ಕೊರೊನಾ ಹರಡುವುದು ತಡೆಯುವುದು ಎಲ್ಲರ ಜವಬ್ದಾರಿ: ರಾಜಾ ವೆಂಕಟಪ್ಪ ನಾಯಕ

0
16

ಸುರಪುರ: ಹುಣಸಗಿ ಸುರಪುರ ತಾಲೂಕಿನಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ, ಇದನ್ನು ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರೋನಾ ಲಸಿಕೆ ಪಡೆದರೂ ಸೊಂಕು ತಗುಲುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ನನ್ನ ಕ್ಷೇತ್ರದ ಜನತೆ ಕೋವಿಡ್ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಆಗಾಗ ಸ್ಯಾನಿಟೈಸರ್ ಬಳಸಬೇಕು ಅನಗತ್ಯವಾಗಿ ಗುಂಪು ಗುಂಪಾಗಿ ನಿಂತು ಚರ್ಚಿಸಬಾರದು, ಸುಖಾ ಸುಮ್ಮನೆ ರಸ್ತೆಗಿಳಿದು ಸಂಚರಿಸುವುದಕ್ಕೆ ಕಡಿವಾಣ ಹಾಕಿಕೋಳ್ಳಬೇಕು.

Contact Your\'s Advertisement; 9902492681

ವೀಕೆಂಡ್ ಕರ್ಫ್ಯೂ ಜಾರಿ: ಅನಾವಶ್ಯಕವಾಗಿ ಹೊರಗೆ ಬಂದವರ ಬೈಕ್ ವಶಕ್ಕೆ

ಮದುವೆ, ಸಭೆ ಸಮಾರಂಭಗಳನ್ನು ಆದಷ್ಟು ಮುಂದಕ್ಕೆ ಹಾಕಿ ಅನಿವಾರ್ಯತೆ ಇದ್ದಲ್ಲಿ ಮಾತ್ರ ಸಮಾರಂಭಗಳನ್ನು ಸರಕಾರದ ನಿಯಮದಂತೆ ಹಮ್ಮಿಕೊಳ್ಳಿ, ನಮ್ಮ ಜೀವದ ರಕ್ಷಣೆ ನಮ್ಮ ಕೈಯಲ್ಲಿರುವುದನ್ನು ಗಮದಲ್ಲಿಟ್ಟುಕೊಂಡು ಕರೋನಾ ನಿಯಮವನ್ನು ಪಾಲಿಸಬೇಕೆಂದು ನಾನು ಮತ್ತೋಮ್ಮೆ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡುಕೋಳ್ಳುತ್ತೇನೆ.

ಕರೋನಾ ರೋಗವನ್ನು ತಡೆಯಲು ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಮತ್ತು ಆಕ್ಸೀಜನ್ ವ್ಯವಸ್ಥೆಯನ್ನು ಮಾಡಿಕೊಂಡು ರೋಗವನ್ನು ತಡೆಯಲು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕೆಂದು ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here