ಬಿಸಿ ಬಿಸಿ ಸುದ್ದಿ

ಆಕ್ಸಿಜನ್, ರೆಮ್ಡಿಸಿವಿರ್ ಮಾತ್ರೆಗಳ ಕೊರತೆಯಾಗದಂತೆ ಕ್ರಮ: ಗೋವಿಂದ ಕಾರಜೋಳ

ಕಲಬುರಗಿ: ಜಿಲ್ಲೆಯ ಕೋವಿಡ್-19 ಸೋಂಕಿತರಿಗೆ ಮುಂದಿನ ದಿನಗಳಲ್ಲಿಯೂ ಅಗತ್ಯವಿರುವ ಆಕ್ಸಿಜನ್ ಹಾಗೂ ರೆಮ್ಡಿಸಿವಿರ್ ಮಾತ್ರೆಗಳ ಪೂರೈಕೆ ನಿಟ್ಟಿನಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ಅವರು ಭರವಸೆ ನೀಡಿದರು.

ಬೆಂಗಳೂರಿನಿಂದ ಝೂಮ್ ಮೀಟ್ ಮೂಲಕ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾಗವಹಿಸಿದ್ದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕೋವಿಡ್ ಇನ್ನಷ್ಟು ತೀವ್ರತೆ ಪಡೆಯುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಹಾಗೂ ರೆಮ್ಡಿಸಿವಿರ್ ಮಾತ್ರೆಗಳ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು, ಬಳ್ಳಾರಿಯ ಜಿಂದಾಲ್ನಿಂದ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ವ್ವವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಲಬುರಗಿ ಸೇರಿದಂತೆ ನೆರೆಹೊರೆಯ ಜಿಲ್ಲೆಗೆ ಜಿಂದಾಲ್ನವರು ಆಕ್ಸಿಜನ್ ನೀಡಲಿದ್ದಾರೆ. ಆದರೆ, ಆಕ್ಸಿಜನ್ನನ್ನು ಕ್ರಯೋಜನಿಕ್ ಟ್ಯಾಂಕರ್ ಮೂಲಕ ಮಾತ್ರ ಸಾಗಿಸಬಹುದಾಗಿದೆ. ಸ್ಥಳೀಯವಾಗಿ ಎಲ್ಲೂ ಈ ಕ್ರಯೋಜನಿಕ್ ಟ್ಯಾಂಕರ್ ಸಿಗುತ್ತಿಲ್ಲ. ಹೈದ್ರಾಬಾದ್ನಿಂದಲೂ ತರಲು ಪ್ರಯತ್ನ ನಡೆಸಿದರೂ, ಅಲ್ಲಿಯೂ ಸಿಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.

ಭಗವಾನ್ ಮಹಾವೀರರ ಜಯಂತಿ ಮನೆಯಲ್ಲಿ ಆಚರಣೆಗೆ ಮನವಿ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೂಡಲೇ ಕ್ರಯೋಜನಿಕ್ ಟ್ಯಾಂಕರ್ ಸಂಬಂಧ ಜಾಹೀರಾತು ನೀಡಿ, ವಾಹನ ಪಡೆದು ಬಳ್ಳಾರಿಯಿಂದ ಆಕ್ಸಿಜನ್ ತರಿಸಿಕೊಳ್ಳಬೇಕು. ನಾನು ಕೂಡ ಬೆಂಗಳೂರಿನಲ್ಲಿ ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದರು .
ವಿವಿಧ ಆಸ್ಪತ್ರೆಗಳ ಕಿವಿ, ಗಂಟಲು, ಮೂಗು ಮುಂತಾದ ವಿಭಾಗಗಳ ಬೆಡ್ಗಳನ್ನು ಕೋವಿಡ್ಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ಸಚಿವರು, ಜಿಲ್ಲೆಯಲ್ಲಿರುವ ಶೇಕಡ 60 ರಿಂದ 70 ರಷ್ಟು ಬೆಡ್ಗಳನ್ನ ಕೋವಿಡ್ ಸೋಂಕಿತರಿಗೆಂದೇ ಮೀಸಲಿಡಬೇಕು. ಈ ಕುರಿತು ಆದೇಶ ಹೊರಡಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇಎಸ್ಐಸಿಯಲ್ಲಿ ಕೋವಿಡ್ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿರುವ 400 ಬೆಡ್ಗಳಿಗೆ ಜಂಬೋ ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಕೆಗೆ ಕ್ರಮವಹಿಸಬೇಕು. ಇಎಸ್ಐಸಿಯನ್ನು ಪೂರ್ಣ ಪ್ರಮಾಣದಲ್ಲಿ ಕೋವಿಡ್ ರೋಗಿಗಳಿಗೆ ಬಳಸಿಕೊಳ್ಳಬೇಕು. ಕÀಲಬುರಗಿಯ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಗಳನ್ನು ಸಹ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ಸೆಮಿ ಲಾಕ್‌ಡೌನ್‌ಗೆ ಶಹಾಬಾದ ಸಂಪೂರ್ಣ ಬಂದ್

