ಜಿಪಂ ಕ್ಷೇತ್ರ ವಿಂಗಡಣೆಗೆ ಭಾರಿ ವಿರೋಧ: ಅವಕಾಶ ನೀಡದಿದ್ದರೆ ಕೋರ್ಟ್ ಮೊರೆ

3
55

ಆಳಂದ: ಜಿಪಂ ಕ್ಷೇತ್ರ ವಿಂಗಡಣೆಯಲ್ಲಿ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ, ರಾಜಕೀಯ ಪ್ರಭಾವದಿಂದಾಗಿ ಅವೈಜ್ಞಾನಿಕ ಮತ್ತು ಜನತೆಗೆ ಅನಾನುಕೂಲ ರೀತಿಯಲ್ಲಿ ಕ್ಷೇತ್ರ ರಚನೆಯಾಗಿದೆ. ಸದ್ಯ ಆಕ್ಷೇಪಣೆಯನ್ನು ನೀಡಿ ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಹೈಕೋರ್ಟ್ ಮೋರೆ ಹೋಗಲಾಗುವುದು ಎಂದು ಕಾಂಗ್ರೆಸ್ ಮುಖಂಡ ಶ್ರೀಮಂತ ವಗ್ಧರ್ಗಿ ಹೇಳಿದರು.

ನಿಂಬರ್ಗಾ ಜಿಪಂ ಕ್ಷೇತ್ರ ರದ್ದುಗೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕರೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಜನಸಂಖ್ಯೆ ಆಧಾರದ ಮೇಲೆ ಜಿಪಂ ಮರು ವಿಂಗಡಣೆ ಮಾಡುತ್ತಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ನಿಂಬರ್ಗಾ ಜಿಪಂ ಕ್ಷೇತ್ರ 1986 ನೇ ಅವಧಿಯಿಂದ ಕೇಂದ್ರ ಸ್ಥಾನವಾಗಿ ಬಂದಿದೆ. ನಿಂಬರ್ಗಾ 17,000 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಅಲ್ಲದೆ 8,000 ಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ತಾಲ್ಲೂಕಿನ ನಿಂಬರ್ಗಾ ಇತಿಹಾಸವುಳ್ಳ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಅಲ್ಲದೆ ಸುತ್ತ-ಮುತ್ತಲಿನ 25 ಗ್ರಾಮಗಳ ಜನರು ನಿಂಬರ್ಗಾ ಗ್ರಾಮವನ್ನು ಅವಲಂಬಿಸಿದ್ದಾರೆ. ನಿಂಬರ್ಗಾ ಜಿಪಂ ಕ್ಷೇತ್ರ ಮುಂದುವರೆಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಬಸವರಾಜ ಯಳಸಂಗಿ ಒತ್ತಾಯಿಸಿದ್ದಾರೆ.

ಬೆತ್ತಲೆ ವಿಡಿಯೋ ಹರಿಬಿಟ್ಟ ವಿವಿ ಗ್ರಂಥಾಲಯ ಅಧೀಕ್ಷಕ

ಮುಖಂಡ ಅಮೃತ ಬಿಬ್ರಾಣಿ, ಪರಮೇಶ್ವರ್ ಶಿವಗೊಂಡ, ವಿಠ್ಠಲ್ ಕೋಣೆಕರ, ಮೋಹನ್ ನಿರ್ಮಲ್ಕರ್, ಈರಣ್ಣ ನಾಗಶೆಟ್ಟಿ, ಶ್ರೀಶೈಲ ಮಾ.ಪಾಟೀಲ್, ಗುರು ಕಾಮಣಗೊಳ್, ಶಿವಪುತ್ರ ಮಾಳಗಿ, ಮಲ್ಲಿನಾಥ ಒಡೆಯರ್, ಮಹಿಬೂಬ್ ಆಳಂದ, ರವಿಕುಮಾರ್ ಯಳಸಂಗಿ, ಸಾತಣ್ಣ ಮಂಟಗಿ, ರಾಜು ಚವ್ಹಾಣ್,ಮಲ್ಲಿನಾಥ ನಾಟಿಕಾರ, ಸಾಯಬಣ್ಣ ಖರ್ಚನ್,ದತ್ತಾ ದುರ್ಗದ, ರಾಜು ಶಿಂಗೆ, ಚಂದ್ರಕಾಂತ ಮಠಪತಿ,ಶಾಂತಕುಮಾರ ಯಳಸಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here