ಕಲಬುರಗಿ: ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ನಿಂಬರ್ಗಾ ಕ್ಷೇತ್ರವನ್ನು ಕೈಬಿಟ್ಟಿರುವುದು ಅವೈಜ್ಞಾನಿಕ ಕ್ರಮವಾಗಿದ್ದು ಕೂಡಲೇ ಮೊದಲಿನಂತೆ ನಿಂಬರ್ಗಾ ಕ್ಷೇತ್ರವನ್ನೇ ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿ ಮುಂದುವರೆಸಬೇಕೆಂದು ಆಗ್ರಹಿಸಿ ಗ್ರಾಮದ ಬಸ್ ನಿಲ್ದಾಣ ಎದುರು ಗ್ರಾಮಸ್ಥರು ಪಕ್ಷ ಭೇದ ಮರೆತು ಪ್ರತಿಭಟನಾ ಧರಣಿ ನಡೆಸಿದರು.
ನಿಂಬರ್ಗಾ ಹೋಬಳಿ ಕೇಂದ್ರವಾಗಿದ್ದು, 20,000 ಜನಸಂಖ್ಯೆ ಹಾಗೂ 8,000 ಮತದಾರರು ಇದ್ದಾರೆ. ಮೇಲಾಗಿ ಹೋಬಳಿ ಕೇಂದ್ರವಾಗಿದೆ. ಅಲ್ಲದೆ ನೆಮ್ಮದಿ ಕೇಂದ್ರ ಬ್ಯಾಂಕ್ ಶಾಖೆ,ಶಾಲಾ ಕಾಲೇಜು, ರೈತ ಸಂಪರ್ಕ ಕೇಂದ್ರ, ಜೇಸ್ಕಾಂ, ಸಮುದಾಯ ಆರೋಗ್ಯ ಕೇಂದ್ರ, ಐಟಿಐ,ಪಶು ಆಸ್ಪತ್ರೆ,ನೀರಾವರಿ ಯೋಜನೆ ಕಚೇರಿ ಸೇರಿದಂತೆ ಅನೇಕ ಸವಲತ್ತು ಇರುವ ಹಾಗೂ ಸುತ್ತ ಮುತ್ತಲಿನ 25 ಗ್ರಾಮಗಳು ನಿಂಬರ್ಗಾ ವನ್ನು ಅವಲಂಬಿಸಿವೆ. ಹೀಗಿರುವಾಗ ನಿಂಬರ್ಗಾ ಜಿಲ್ಲಾ ಪಂಚಾಯತ್ ಕೇಂದ್ರ ಸ್ಥಾನ ರದ್ದುಗೊಳಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಶಹಾಬಾದ: ಸರ್ಕಾರಿ ಸಂಚಾರ ಸಂಪೂರ್ಣ ಬಂದ್
ಕಾಂಗ್ರೆಸ್ ಮುಖಂಡ ಶ್ರೀಮಂತ ವಗ್ಧರ್ಗಿ, ವಿಠ್ಠಲ್ ಕೋಣೆಕರ್, ಮಹಾಂತೇಶ ಸಣ್ಣಮನಿ, ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಯಳಸಂಗಿ, ಭಿಮಾಶಂಕರ ಪಾಟೀಲ್ ಮಾತನಾಡಿ, ಜಿಲ್ಲಾ ಪಂಚಾಯತ್ ಕ್ಷೇತ್ರ ರದ್ದು ಪಡಿಸಿ ಬೇರೆಡೆ ವರ್ಗಾಯಿಸಿರುವುದು ಸರಿಯಲ್ಲ, ಆಕ್ಷೇಪಣೆಗೆ ಅವಕಾಶ ನೀಡಿ ಕ್ಷೇತ್ರ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಕ್ಷೇತ್ರ ಕೈಬಿಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಭರವಸೆ ನೀಡುವವರೆಗೂ ಧರಣಿ ಕೈಬಿಡುವುದಿಲ್ಲವೆಂದು ಎಚ್ಚರಿಸಿದರು.
ಸಂತ್ರಸ್ಥ ಪರಿಹಾರ ಯೋಜನೆಯಡಿ 1,70,85,000 ರೂ.ಗಳ ಪರಿಹಾರ ವಿತರಣೆ
ಸ್ಥಳಕ್ಕೆ ತಹಶೀಲ್ದಾರ್ ಯಲ್ಲಪ್ಪ ಸುಭೇದಾರ ಭೇಟಿ ನೀಡಿ, ಜನಸಂಖ್ಯೆ ಹಾಗೂ ಭೌಗೋಳಿಕ ಆಧಾರದ ಮೇಲೆ ಕಡಗಂಚಿಗೆ ಕ್ಷೇತ್ರ ವಿಂಗಡನೆ ಆಗಿದೆ. ನಿಂಬರ್ಗಾ ಕ್ಷೇತ್ರ ಮುಂದುವರೆಸುವ ಕುರಿತು ಈಗಾಗಲೇ ಪತ್ರ ಬರೆದಿದ್ದು, ಇನ್ನೊಮ್ಮೆ ತಮ್ಮ ಬೇಡಿಕೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿ, ಕ್ಷೇತ್ರ ಮುಂದುವರಿಯಲು ಪ್ರಯತ್ನಿಸಲಾಗುವುದು ಎಂದು ಮನವಿ ಮಾಡಿದರು.
ಗ್ರಾಮದ ಗದ್ದಿಗೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು, ಶ್ರೀ ವಿರಕ್ತ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ, ಅಮೃತ ಬಿಬ್ರಾಣಿ, ಮೋಹನ್ ನಿರ್ಮಲ್ಕ್ ರ್, ಪರಮೇಶ್ವರ ಶಿವಗೊಂಡ, ಮಹಿಬೂಬ್ ಆಳಂದ, ಸಾತಣ್ಣ ಮಂಟಗಿ, ಗುರು ಕಾಮಣಗೊಳ್, ರಾಜು ಚವ್ಹಾಣ್, ಚಂದ್ರಕಾಂತ ಮಠಪತಿ, ರಾಜು ಶಿಂಗೆ, ಶ್ರೀಶೈಲ ಮಾಲಿಪಾಟಿಲ್, ಚಂದ್ರಕಾಂತ ಅವಟೆ,ಶಾಂತಕುಮಾರ ಯಳಸಂಗಿ, ನಿಂಗರಾಜ್ ದುಗೊಂಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.