ಕೋವಿಡ್ ಬಗ್ಗೆ ವ್ಯಾಪಕ ಜಾಗೃತಿ: ಕೋವಿಡ್ ಕಾಯಿಲೆ ಕುರಿತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಎಲ್ಲರೂ ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲ ತಾಣಗಳ ನೋಡುವುದಿಲ್ಲ. ಸ್ಥಳೀಯ ಕೇಬಲ್ ಚಾನೆಲ್/ಸ್ಥಳೀಯ ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು ಪ್ರಮುಖವಾಗಿ ಕಸ ಸಂಗ್ರಹಿಸುವ ಮಹಾನಗರ ಪಾಲಿಕೆ/ನಗರಸಭೆ ವಾಹನಗಳಿಗೆ ಧ್ವನಿವರ್ಧಕ ಅಳವಡಿಸಿ ಕೋವಿಡ್ ಬಗ್ಗೆ ಪ್ರಚಾರ ಕೈಗೊಳ್ಳಬೇಕು. ಬಡವರು ವಾಸಿಸುವ ಹಾಗೂ ಕೊಳಚೆ ಪ್ರದೇಶಗಳಲ್ಲಿ ಬೀದಿನಾಟಕಗಳ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ರೋಗಗಳಿಂದ ಬಳಲುತ್ತಿರುವವರಲ್ಲಿ ಕೋವಿಡ್ ರೋಗ ಲಕ್ಷಣ ಕಂಡು ಬಂದರೆ ಸಮೀಪದ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಉಪಮುಖ್ಯಮಂತ್ರಿಗಳು ಹೇಳಿದರು. ಕೋವಿಡ್ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವವರಿಗೆ ಆಸ್ಪತ್ರೆ ದಾಖಲಾಗಲು ತಿಳಿಹೇಳಬೇಕು. ರೋಗಲಕ್ಷಣಗಳಿಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಐಸೋಲೇಷನ್ನಲ್ಲಿ ಇಡಬೇಕು ಎಂದು ತಿಳಿಸಿದರು. ಪ್ರತಿದಿನ ಮನೆ ಬಾಗಿಲಿಗೆ ಬಂದು ಗ್ಯಾಸ್ ಸಿಲಿಂಡರ್ ವಿತರಿಸುವವರು, ಕ್ಷೌರಿಕರು, ಮಡಿವಾಳರು ಮುಂತಾದವರಿಗೆ ಪ್ರಥಮ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಹಾಕಬೇಕು ಎಂದರು.

ರಾಜಾ ಕುಮಾರ ನಾಯಕ ಜನುಮ ದಿನ:ರೋಗಿಗಳಿಗೆ ಹಾಲು ಹಣ್ಣು ವಿತರಣೆ

ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಕಾಲೇಜು ( ಜಿಮ್ಸ್) ಕೋವಿಡ್ ರೋಗಿಗಳ ಬೆಡ್, ಸಿಬ್ಬಂದಿ ಮುಂತಾದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸುವಾರಿ ಸಚಿವರು, ಸಿಬ್ಬಂದಿ ತುಂಬಲು ಕ್ರಮಕೈಗೊಳ್ಳಬೇಕು. ಇಂತಹ ತುರ್ತು ಸಂದರ್ಭದಲ್ಲಿ ಕಾನೂನು ನಿಯಮಗಳನ್ನು ಸಡಿಲಿಸಿ ಸ್ಟಾಫ್ನರ್ಸ್ ಮುಂತಾದವರನ್ನು ತುಂಬಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಶೇಕಡ 50ರಷ್ಟು ಕೆಲಸವನ್ನು ಇವರೇ ಮಾಡಲಿದ್ದಾರೆ ಎಂದು ಮೆಚ್ಚುಗೆಯ ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 46 ಹೆಲ್ಪ್ಲೈನ್ ತೆರೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಸ್ತುವಾರಿ ಸಚಿವರು, ಕೋವಿಡ್ ಆಸ್ಪತ್ರೆ, ಬೆಡ್ಗಳ ಸಂಖ್ಯೆ, ಭರ್ತಿಯಾದ ಬೆಡ್ಗಳು, ಖಾಲಿ ಬೆಡ್ಗಳು ಇನ್ನಿತರ ಸಂಪೂರ್ಣ ವಿವರಗಳನ್ನು ನೀಡಿದರೆ, ಕೋವಿಡ್ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಮೇ 1 ರಿಂದ ಬಡವರಿಗೆ ಉಚಿತವಾಗಿ ಪಡಿತರ ವಿರಿಸುತ್ತಿದ್ದು, ಯಾರಿಗೂ ಸಮಸ್ಯೆಯಾಗದಂತೆ ವಿತರಿಸಬೇಕು ಎಂದು ಅವರು ಸೂಚಿಸಿದರು.

ಕೊರೊನಾ ಹರಡುವುದು ತಡೆಯುವುದು ಎಲ್ಲರ ಜವಬ್ದಾರಿ: ರಾಜಾ ವೆಂಕಟಪ್ಪ ನಾಯಕ

ರಸ್ತೆಯಲ್ಲಿ ಉಗುಳಿದರೆ ದಂಡ: ತಜ್ಞರ ಪ್ರಕಾರ ಗಾಳಿ ಮೂಲಕವೂ ಕೋವಿಡ್ ಸೋಂಕು ಹರಲಿದೆ ಎಂದು ಹೇಳಲಾಗುತ್ತಿದೆ. ಪಾನ್, ಬೀಡಾ ತಿಂದು ರಸ್ತೆಯಲ್ಲಿ ಉಗುಳುವವರ ವಿರುದ್ಧ ಕೇಸು ಹಾಕಬೇಕು. ಇದಕ್ಕೆ ಕಾರಣವಾಗುವ ಪಾನ್-ಬೀಡಾ ಅಂಗಡಿಗಳ ಮೇಲೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸಚಿವರು ಪೊಲೀಸ್ ಇಲಾಖೆಗೆ ಸೂಚಿಸಿದರು. ಚೆಕ್ಪೋಸ್ಟ್ನಲ್ಲಿ ಬಿಗಿಕ್ರಮ: ಮಹಾರಾಷ್ಟ್ರ, ತೆಲಂಗಾಣದಿಂದ ಬರುವವರ ಬಗ್ಗೆ ತೀವ್ರ ನಿಗಾವಹಿಸಬೇಕು. ಇಲ್ಲಿಂದ ಬರುವ ಜನರು ಕಡ್ಡಾಯವಾಗಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ತಂದಿರಬೇಕು. ಸೋಂಕಿನ ಲಕ್ಷಣಗಳಿರುವ ಜನರನ್ನು ಬೇರೆಡೆ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹೋಂ ಕ್ವಾರಾಂಟೈನ್ನಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರು ಮಾತನಾಡಿ, ಗಡಿಯಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾವು ನೀಡಿರುವ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ನರೇಗಾದಲ್ಲಿ ಉದ್ಯೋಗ: ಜನ ಬೇರೆಡೆ ಗುಳೆ ಹೋಗಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜಿಲ್ಲೆಗೆ ವಾಪಸ್ ಆಗುತ್ತಿದ್ದಾರೆ. ಅವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕಾರ್ಮಿಕ ಕಾಯ್ದೆಯಡಿ ಉದ್ಯೋಗ ಕೊಡಿಸುವ ಕೆಲಸವಾಗಬೇಕು ಎಂದು ಅವರು ತಿಳಿಸಿದರು. ಅಧಿಕಾರಿಗಳು, ನೌಕರರಿಗೆ ರಜೆ ಇಲ್ಲ: ಕೋವಿಡ್ ಹಿನ್ನೆಲೆಯಲ್ಲಿ ಗ್ರೂಪ್ “ಎ” ಅಧಿಕಾರಿಗಳಿಂದ ಹಿಡಿದು ಯಾವುದೇ ಶ್ರೇಣಿಯ ಅಧಿಕಾರಿಗಳು ಹಾಗೂ ನೌಕರರಿಗೆ ರಜೆ ಇಲ್ಲ. ಎಲ್ಲರೂ ಕೋವಿಡ್ ಸಂದರ್ಭದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

