ಜಿಲ್ಲಾ ಕಸಾಪ ಅಭ್ಯರ್ಥಿ ಬಿ.ಎಚ್.ನಿರಗುಡಿ ಭರವಸೆ: ಗೆದ್ದರೆ ತಾಲೂಕುಗಳಲ್ಲಿ ಕನ್ನಡ ಭವನ-ಸಾಹಿತ್ಯ ಕಮ್ಮಟ

0
87

ವಾಡಿ: ಚುನಾವಣೆಯಲ್ಲಿ ಗೆದ್ದರೆ ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನಗಳ ನಿರ್ಮಾಣದ ಜತೆಗೆ ಪ್ರತಿ ವರ್ಷ ಸಾಹಿತ್ಯ ಕಮ್ಮಟಗಳನ್ನು ಸಂಘಟಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಯುವ ಬರಹಗಾರರನ್ನು ಗುರುತಿಸುವ ಕೆಲಸ ಮಾಡುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಅಭ್ಯರ್ಥಿ, ಸಾಹಿತಿ ಬಿ.ಎಚ್.ನಿರಗುಡಿ ಭರವಸೆ ನೀಡಿದರು.

ರವಿವಾರ ಪಟ್ಟಣಕ್ಕೆ ಭೇಟಿ ನೀಡಿದ ಬಿ.ಎಚ್.ನಿರಗುಡಿ, ಕಸಾಪ ಸದಸ್ಯರನ್ನು ಭೇಟಿ ಮಾಡುವ ಮೂಲಕ ಮತಯಾಚಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಕರಲ್ಲಿ ನಾನೂವೊಬ್ಬ. ಹತ್ತಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದೇನೆ. ಪತ್ರಕರ್ತನಾಗಿ, ಸಂಪಾದಕನಾಗಿ, ಕಸಾಪ ಗೌರವ ಕಾರ್ಯದರ್ಶಿಯಾಗಿ, ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷನಾಗಿ ಜನ ಸೇವೆಯಲ್ಲಿದ್ದೇನೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಅತಿಹೆಚ್ಚು ಸಾಹಿತ್ಯಿಕವಾಗಿ ಪರಿವರ್ತಿಸಬೇಕೆಂಬ ಮಹದಾಸೆ ಹೊಂದಿದ್ದೇನೆ. ಮಕ್ಕಳ ಸಾಹಿತ್ಯ, ವೈದ್ಯ ಸಾಹಿತ್ಯ, ಮಹಿಳಾ ಸಾಹಿತ್ಯ ಹಾಗೂ ಕೃಷಿ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುವ ಕನಸು ಹೊತ್ತಿದ್ದೇನೆ ಎಂದರು.

Contact Your\'s Advertisement; 9902492681

30 ಲಕ್ಷ ರೈತರಿಗೆ ಸಾಲ ನೀಡುವ ಗುರಿ: ಸಚಿವ ಸೋಮಶೇಖರ

ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಚಟುವಟಿಕೆಗಳಿಂದ ವಂಚಿತಗೊಂಡು ಮಾರಾಟ ಮಳಿಗೆಯ ರೂಪ ಪಡೆದುಕೊಂಡಿದೆ. ಕಸಾಪ ಅಂಗಳದಲ್ಲಿರುವ ಬಾಪುಗೌಡ ದರ್ಶನಾಪುರ ರಂಗಮಂದಿರವನ್ನು ಅತ್ಯಾಧುನಿಕ ಧ್ವನಿವರ್ಧಕ, ಬೆಳಕು, ಸುಖಾಸನಗಳನ್ನು ಅಳವಡಿಸುವುದರ ಮೂಲಕ ಸಾಹಿತ್ಯಾಸಕ್ತರನ್ನು ಸೆಳೆಯುವ ಪ್ರಯತ್ನ ಮಾಡಲಾಗುವುದು. ಜಿಲ್ಲೆಯ ಹಿರಿಯ ಕಿರಿಯ ಸಾಹಿತಿಗಳ ಕೈಪಿಡಿ ಹೊರತರಲಾಗುವುದು. ಯುವ ಬರಹಗಾರರಿಗಾಗಿ ವೇದಿಕೆ ನಿರ್ಮಿಸಲಾಗುವುದು. ಪ್ರತಿವರ್ಷ ನಗರದಲ್ಲಿ ಪುಸ್ತಕ ಸಂತೆ ಏರ್ಪಡಿಸಲಾಗುವುದು. ಅರ್ಥಪೂರ್ಣ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗುವುದು. ಕಸಾಪ ಗೌರವ ಸದಸ್ಯರೆಲ್ಲರೂ ಆಶೀರ್ವಾದ ಮಾಡಿ ಅಧ್ಯಕ್ಷನಾಗಲು ಅವಕಾಶ ನೀಡಿದರೆ ಕಸಾಪವನ್ನು ಜಾತ್ಯಾತೀತವಾಗಿ ಜನರ ಮಧ್ಯೆ ಕೊಂಡೊಯ್ಯುವ ಜವಾಬ್ದಾರಿ ಹೊರುತ್ತೇನೆ. ಒಮ್ಮೆ ಅಧ್ಯಕ್ಷನಾಗಿ ಚುನಾಯಿತನಾದರೆ, ಪ್ರಾಮಾಣಿಕವಾಗಿ ಕನ್ನಡದ ಸೇವೆ ಮಾಡುತ್ತೇನೆ. ಅಲ್ಲದೆ ಮತ್ತೊಮ್ಮೆ ಕಸಾಪ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆ ಸ್ಥಾನ ಹೊಸಬರಿಗಾಗಿ ಬಿಟ್ಟುಕೊಡುತ್ತೇನೆ ಎಂದರು.

ಕಸಾಪ ಕಲಬುರಗಿ ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಉಪಾಧ್ಯಕ್ಷ ಭೀಮಾಶಂಕರ ಎನ್.ಯಳಮೇಲಿ, ಶರಣಗೌಡ ಪಾಟೀಲ ಪಾಳಾ, ವೇದಕುಮಾರ ಪ್ರಜಾಪತಿ, ವಾಡಿ ನಗರ ಕಸಾಪ ನಕಟಪೂರ್ವ ಅಧ್ಯಕ್ಷ ಮಲ್ಲೇಶ ನಾಟೀಕಾರ, ಹಾಲಿ ಗೌರವ ಕಾರ್ಯದರ್ಶಿ ಸಿದ್ದಯ್ಯಶಾಸ್ತ್ರೀ ನಂದೂರಮಠ, ಚಂದ್ರು ಕರಣಿಕ, ಸಂಚಲನ ಸಾಹಿತ್ಯ ವೇದಿಕೆ ಮಾಜಿ ಅಧ್ಯಕ್ಷ ಮಡಿವಾಳಪ್ಪ ಹೇರೂರ, ಕಸಾಪ ಮುಖಂಡರಾದ ನೂರೊಂದಯ್ಯಸ್ವಾಮಿ ಮಠಪತಿ, ಶ್ರವಣಕುಮಾರ ಮೊಸಲಗಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here