ಬಿಸಿ ಬಿಸಿ ಸುದ್ದಿ

ಬಡಮಕ್ಕಳಿಗೆ ಹಣ್ಣು, ಪ್ಯಾಡ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಣೆ

ಭಾಲ್ಕಿ: ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯಸನ್ನಿಧಾನದಲ್ಲಿ ಹಾಗೂ ಶ್ರೀಮಠದ ಪ್ರಸಾದ ನಿಲಯದ ಮಕ್ಕಳ ಉಪಸ್ಥಿತಿಯಲ್ಲಿ ದೆಹಲಿಯ ಶರಣ ವೈಜಿನಾಥ ಬಿರಾದಾರ ಅವರು ೭೧ ನೆಯ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಸಾನಿಧ್ಯವಹಿಸಿದ ಪೂಜ್ಯರು ಶರಣ ವೈಜಿನಾಥ ಬಿರಾದಾರ ಅವರು ಶ್ರೀಮಠದ ಪ್ರಸಾದ ನಿಲಯದಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡಿದವರು.

ಇವರು ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ಅಪ್ಪಟ ಶಿಷ್ಯರಾಗಿದ್ದಾರೆ. ಮೊಟ್ಟಮೊದಲಿಗೆ ಪೂಜ್ಯರನ್ನು ದೆಹಲಿಗೆ ಕರೆಯಿಸಿ ಅಂದಿನ ರಾಷ್ಟ್ರಪತಿಗಳಾದ ಗ್ಯಾನಿ ಜೈಲ್‌ಸಿಂಗ್ ಅವರಿಂದ ಸನ್ಮಾನಿಸಿದ ಶ್ರೇಯಸ್ಸು ಇವರು ಸಲ್ಲುತ್ತದೆ. ಇವರು ಬಡತನ ಕುಟುಂಬದಿಂದ ಮೇಲೆ ಬಂದಿದವರು. ಶ್ರೀಮಂತಿಗೆ ಬಂದರೂ ಎಂದೂ ಇವರ ಹತ್ತಿರ ಅಹಂ ಸುಳಿಯಲಿಲ್ಲ. ಕಲ್ಯಾಣ ಕರ್ನಾಟಕದ ಭಾಗದ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿ ಅವರ ಜೀವನಕ್ಕೆ ದಾರಿದೀಪವಾಗಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕರು ಪಾಠ ಮಾಡಬೇಕು: ಶಿವಶರಣಪ್ಪ ಮೂಳೆಗಾಂವ

ಇವರು ನಿವೃತ್ತರಾದರೂ ಸದಾ ಉತ್ಸಾಹಿಗಳಾಗಿದ್ದಾರೆ. ಇವರ ಹುಟ್ಟುಹಬ್ಬದ ನಿಮಿತ್ಯವಾಗಿ ಪ್ರಸಾದ ನಿಲಯದ ಮಕ್ಕಳಿಗೆ ಪ್ಯಾಡ್ ಮತ್ತು ಹಣ್ಣುಗಳನ್ನು ವಿತರಿಸಿರುವುದು ಬಡಮಕ್ಕಳ ಮೇಲಿರುವ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಇವರ ಬಸವಗುರುವಿನ ಶ್ರೀರಕ್ಷೆ ಸದಾ ಇದ್ದು, ಅವರಿಗೆ ಆಯುಷ್ಯ ಆರೋಗ್ಯ ನೀಡಿ ಕಾಪಾಡಲೆಂದು ಶುಭ ಹಾರೈಸಿದರು.

ಶ್ರೀಮಠದಿಂದ ಸನ್ಮಾನ ಸ್ವೀಕರಿಸಿ ಆಶೀರ್ವಾದ ಪಡೆದ ಶರಣ ವೈಜಿನಾಥ ಬಿರಾದಾರ ಅವರು ಈ ಸಂದರ್ಭದಲ್ಲಿ ಅತ್ಯಂತ ಭಾವನಾತ್ಮಕವಾದ ಮಾತುಗಳನ್ನು ಆಡಿದರು. ಬಾಲ್ಯದ ನೆನಪುಗಳನ್ನು ನೆನಪಿಸುತ್ತ ಶ್ರೀಗುರುವಿನ ಕೃಪೆಯಿಂದಲೇ ಅಸಾಧ್ಯ ಸಾಧ್ಯವಾಗುತ್ತದೆ ಎನ್ನಲಿಕ್ಕೆ ನನ್ನ ಜೀವನವೇ ಸಾಕ್ಷಿಯಾಗಿದೆ. ಎಲ್ಲ ವಿದ್ಯಾರ್ಥಿಗಳನ್ನು ಗುರುವಿನ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟು ಪ್ರಯತ್ನಶೀಲರಾದರೇ ನೀವು ಬೇಕಾದದ್ದನ್ನು ಸಾಧಿಸಬಹುದು. ನಾವಿರುವ ಸಮಯದಲ್ಲಿ ಶ್ರೀಮಠದಲ್ಲಿ ಅತ್ಯಂತ ಬಡತನವಿತ್ತು.

ಕಲಬುರಗಿ: ಜಿಲ್ಲಾ ಪಂಚಾಯತ್ ಕ್ಷೇತ್ರ ರದ್ದು ಖಂಡಿಸಿ ಪ್ರತಿಭಟನೆ

ಆದರೆ ಪೂಜ್ಯರು ಇಂದು ನಿಮಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಅದರ ಸದುಪಯೋಗವನ್ನು ಪಡೆದುಕೊಂಡು ಉನ್ನತ ಮಟ್ಟದ ಗುರಿಯನ್ನು ಸಾಧಿಸುವ ಮೂಲಕ ಹೆತ್ತ ತಂದೆ-ತಾಯಿಗೂ ಹಾಗೂ ಶ್ರೀಮಠಕ್ಕೆ ಕೀರ್ತಿ ತರುವಂತಹರಾಗಬೇಕೆಂದು ಮಕ್ಕಳಿಗೆ ಹಿತನುಡಿಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಾಜಿ ಕಾಲೇಜಿನ ಪ್ರಾಚಾರ್ಯರಾದ ಶರಣ ಚಂದ್ರಕಾಂತ ಬಿರಾದಾರ ಅವರು ಶರಣ ವೈಜಿನಾಥ ಬಿರಾದಾರ ಅವರ ಕುರಿತು ಮಾತುಗಳನ್ನಾಡಿದರು. ಗಣಪತಿ ಬೋಚರೆ, ಅಶೋಕ ಮೈನ್ನಳ್ಳೆ, ಬಿ.ಎನ್.ಸೊಲಾಪೂರೆ, ಗಿರೀಶ ರಿಕ್ಕೆ, ಕಾಕನಾಳೆ ಹಾಗೂ ಬಿರಾದಾರ ಪರಿವಾರದವರು ಉಪಸ್ಥಿತರಿದ್ದರು. ಬಾಬು ಬೆಲ್ದಾಳ ನಿರೂಪಿಸಿದರು. ಶ್ರೀಮಠದ ಮಕ್ಕಳಿಂದ ವಚನ ಸಂಗೀತ ನಡೆಯಿತು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

17 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago