ಅಂಕಣ ಬರಹ

ಬಿಜೆಪಿ ನಾಯಕನಿಗೆ ‘ನಾಡೋಜ’ ಪ್ರಶಸ್ತಿಯೂ..! ವಿವಾದಕ್ಕೀಡಾಯಿತು ಹಂಪಿ ವಿಶ್ವವಿದ್ಯಾಲಯದ ನಡೆಯೂ.!!

ಹಂಪಿ ಕನ್ನಡ ವಿಶ್ವವಿದ್ಯಾನಿಲಯ ತನ್ನ ಘಟಿಕೋತ್ಸವದ ಅಂಗವಾಗಿ ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಈ ಬಾರಿ ಸಕ್ಕರೆ ಉದ್ಯಮಿ ಜಗದೀಶ್ ಎಸ್ ಗುಡಗುಂಟಿ ಮತ್ತು ಕಣ್ಣಿನ ಡಾಕ್ಟರ್ ಡಾ ಕೆ ಕೃಷ್ಣಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ನುಡಿ ಮತ್ತು ನಾಡನ್ನು ಸಾಂಸ್ಕೃತಿಕವಾಗಿ ಕಟ್ಟುವ ಮಹತ್ತರ ಉದ್ದೇಶದಿಂದ ದಶಕಗಳ ಹಿಂದೆ ಆರಂಭವಾದ ಹಂಪಿಯ ಕನ್ನಡ ವಿವಿ, ಆರಂಭದ ಕೆಲವು ವರ್ಷಗಳವರೆಗೆ ಬಹುತೇಕ ಕನ್ನಡ ಸಾಹಿತ್ಯ, ನಾಡಿನ ಚರಿತ್ರೆ, ಜಾನಪದ, ಸಮಾಜ ಮುಂತಾದ ವಿವಿಧ ರಂಗಗಳ ಕುರಿತ ಕಣ್ತೆರೆಸುವ ಅಧ್ಯಯನಗಳ ಮೂಲಕ ನಿಜವಾಗಿಯೂ ಅದರ ಉದ್ದೇಶಕ್ಕೆ ಅನುಗುಣವಾಗಿಯೇ ಸಕ್ರಿಯವಾಗಿತ್ತು. ಎಲ್ಲಾ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ನುಸುಳುವ ಜಡ್ಡುಗಟ್ಟಿದ ಸ್ಥಿತಿ, ಯಾಂತ್ರಿಕ ವರಸೆ ಮತ್ತು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಬಾಲಬಡುಕತನಗಳು ಅಲ್ಲಿಯೂ ಕ್ರಮೇಣ ತಲೆದೋರಿದವು. ಪರಿಣಾಮವಾಗಿ ರಾಜ್ಯದ ಹತ್ತು ಹಲವು ವಿಶ್ವವಿದ್ಯಾಲಯಗಳ ಸಾಲಿಗೆ ಅದೂ ಸೇರಿಹೋಯಿತು.

ಫ್ಲಿಪ್ ಕಾರ್ಟ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗ

ಆ ನಡುವೆಯೂ ತೀರಾ ಇತ್ತೀಚಿನವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೆಲವಾದರೂ ಮಂದಿ ಅಲ್ಲಿ ಇತರ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಮಟ್ಟಿನ ಅಕ್ರಮ, ಅವಿವೇಕಿತನಗಳು ನಡೆಯದಂತೆ ತಡೆಗೋಡೆಗಳಾಗಿದ್ದರು. ಹಾಗೇ ಆ ವಿಶ್ವವಿದ್ಯಾಲಯದ ತನ್ನ ಘಟಿಕೋತ್ಸವದ ನಿಮಿತ್ತ ಕೊಡಮಾಡುವ ‘ನಾಡೋಜ’ ಪುರಸ್ಕಾರಕ್ಕೆ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಕೂಡ ಒಂದು ಘನತೆ ಇತ್ತು. ಒಂದಿಷ್ಟು ನಿಜವಾಗಿಯೂ ಅರ್ಹರನ್ನು ಆ ಪುರಸ್ಕಾರಕ್ಕೆ ಆಯ್ಕೆ ಮಾಡುತ್ತಿದುದೇ ಅಂತಹ ಆ ಘನತೆಗೆ ಕಾರಣವಾಗಿತ್ತು.

ಆದರೆ, ಈ ಬಾರಿಯ ನಾಡೋಜಾ ಪುರಸ್ಕಾರದ ಆಯ್ಕೆಯ ವಿಷಯದಲ್ಲಿ ದೊಡ್ಡ ಮಟ್ಟದ ಅಪಸ್ವರ ಎದ್ದಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ವಿಶ್ವವಿದ್ಯಾಲಯ ತನ್ನ ಪ್ರತಿಷ್ಠಿತ ‘ನಾಡೋಜ’ ಪುರಸ್ಕಾರದ ಆಯ್ಕೆಯಲ್ಲಿ ನಿರಂತರವಾಗಿ ಎಡವುತ್ತಲೇ ಇದೆ.

ರಸಗೊಬ್ಬರ ಬೆಲೆ ಏರಿಕೆ ಕನ್ನಡ ಭೂಮಿ ಖಂಡನೆ

ಆಕಾಶವಾಣಿ ನಿರ್ದೇಶಕರು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ವೈದ್ಯರು ಮುಂತಾದ ವೃತ್ತಿಪರರು ಮತ್ತು ಸಾಹಿತ್ಯ, ಕಲೆ, ಸಾಮಾಜಿಕ ವಲಯದಲ್ಲಿ ಯಾವುದೇ ಮಹತ್ತರ ಕೊಡುಗೆ ನೀಡದೇ ಇರುವವರನ್ನು ಕುವೆಂಪು, ಕಾರಂತರು, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಡಾ ರಾಜ್ ಕುಮಾರ್, ಗಾಯಯೋಗಿ ಪುಟ್ಟರಾಜ ಗವಾಯಿ, ಸಿರಿಯಜ್ಜಿ, ಸುಕ್ರಿ ಬೊಮ್ಮನಗೌಡ, ಯು ಆರ್ ಅನಂತಮೂರ್ತಿ, ಎಸ್ ಎಲ್ ಭೈರಪ್ಪ, ಪು ತಿ ನರಸಿಂಹಾಚಾರ್, ಪ್ರೊ ಎಲ್ ಬಸವರಾಜು, ಎಂ ಚಿದಾನಂದಮೂರ್ತಿ ಮುಂತಾದ ಮೇರು ವ್ಯಕ್ತಿತ್ವಗಳ ಸಾಲಿನಲ್ಲಿ ಕೂರಿಸುವ ಯತ್ನಗಳು ವಿಶ್ವವಿದ್ಯಾಲಯ ಕಡೆಯಿಂದ ನಡೆದಿವೆ.

ಅಧಿಕಾರಿಗಳಾಗಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದವರು, ನೇಮಕಾತಿ ಭ್ರಷ್ಟಾಚಾರ ಎಸಗಿ ತನಿಖೆ ಎದುರಿಸಿದವರು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಾಗಿ ಸ್ವಜನಪಕ್ಷಪಾತ, ಹಣಕಾಸು ಅವ್ಯವಹಾರ ಮುಂತಾದ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದವರು ಮತ್ತು ಅಂತಹ ಕಾರಣಗಳಿಗಾಗಿ ಸ್ವತಃ ಅವರವರ ಕ್ಷೇತ್ರದಲ್ಲೇ ಛೀಮಾರಿಗೆ ಒಳಗಾದವರಿಗೆ ನಾಡೋಜದಂತಹ ಕನ್ನಡ ನಾಡಿನ ಅತ್ಯುನ್ನತ ಗೌರವ ನೀಡುವುದು ವಿಶ್ವವಿದ್ಯಾಲಯ ತಲುಪಿರುವ ನಾಚಿಕೆಗೇಡಿನ ಸ್ಥಿತಿಗೆ ಒಂದು ನಿದರ್ಶನ ಎಂಬ ಟೀಕೆಗಳು ಇತ್ತೀಚಿನ ಆಯ್ಕೆಗಳ ವೇಳೆ ಕೇಳಿಬಂದಿದ್ದವು.

