ಸುರಪುರ: ಡಾ:ಬಿ.ಆರ್.ಅಂಬೇಡ್ಕರ ಅಂಬೇಡ್ಕರರು ದೇಶದ ಜನತೆ ಗೌರವಿಸುವಂತ ಮಹಾನ್ ವ್ಯಕ್ತಿಯಾಗಿದ್ದಾರೆ.ಅವರ ಜಯಂತಿಯನ್ನು ಕೋವಿಡ್ ನಿಯಮಗಳ ಪಾಲನೆಯಲ್ಲಿ ವಿಜೃಂಭಣೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಡಾ: ರಾಗಪ್ರೀಯ ಆರ್ ಸಲಹೆ ನೀಡಿದರು.
ನಗರದ ತಹಸೀಲ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ,ಜಿಲ್ಲೆಯಲ್ಲಿ ಜಯಂತಿ ಆಚರಣೆಯ ಅಂಗವಾಗಿ ಪೂರ್ವಭಾವಿ ಸಭೆಯನ್ನು ನಡೆಸಿ ಎಲ್ಲರ ಸಲಹೆ ಸೂಚನೆಗಳನ್ನು ಪಡೆಂiiಲಾಗಿದೆ.ಅದರಂತೆ ಇಲ್ಲಿಯೂ ಎಲ್ಲರು ಒಟ್ಟಾಗಿ ಜಯಂತಿ ಆಚರಿಸುವಂತೆ ತಿಳಿಸಿದರು.
ಕಲಬುರಗಿ: ಅತ್ಯುತ್ತಮ ಡೇಟಾ ಎಂಟ್ರಿ ಆಪರೇಟರ್ ಪ್ರಶಸ್ತಿ ಪ್ರದಾನ
ನಂತರ ತಹಸೀಲ್ದಾರ ಸುಬ್ಬಣ್ಣ ಜಮಖಂಡಿಯವರು ಎಲ್ಲಾ ಸಂಘಟನೆಗಳ ಮುಖಂಡರ ಸಭೆಯನ್ನು ನಡೆಸಿ ಮಾತನಾಡಿ,ತಾವೆಲ್ಲರು ಸಲಹೆ ಸೂಚನೆ ನೀಡಿದಂತೆ ಜಯಂತಿ ಆಚರಿಸೋಣ ಎಂದರು.ಈ ಸಂದರ್ಭದಲ್ಲಿ ಅನೇಕ ಜನ ದಲಿತ ಸಂಘಟನೆಗಳ ಮುಖಂಡರು ಮಾತನಾಡಿ,ಏಪ್ರಿಲ್ ೧೪ ರಂದು ಬೆಳಿಗ್ಗೆ ಡಾ:ಬಾಬಾ ಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ,ನಂತರ ಅಲ್ಲಿಂದ ಭಾವಚಿತ್ರದ ಮೆರವಣಿಗೆ ನಡೆಸಿ ನಂತರ ತಹಸೀಲ್ ಕಚೇರಿ ಬಳಿಯಲ್ಲಿ ಜಯಂತಿ ಆಚರಣೆ ಕಾರ್ಯಕ್ರಮ ನಡೆಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೋವಿಡ್ ಕಾರಣದಿಂದ ಮೆರವಣಿಗೆಯ ಕುರಿತು ಅಪಸ್ವರಗಳು ಕೇಳಿ ಬಂದರು,ನಂತರದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸರಳವಾಗಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು.ಅಲ್ಲದೆ ನಂತರ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ೧೧ ಗಂಟೆಗೆ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಮತ್ತಿತರೆ ಕಾರ್ಯಕ್ರಮಗಳನ್ನು ನಡೆಸುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ,ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ ಹಾಗು ಸಂಘಟನೆಗಳ ಮುಖಂಡರಾದ ಭೀಮರಾಯ ಸಿಂಧಗೇರಿ ಮೂರ್ತಿ ಬೊಮ್ಮನಹಳ್ಳಿ ಶಿವಲಿಂಗ ಹಸನಾಪುರ ತಿಪ್ಪಣ್ಣ ಶೆಳ್ಳಿಗಿ ರಾಮಣ್ಣ ಶೆಳ್ಳಗಿ ಮಲ್ಲು ಕೆಸಿಪಿ ಮಲ್ಲಿಕಾರ್ಜುನ ಮುಷ್ಠಳ್ಳಿ ನಾಗರಾಜ ವಡಗೇರಿ ಮಾನಪ್ಪ ಭಂಡಾರಿ ಮರಿಲಿಂಗ ಹುಣಸಿಹೊಳೆ ಧರ್ಮರಾಜ ಬಡಿಗೇರ ಜೆಟ್ಟೆಪ್ಪ ನಾಗರಾಳ ಮಹೇಶ ಯಾದಗಿರಿ ಹಣಮಂತ ನರಸಿಂಗಪೇಟ ಖಾಜಾಹುಸೇನ ಗುಡಗುಂಟಿ ಸೇರಿದಂತೆ ಅನೇಕರಿದ್ದರು.