿಕೆಯು `ನೀವು ವಿಭಿನ್ನರು’ ಎಂಬ ಕಂಪನಿಯ ನಂಬಿಕೆಯನ್ನು ಪುನರುಚ್ಚಾರ ಮಾಡುತ್ತದೆ.ಈ ತತ್ತ್ವದ ಆಧಾರದ ಮೇಲೆ ನಿಮ್ಮನ್ನು ಪ್ರೀತಿಸುವವರಿಗೆ ಆರ್ಥಿಕವಾಗಿ ರಕ್ಷಣೆ ನೀಡುವ ಮೂಲಕ ಅವರುಉತ್ತಮ ಜೀವನವನ್ನು ಸಾಗಿಸುವಂತೆ ಮಾಡಲು ಲೈಫ್ ಇನ್ಶೂರೆನ್ಸ್ ನಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನನೀಡಲಿದೆ.
ಈ ಪಾಲುದಾರಿಕೆ ಬಗ್ಗೆ ಮಾತನಾಡಿದ ಮ್ಯಾಕ್ಸ್ ಲೈಫ್ ನ ನಿರ್ದೇಶಕ ಮತ್ತು ಮುಖ್ಯಮಾರುಕಟ್ಟೆ ಅಧಿಕಾರಿ ಅಲೋಕ್ ಭಾನ್ ಅವರು, “ಕೋವಿಡ್-19 ನಿಂದ ಗ್ರಾಹಕರ ಭಾವನಾತ್ಮಕ ವಿಚಾರಗಳ ಮೇಲೆಗಂಭೀರ ಪರಿಣಾಮ ಬೀರಿದೆ. ಆದರೆ, ಕ್ರಿಕೆಟ್ ಮತ್ತು ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ದೇಶವನ್ನುಧನಾತ್ಮಕ ರೀತಿಯಲ್ಲಿ ಬೆಸೆಯುವ ಕೆಲಸ ಮಾಡುತ್ತಿವೆ.
ಈ ದಿಸೆಯಲ್ಲಿ ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಸತತ ಮೂರನೇ ವರ್ಷ ಅಧಿಕೃತ ಲೈಫ್ ಇನ್ಶೂರೆನ್ಸ್ ಪಾಲುದಾರಿಕೆಯನ್ನು ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಈ ಪಾಲುದಾರಿಕೆ ಮೂಲಕ ತಂಡದ ವೈವಿಧ್ಯತೆ ಮತ್ತು ತಂಡದ ಅಭಿಮಾನಿಗಳು ತಮ್ಮ ಪ್ರೀತಿಪಾತ್ರರಜೀವನವನ್ನು ವಿಭಿನ್ನವಾಗಿ ರೂಪಿಸುವ ಸಂದೇಶವನ್ನು ನೀಡಲಿದ್ದೇವೆ.
ಬೆತ್ತಲೆ ವಿಡಿಯೋ ಹರಿಬಿಟ್ಟ ವಿವಿ ಗ್ರಂಥಾಲಯ ಅಧೀಕ್ಷಕ
ಇದರ ಜತೆಗೆ ಪ್ರಸ್ತುತ ಇರುವ ಆರ್ಥಿಕಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಒಬ್ಬರ ಆರ್ಥಿಕ ಭವಿಷ್ಯವನ್ನು ರೂಪಿಸುವುದು ಅತ್ಯಂತ ಮುಖ್ಯವಾಗಿದೆ.ವಿಶೇಷವಾಗಿ ಟರ್ಮ್ ಇನ್ಶೂರೆನ್ಸ್ ಯೋಜನೆಗಳನ್ನು ಹೊಂದಿರುವುದು ಪ್ರಮುಖವಾಗಿದೆ. ಏಕೆಂದರೆ, ಈ ಯೋಜನೆಗಳುಅಗತ್ಯ ಬಿದ್ದಾಗ ಆದಾಯ ಪ್ರಯೋಜನಗಳನ್ನು ನೀಡುತ್ತವೆ’’ ಎಂದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…