ರಸಗೊಬ್ಬರ ಬೆಲೆ ಏರಿಕೆ ದೇಶ ವಿನಾಶದ ಕೃತ್ಯ: ಸಿದ್ದರಾಮಯ್ಯ

ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿಶ್ವವಿದ್ಯಾಲಯ, ಈ ಬಾರಿ ಪಕ್ಕಾ ಬಿಜೆಪಿಯ ನಾಯಕರೂ ಮತ್ತು ಉದ್ಯಮಿಯೂ ಆಗಿರುವ ಜಗದೀಶ್ ಎಸ್ ಗುಡಗುಂಟಿ ಅವರನ್ನು ಆಯ್ಕೆಮಾಡುವ ಮೂಲಕ ಪುರಸ್ಕಾರ ಘೋಷಣೆಯ ಹಿಂದೆ ಆಳುವ ಪಕ್ಷದ ಆಣತಿ ಪಾಲನೆಯ ಅನಿವಾರ್ಯತೆಗೆ ಒಳಗಾಗಿರುವುದನ್ನು ಜಗಜ್ಜಾಹೀರುಮಾಡಿದೆ. ಈ ಆಯ್ಕೆಯ ಮಾನದಂಡದ ಬಗ್ಗೆ ಪ್ರಶ್ನಿಸಿದಾಗ, “ಜಗದೀಶ್ ಅವರು ಅನೇಕ ಸಕ್ಕರೆ ಕಾರ್ಖಾನೆಗಳನ್ನು ಪುನರುತ್ಥಾನ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೃಷ್ಣಪ್ರಸಾದ್ ಅವರು ಬುಡಕಟ್ಟು ಜನವಸತಿ ಪ್ರದೇಶದಲ್ಲಿ ನೇತ್ರ ತಪಾಸಣಾ ಶಿಬಿರ ನಡೆಸಿ ಜನರಿಗೆ ನೆರವಾಗಿದ್ದಾರೆ.

ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಯಾರಿಗೆ ಬೇಕಾದರೂ ‘ನಾಡೋಜ’ ಕೊಡಬಹುದು. ಈ ಹಿಂದೆಯೂ ಸಾಹಿತ್ಯ ಹೊರತುಪಡಿಸಿ ಅನ್ಯ ಕ್ಷೇತ್ರದವರಿಗೆ ಕೊಡಲಾಗಿದೆ” ಎಂದು ವಿವಿ ಕುಲಪತಿ ಪ್ರೊ ಸ.ಚಿ.ರಮೇಶ್ ಸಮರ್ಥಿಸಿಕೊಂಡಿದ್ದಾರೆ.

ವಿಜೃಂಭಣೆಯಿಂದ ಅಂಬೇಡ್ಕರ ಜಯಂತಿ ಆಚರಿಸಿ: ಜಿಲ್ಲಾಧಿಕಾರಿ ಡಾ:ರಾಗಪ್ರೀಯ

ಪ್ರಶ್ನೆ ಇರುವುದು ಕನ್ನಡ ಸಾಹಿತಿಗಳಲ್ಲದವರಿಗೇ ‘ನಾಡೋಜ’ ನೀಡಲಾಗಿದೆ ಎಂಬುದಲ್ಲ. ಬದಲಾಗಿ ಆಡಳಿತ ಪಕ್ಷದ ನಾಯಕರೊಬ್ಬರಿಗೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್ ಗೆ ಪ್ರಯತ್ನಿಸಿದವರಿಗೆ ನೀಡಲಾಗಿದೆ. ಸಕ್ಕರೆ ಕಾರ್ಖಾನೆ ಆರಂಭಿಸಿದ್ದರೆ ಅದು ಸಮಾಜಸೇವೆಯಾಗುತ್ತದೆಯೇ ಅಥವಾ ಉದ್ಯಮವಾಗುತ್ತದೆಯೇ? ಉದ್ಯಮವನ್ನು ಸಮಾಜಸೇವೆ ಎನ್ನುವುದಾದರೆ, ರೋಟರಿ, ಲಯನ್ಸ್ ಕ್ಲಬ್ಬುಳಿಗೂ, ಒಂದು ವಿಶ್ವವಿದ್ಯಾಲಯಗೂ ಯಾವ ವ್ಯತ್ಯಾಸ ಉಳಿಯುತ್ತದೆ ಎಂಬುದು.

