ಶಹಾಬಾದ : ಕೋಲಿ ಸಮಾಜದ ಏಳ್ಗೆಗಾಗಿ ಸದಾಕಾಲ ತಮ್ಮನ್ನು ತಾವು ಅರ್ಪಿಸಿಕೊಂಡ ಸಮಾಜದ ಏಕೈಕ ನಾಯಕರೆಂದರೆ ವಿಠ್ಠಲ್ ಹೆರೂರ್ ಎಂದು ನಗರ ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ ಹೇಳಿದರು.
ಅವರು ಶನಿವಾರ ಅಶೋಕ ನಗರದ ಅಂಬಿಗರ ಚೌಡಯ್ಯನವರ ಸಮುದಾಯ ಭವನದಲ್ಲಿ ಶಹಾಬಾದ ನಗರದ ಕೋಲಿ ಸಮಾಜ ಮತ್ತು ಗ್ರಾಮೀಣ ಕೋಲಿ ಸಮಾಜ ವತಿಯಿಂದ ಆಯೋಜಿಸಿದ ವಿಠ್ಠಲ ಹೇರೂರ ಅವರ ಹುಟ್ಟುಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜಿಲ್ಲಾ ಕಸಾಪ ಅಭ್ಯರ್ಥಿ ಬಿ.ಎಚ್.ನಿರಗುಡಿ ಭರವಸೆ: ಗೆದ್ದರೆ ತಾಲೂಕುಗಳಲ್ಲಿ ಕನ್ನಡ ಭವನ-ಸಾಹಿತ್ಯ ಕಮ್ಮಟ
ವಿಠ್ಠಲ ಹೇರೂರ ಅವರು ಬದುಕಿನುದಕ್ಕೂ ಶೋಷಿತ , ಹಿಂದುಳಿದ ಸಮಾಜದ ಅಭಿವೃದ್ಧಿಗಾಗಿ ಸದಾ ಅವರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡಿದರು. ಹಿಂದುಳಿದ ವರ್ಗಗಳ ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರಲು ಸಂಘಟನೆಯ ಕಿಚ್ಚನ್ನು ಹಚ್ಚಿದ ಸಮಾಜದ ಮೊಟ್ಟಮೊದಲ ನಾಯಕರು ಎಂದು ಹೇಳಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ ಮಾತನಾಡಿ,ಜೀವನದ ಕೊನೆಯ ಗಳಿಗೆಯಲ್ಲೂ ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ ) ಸೇರಿಸಬೇಕೆಂಬ ಆಶಾಭಾವನೆ ವಿಠ್ಠಲ ಹೇರೂರ ಅವರ ಬದುಕಿನ ಕೊನೆಯ ಮಾತಾಗಿತ್ತು. ಅವರ ಕೊನೆಯ ಆಸೆಯನ್ನು ನೇರವೇರಿಸಬೇಕಾದರೆ ಸಮಾಜದ ಸಂಘಟಿತರಾಗಿ ಹೋರಾಟ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಲೋಹಿತ್ ಮಲಖೇಡ, ರಾಜು ಪೆಂಟರ್,ಶಿವಕುಮಾರ ನಾಟೇಕಾರ, ಕಾಶಣ್ಣ ಚೆನ್ನೂರ್, ಪರಮಾನಂದ ಯಲಗೋಡಕರ್, ಲಕ್ಷ್ಮಿಕಾಂತ ಮಸಬಾ, ಬೆಳ್ಳಪ್ಪ ಕಣದಾಳ, ಬಸವರಾಜ ಮದ್ರಿಕಿ, ಸುಭಾಷ ಜಾಪೂರ, ಮಹೇಶ ಯಲ್ಲೇರಿ, ಪ್ರಶಾಂತ ಹದನೂರ್, ಲಕ್ಷ್ಮಣ ಕಟ್ಟಿಮನಿ, ಬಾಬು ಮಲ್ಲಾಬಾದಿ, ತಿಪ್ಪಣ್ಣ ಇತರರು ಇದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…