ಬಿಸಿ ಬಿಸಿ ಸುದ್ದಿ

ಷೇರು ಮಾರುಕಟ್ಟೆಯಂತಾಗಿರುವ ಬಸವಕಲ್ಯಾಣ ಚುನಾವಣಾ ಫಲಿತಾಂಶ

  • ಡಾ. ಶಿವರಂಜನ್ ಸತ್ಯಂಪೇಟೆ

ಕಲಬುರಗಿ (ಬಸವಕಲ್ಯಾಣ): ಕಲ್ಯಾಣ ಶರಣರ ಕಾಯಕಭೂಮಿಯಾದ ಬೀದರ ಜಿಲ್ಲೆಯ ಬಸವಕಲ್ಯಾಣದ ಉಪಚುನಾವಣಾ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಬಿಸಿಲು ರಂಗೇರಿದಂತೆ ಚುನಾವಣಾ ಕಣವೂ ಕೊತ ಕೊತ ಕುದಿಯುತ್ತಿದೆ. ಕಾಂಗ್ರೆಸ್-ಬಿಜೆಪಿಗೆ ಜಿದ್ದಾಜಿದ್ದಿನ ಕಣವಾದಂತೆ, ಪಕ್ಷೇತರ ಮತ್ತು ಜೆಡಿಎಸ್ ಗೆ ಕೂಡ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. 1989ರಿಂದ 2018ರವರೆಗೆ ಜೆಡಿ ಎಸ್ ನ ಭದ್ರಕೋಟೆಯಾಗಿದ್ದ ಬಸವಕಲ್ಯಾಣ ಕ್ಷೇತ್ರದಲ್ಲಿ 2018ರಲ್ಲಿ ಕಾಂಗ್ರೆಸ್ ನ ದಿ.ಬಿ.‌ನಾರಾಯಣರಾವ ಅವರು, 17272 ಮತಗಳ ಮೂಲಕ ಮಲ್ಲಿಕಾರ್ಜುನ ಖೂಬಾ ಅವರನ್ನು ಪರಾಭವಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಕಾಣಿಸಿದರು.

ಎಲ್ಲರೊಂದಿಗೆ ಒಂದಾಗಿ ಬರೆಯುವ ಸ್ವಭಾವದವರಾಗಿದ್ದ ನಾರಾಯಣರಾವ ಅವರು ಅಧಿವೇಶನದಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಪಕ್ಷಗಳ ಮುಖಂಡರಿಗೆ ತಮ್ಮದೇ ಆದ ಜವಾರಿ ಭಾಷೆಯಲ್ಲಿ ನಿವೇದಿಸಿಕೊಂಡಿದ್ದು ಇನ್ನೂ ಅಚ್ಚ ಹಸಿರಾಗಿದೆ. ದುರದೃಷ್ಟವಶಾತ್ ಕೊರೊನಾ ಹಿನ್ನೆಲೆಯಲ್ಲಿ ಅವರು ನಿಧನ ಹೊಂದಿದ ಪ್ರಯುಕ್ತ ಇದೀಗ ಇದೇ ಏ. 17ರಂದು ಉಪಚುನಾವಣೆ ನಡೆಯಲಿದೆ.

ಕಲಬುರಗಿಯ ಶರಣು ಸಲಗರ ಎಂಬುವವರು ಬಸವಕಲ್ಯಾಣಕ್ಕೆ ತೆರಳಿ ಅಲ್ಲಿಯೇ ಮನೆ ಮಾಡಿ ಲಾಕ್ ಡೌನ್ ವೇಳೆಯಲ್ಲಿ ಬಡವರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಿ ಅಲ್ಲಿನ ಜನರ ಹೃದಯ ಗೆದ್ದರು. ಸದಾ ಚಟುವಟಿಕೆಯಿಂದ ಪಾದರಸದಂತೆ ಓಡಾಡುವ ಶರಣು ಸಲಗರ ಅವರು, ಟಿಕೆಟ್ ಆಕಾಂಕ್ಷಿಗಳನ್ನು ಹಿಂದಿಕ್ಕಿ ಬಿಜೆಪಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾದರು.

ಇದರಿಂದಾಗಿ ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿ 2018ರಲ್ಲಿ ನಾರಾಯಣರಾವ ವಿರುದ್ಧ ಸ್ವಲ್ಪದರಲ್ಲೇ ಸೋಲು ಅನುಭವಿಸಿದ್ದ ಮಲ್ಲಿಕಾರ್ಜುನ ಖೂಬಾ ಅವರು ಸಹಜವಾಗಿಯೇ ಸಿಡಿದೆದ್ದರು. ಬಿಜೆಪಿ ವಿರುದ್ಧ ಬಂಡೆದ್ದು ಕೊನೆಗೂ ಪಕ್ಷೇತರ ಅಭ್ಯರ್ಥಿಯಾಗಿ ಅವರು ಕಣದಲ್ಲಿ ಉಳಿದರು. ಇತ್ತ ಬಿ.ನಾರಾಯಣರಾವ ಅವರ ಪತ್ನಿ ಮಲ್ಲಮ್ಮ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಣೆ ಮಾಡಿತು. ಇದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವುದಕ್ಕಾಗಿ ಜೆಡಿಎಸ್ ಸೈಯದ್ ಯಸ್ರತ್ ಅಲಿ ಖಾದ್ರಿ ಅವರನ್ನು ಚುನಾವಣೆ ಕಣಕ್ಕೆ ನಿಲ್ಲಿಸಿತು.