ಶಿಕ್ಷಣ, ವೈದ್ಯಕೀಯ ರಂಗಗಳಲ್ಲಿ ಕೆಲಸ ಮಾಡಿದವರನ್ನು ಕೂಡ ಸ್ವತಃ ಸಂಸ್ಥೆಗಳ ಮಾಲೀಕರಾಗಿದ್ದರೆ, ಅವರನ್ನು ಸಮಾಜಸೇವಕ ಎನ್ನಲಾಗದು. ಯಾವುದೇ ಚಟುವಟಿಕೆಯನ್ನು ಸೇವೆ ಅಥವಾ ವೃತ್ತಿ ಅಥವಾ ಉದ್ಯಮ ಎಂದು ಪರಿಗಣಿಸುವ ಮೂಲ ಮಾನದಂಡ ಲಾಭಾಂಶದ ಉದ್ದೇಶವಿದೆಯೇ? ಅಥವಾ ಇಲ್ಲವೇ ಎಂಬುದು. ಹಾಗಾಗಿ ಇವತ್ತಿನ ಬಹುತೇಕ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳ ಉದ್ದೇಶವೇ ಲಾಭವಾಗಿರುವುದರಿಂದ, ಅವುಗಳನ್ನು ನಡೆಸುವವರನ್ನು ‘ನಾಡೋಜ’ದಂತಹ ಪುರಸ್ಕಾರಕ್ಕೆ ಪರಿಗಣಿಸುವುದು ತರವಲ್ಲ. ಹಾಗಿರುವಾಗ, ಪಕ್ಖಾ ಉದ್ಯಮಿಗಳು, ಅದರಲ್ಲೂ ಆಡಳಿತ ಪಕ್ಷದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿರುವವರಿಗೆ ‘ನಾಡೋಜ’ ನೀಡಿದ್ದಲ್ಲದೇ, ಅದನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಇಳಿದಿರುವುದು ನಗೆಪಾಟಲಿನ ಸಂಗತಿಯೇ ಸರಿ.

ಈಗಾಗಲೇ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟುಗಳು ಎಷ್ಟು ಬೆಲೆಗೆ ಹರಾಜಾಗುತ್ತಿವೆ ಎಂಬುದು ಜಗಜ್ಜಾಹೀರಾಗಿದೆ. ಇದೀಗ ಹಂಪಿ ವಿಶ್ವವಿದ್ಯಾಲಯ ‘ನಾಡೋಜ’ ಕೂಡ ಆ ಸಾಲಿಗೆ ಸೇರದಿರಲಿ ಎಂಬುದು ಆ ವಿಶ್ವವಿದ್ಯಾಲಯದ ಮೇಲೆ ಈಗಲೂ ಒಂದಿಷ್ಟು ಭರವಸೆ ಇಟ್ಟುಕೊಂಡವರ ನಿರೀಕ್ಷೆ. ಆ ನಿರೀಕ್ಷೆಗೆ ಕಾರಣವೂ ಇದೆ. ಒಂದು; ಆ ವಿಶ್ವವಿದ್ಯಾಲಯದ ಹುಟ್ಟಿದ್ದೇ ಒಂದು ಗುರುತರ ಉದ್ದೇಶದ ಕಾರಣಕ್ಕೆ, ಹಾಗೇ ‘ನಾಡೋಜ’ ಪುರಸ್ಕಾರವನ್ನು ಆರಂಭಿಸಿದ್ದು ಕೂಡ ಅಂತಹದ್ದೇ ಘನ ಆಶಯದೊಂದಿಗೆ. ಈ ಎರಡೂ ಅರ್ಥವಾದವರು ಆ ಗುಡಗುಂಟಿಳಕ್ಕೂ, ವಿಶ್ವವಿದ್ಯಾಲಯಗೂ ಕಳಂಕ ತರಲಾರರು.

# ಕೆ.ಶಿವು..ಲಕ್ಕಣ್ಣವರ

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

16 hours ago