ಸಂಸದ ಉಮೇಶ್ ಜಾಧವ್ ಜೇವರ್ಗಿ ಸರಕಾರಿ ಆಸ್ಪತ್ರೆ ವ್ಯವಸ್ಥೆಗೆ ಮೆಚ್ಚುಗೆ

ಮಾಧ್ಯಮದವರಿಗೆ ಕೋವಿಡ್ ಲಸಿಕೆ: ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ ಹಾಕಬೇಕು. ಅದರಲ್ಲೂ ಸುದ್ದಿ ನೀಡುವ ಭರಾಟೆಯಲ್ಲಿ ವಿದ್ಯುನ್ಮಾನ ಮಾಧ್ಯಮದ ಕ್ಯಾಮರಾಮನ್ಗಳು ವಿವಿದೆಡೆ ಹೋಗುತ್ತಾರೆ. ಇವರಿಗೆ ಮೊದಲು ವ್ಯಾಕ್ಸಿನ್ ಹಾಕಬೇಕು ಎಂದು ಮಾಧ್ಯಮದವರ ಬಗ್ಗೆ ಅತೀವ ಕಾಳಜಿ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಈಗಾಗಲೇ ಸ್ಪೆಷಲ್ ಸೆಷನ್ನಲ್ಲಿ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಮತ್ತೊಮ್ಮೆ ಸ್ಪೆಷಲ್ ಸೆಷನ್ ಮಾಡಿ ಅವರಿಗೆ ಕೋವಿಡ್ ಲಸಿಕೆ ಹಾಕಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಕುಡಿಯವ ನೀರಿಗೆ ಕ್ರಮ: ಬೇಸಿಗೆ ಜೊತೆಗೆ ಕೋವಿಡ್ ಇರುವುದರಿಂದ ಜಿಲ್ಲೆಯ ಎಲ್ಲಿಯೂ ನೀರಿನ ಸಮಸ್ಯೆಯಾಗಬಾರದು. ನೀರಿನ ಸಮಸ್ಯೆ ಇರುವ ಕಡೆ ಪರ್ಯಾಯ ವ್ಯವಸ್ಥೆ ಮೂಲಕ ಕ್ರಮಕೈಗೊಳ್ಳಬೇಕು ಎಂದರು. ಈ ಸಂದಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ ಶಶಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ,ಅಪರ ಜಿಲ್ಲಾಧಿಕಾರಿ ಡಾ. ಶಂಕರಣ್ಣ ವಣಿಕ್ಯಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಿಲ್ ಖೇಡ್, ಜಿಲ್ಲಾ ಸರ್ಜನ್ ಅಂಬರಾಯ.ಎಸ್. ರುದ್ರವಾಡಿ, ಜಿಮ್ಸ್ ನಿರ್ದೇಶಕಿ ಶ್ರೀಮತಿ ಡಾ. ಕವಿತಾ ಪಾಟೀಲ್, ಇಎಸ್ಐಸಿ ನಿರ್ದೇಶಕಿ ಡಾ. ಲೋಬೋ ಮುಂತಾದವರು ಭಾಗವಹಿಸಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

9 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

20 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

20 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

22 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

22 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

22 hours ago