ಇದಾದ ಬಳಿಕ ಆಡಳಿತ ಪಕ್ಷದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆದಿಯಾಗಿ ಆಯಾ ಪಕ್ಷಗಳ ಘಟಾನುಘಟಿ ರಾಜಕಾರಣಿಗಳು ಬಸವಕಲ್ಯಾಣ ಕ್ಷೇತ್ರಕ್ಕೆ ಬಂದು ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡಿ ಹೋಗಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬೀಳಲಿದ್ದು, ನಾಳೆಯೊಂದೇ ದಿನ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದು ಬಾಕಿ ಉಳಿದಿದೆ. 17ರಂದು ಈ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಪ್ರಭು ಬರೆಯಲಿದ್ದು, ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಮೇ 2ರವರೆಗೆ ಕಾಯಬೇಕಿದೆ.

ಈ ಮೊದಲು ಬಿಜೆಪಿಯ ಶರಣು ಸಲಗರ ಬೇರೆ ಜಿಲ್ಲೆಯವರು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಕಾಂಗ್ರೆಸ್ ನ ಮಲ್ಲಮ್ಮ ಅವರಿಗೆ ಅನುಕಂಪದ ಅಲೆ ಎದ್ದು ಕಾಣುತ್ತಿತ್ತು. ಪಕ್ಷೇತರ ಅಭ್ಯರ್ಥಿಯ ಅಲೆ ಕೂಡ ಜೋರಾಗಿತ್ತು. ಆದರೆ ದಿನಗಳೆದಂತೆ ಇವೆಲ್ಲವೂ ಹಿಂದೆ ಸರಿದು ಈಗ ಯಾರು ಗೆದ್ದು ಬರುತ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ. ಒಂದು ಅಂದಾಜಿನ ಪ್ರಕಾರ ಮುಸ್ಲಿಂ ಓಟುಗಳು ಕಾಂಗ್ರೆಸ್ ಗೆ ಸಾಲಿಡ್ ಆದರೆ ಕಾಂಗ್ರೆಸ್ ಗೆದ್ದು ಬರುತ್ತದೆ. ಮರಾಠ ಓಟುಗಳು ಬಿಜೆಪಿಗೆ ಸಾಲಿಡ್ ಆದರೆ ಬಿಜೆಪಿ ಗೆದ್ದು ಬರುತ್ತಿದೆ ಎಂಬ ಲೆಕ್ಕಾಚಾರ ಕೇಳಿ ಬರುತ್ತಿವೆ.

ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಒಬ್ಬರ ಸೋಲಿಗೆ ಕಾರಣವಾಗುವುದಂತೂ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಆದರೆ ಒಂದು ಮಾತಂತೂ ಸತ್ಯ! ಬಸವಕಲ್ಯಾಣ ಉಪ ಚುನಾವಣಾ ಕಣ ಈ ಬಾರಿ ಷೇರು ಮಾರುಕಟ್ಟೆಯಂತಾಗಿ ಪರಿಣಮಿಸಿದೆ. ಒಂದು ಬಾರಿ ಒಂದು ಪಕ್ಷದ ವರ್ಚಸ್ಸು(ಗಾಳಿ) ಹೆಚ್ಚಾದಂತೆ ಕಂಡು ಬಂದರೆ ಇನ್ನೊಂದು ಬಾರಿ ಮತ್ತೊಂದು ಪಕ್ಷದ ವರ್ಚಸ್ಸು ಕುಸಿತವಾದಂತೆ ಕಂಡು ಬರುತ್ತಿದೆ. ಹೀಗಾಗಿ ಒಂದು ದಿನ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಬಹುದಾದರೆ, ಮತ್ತೊಂದು ದಿನ ಕಾಂಗ್ರೆಸ್ ಗೆಲ್ಲಬಹುದೆಂದು ಹೇಳಬಹುದಾಗಿದೆ.

ಆದರೂ ಒಬ್ಬರಂತೂ ಗೆದ್ದು ಬರಲೇಬೇಕು. ಅದಕ್ಕೆ ಮತದಾರ ಪ್ರಭುವಿನ ಆಶೀರ್ವಾದ ಯಾರ ಮೇಲಿದೆ ಎಂಬುದನ್ನು ಮೇ 2ರಂದು ಹೊರಬೀಳಲಿದೆ. ಅಲ್ಲಿಯವರೆಗೆ ಕಾಯಬೇಕಷ್ಟೇ! ಈ ಕ್ಷೇತ್ರದಲ್ಲಿ ಒಟ್ಟು 2.38 ಲಕ್ಷ ಮತದಾರರಿದ್ದು, ಲಿಂಗಾಯತ-62,000, ಮುಸ್ಲಿಂ-36,000, ಮರಾಠ-40,000, ಕುರುಬ-31, 000, ಕ್ರೈಸ್ತ-8500,ಎಸ್.ಸಿ, ಎಸ್.ಟಿ- 30, 000, ಲಂಬಾಣಿ- 8,000 ಇತರೆ- 15000 ಮತದಾರರಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago