ಆಳಂದ:ಪ್ರವಾಹ ಬಂದು ರೈತರ ಜೀವನ ದುಸ್ತರವಾಗಿ ಸುಧಾರಿಸಿ ಕೊಳ್ಳುವ ಹೊತ್ತಿನಲ್ಲಿಯೇ ವಿದ್ಯುತ್ ಟಿ.ಸಿ ಟ್ರಾನಫಾರ್ಮಗಳು ದುರಸ್ತಿಯಾಗದೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಕಡಗಂಚಿ ಉಪ-ವಿಭಾಗ ಕಚೇರಿಯಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಅನೇಕ ರೈತರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಸವರಾಜ ಯಳಸಂಗಿ ಮಾತನಾಡಿ, ಕೊಳವೆ ಭಾವಿ ನೀರನ್ನು ಆಶ್ರಯಿಸಿ ಬೇಸಿಗೆ ಬೆಳೆ ಬೆಳೆದಿರುವ ರೈತರು ವಿದ್ಯುತ್ ಸಮಸ್ಯೆಯಿಂದ ನೀರು ಹಾಯಿಸಲು ಸಾಧ್ಯವಾಗದೇ ಬೆಳೆ ಒಣಗುವ ಆತಂಕ ಎದುರಾಗಿದೆ. ಅಲ್ಲದೆ ಟಿ.ಸಿ ಗಳು ಸುಟ್ಟು ಹೋಗಿವೆ, ಜವಳಿ-ಡಿ ಗ್ರಾಮದ ತೋಟದಲ್ಲಿನ ಟಿ.ಸಿ. ಹದಗೆಟ್ಟು, ಸುಮಾರು15 ದಿನಕ್ಕೂ ಮೇಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿಂಬರ್ಗಾ ಕೆಯಿಬಿ ಅಫಿಸ್ ಹಾಗೂ ಜೈ ಗೆ ತಿಳಿಸಲಾಗಿದೆ, ಅಲ್ಲದೆ ಗುಲ್ಬರ್ಗ ಮುಖ್ಯ ಅಧಿಕಾರಿಗಳಿಗೂ ತಿಳಿಸಲಾಗಿದೆ. ಆದರೂ ರೈತರ ಸಮಸ್ಯೆ ಪರಿಹಾರವಾಗಿಲ್ಲ. ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಟಿ.ಸಿ ಉಪಯೋಗವಾಗುವಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂತೋಷ ಚವ್ಹಾಣ್, ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು, ಸುನಿಲ್ ಕುಮಾರ್ ಉಪವಿಭಾಗಾಧಿಕಾರಿ ಕಡಗಂಚಿ, ಸಾತಲಿಂಗಪ್ಪ ಸಹಾಯಕ ಅಭಿಯಂತರರು, ಸಂಜಯ ಮೇಲ್ವಿಚಾರಕರು ನಿಂಬರ್ಗಾ, ಮಲ್ಕಪ್ಪ ಶಾಖಾಧಿಕಾರಿ ನರೋಣ, ಅಮೃತ ಶಾಖಾಧಿಕಾರಿ ನಿಂಬರ್ಗಾ, ನಾಗಪ್ಪ ಗಿರಿ ಶಾಖಾಧಿಕಾರಿ ಕಡಗಂಚಿ,ನಿಂಬರ್ಗಾ ವಲಯ ಕ.ರ.ವೇ ಅಧ್ಯಕ್ಷ ಬಸವರಾಜ ಯಳಸಂಗಿ, ಚಂದ್ರಕಾಂತ ಅವಟೆ,ಭೀಮರಾಯ್ ಸನಗುಂದಿ,ಕಲ್ಯಾಣಿ ದೇವಕರೆ,ಹನಮಂತ ವಗ್ಗೆ, ದತ್ತು ಗೌರವಗೋಳ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…