ಕಲಬುರಗಿ: ದೇಶದ ಪರಿಸ್ಥಿತಿ ತೀರ್ವವಾದ ಬಿಕ್ಕಟ್ಟಿನಲ್ಲಿದ್ದು ಹಸಿವು, ನಿರುದ್ಯೋಗ, ಬಡತನಗಳಿಂದ ಜನಸಾಮಾನ್ಯರ ಸ್ಥಿತಿ ಘೋರವಾಗುತ್ತಿದೆ ಎಂದು ಸೋಷಲಿಸ್ಟ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಷ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾ.ಎಚ್.ವಿ.ದಿವಾಕರ ಅವರು ಹೇಳಿದರು.

ಸೋಷಲಿಸ್ಟ ಯೂನಿಟಿ ಸೆಂಟರ್ ಆಫ್ ಇಂಡಿಯಾ(SUCI) ಕಮ್ಯೂನಿಷ್ಟ ಪಕ್ಷದ ೭೩ ನೆಯ ಸಂಸ್ಥಾಪನಾ ದಿನಾಚರಣೆಯ ಜಿಲ್ಲಾ ಮಟ್ಟದ ಆನ್ ಲೈನ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡುತ್ತಾ ಅವರು ಬ್ರಿಟೀಷರು ತೊಲಗಿದ ನಂತರ ಅಧಿಕಾರ ಬಂಡವಾಳಶಾಹಿಗಳ ಕೈಸೇರಿತು. ಅಧಿಕಾರಸ್ತರು ಬದಲಾದರು ಆದರೆ ಶೋಷಣೆ ನಿರಂತರಗೊಂಡಿತು. ಲಾಭವೇ ಈ ವ್ಯವಸ್ಥೆಯ ಮೂಲ ಮಂತ್ರವಾಗಿರುವದರಿಂದ ದುಡಿಯುವ ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ. ಇದನ್ನು ಮನಗಂಡು ಮಹಾನ್ ಕಾರ್ಮಿಕ ವರ್ಗದ ನಾಯಕರಾದ ಕಾಮ್ರೆಡ್ ಶಿವದಾಸ್ ಘೋಷ್ ಅವರು ನೈಜವಾದ ಅಕೃತ್ರಿಮ ಕಮ್ಯೂನಿಷ್ಟ ಪಕ್ಷವನ್ನಾಗಿ SUಅI(ಅ) ಅನ್ನು ಈ ನೆಲದಲ್ಲಿ ಸ್ಥಾಪಿಸಿದರು.

ಕಾರ್ಮಿಕ ವರ್ಗದ ವಿಮೋಚನೆಗೆ SUಅI(ಅ) ಯನ್ನು ಬಲಪಡಿಸುವದನ್ನು ಬಿಟ್ಟು ಇನ್ನಾವ ದಾರಿಯೂ ಇಲ್ಲ ಎಂದರು. ದೇಶವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್ ಪಕ್ಷವು ಸಹ ರೈತ-ಕಾರ್ಮಿಕ ವಿರೋಧಿ ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ನಿರಂತರವಾಗಿ ಜಾರಿಗೆ ತಂದಿತ್ತು. ತಾವು ಈ ಪಕ್ಷಕ್ಕಿಂತ ತುಂಬಾ ಭಿನ್ನ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷವು ಬಂಡವಾಳಗಾರರ ಸೇವೆಯನ್ನು ಇನ್ನೂ ಅತ್ಯಂತ ನಿಷ್ಟೆಯಿಂದ ಪಾಲಿಸುತ್ತಾ ಫ್ಯಾಸೀವಾದಿ ನೀತಿಗಳನ್ನು ಜಾರಿಗೆ ತಂದು ದುಡಿಯುವ ಜನರ ಮೇಲಿನ ಶೋಷಣೆಯನ್ನು ಅತ್ಯುಗ್ರಗೊಳಿಸಿದೆ.  ಜಾತಿ,ಕೋಮುವಿನ ಹೆಸರಲ್ಲಿ ಜನರ ಭಾವೈಕ್ಯತೆಯನ್ನು ಛಿದ್ರಗೊಳಿಸಲಾಗುತ್ತಿದೆ.

ಖಾಸಗೀಕರಣ ನೀತಿಗಳನ್ನು ತೀರ್ವಗೊಳಿಸಿದ ಸರಕಾರ ಬ್ಯಾಂಕ್, ರೈಲ್ವೇ, ವಿಮಾನ, ವಿಮಾ ಕ್ಷೇತ್ರಗಳಂತಹ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ತನಗೆ ಬೇಕಾದ ಬಂಡವಾಗಾರರಿಗೆ ಅಲ್ಪ ಹಣಕ್ಕೆ ಮಾರಿಕೊಳ್ಳಲಾಗುತ್ತಿದೆ.

ಇನ್ನೊಂದೆಡೆ ಚುನಾವಣಾ ರಾಜಕೀಯದಲ್ಲಿ ನಿರತವಾಗಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷತನವನ್ನು ತೋರಿವೆ. ಕನಿಷ್ಟ ವೈದ್ಯಕೀಯ ಸೌಲಬ್ಯಗಳನ್ನು ಒದಗಿಸದ ಇಂತಹ ಸರಕಾರಗಳ ವಿರುದ್ಧ ಯುವಜನರು ದ್ವನಿಯೆತ್ತಬೇಕಾಗಿದೆ. ಲಕ್ಷಾಂತರ ರೈತರು ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದರೂ ಅವರ ಧ್ವನಿಗೆ ಸ್ಪಂದಿಸದೆ, ದಬ್ಬಾಳಿಕೆಯಿಂದ ಪ್ರಜಾತಂತ್ರ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.

ಇದೆಲ್ಲದರ ಬದಲಾವಣೆಗೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯೊಂದೇ ಅಂತಿಮ ಪರಿಹಾರವಾಗಿದ್ದು, ಜನತೆ SUಅI(ಅ) ಯನ್ನು ಬಲಪಡಿಸಿ ಈ ನೆಲದಲ್ಲಿ ಹೊಸ ಇತಿಹಾಸವನ್ನು ಬರೆಯಬೇಕೆಂದು ಕರೆ ನೀಡಿದರು.

SUಅI(ಅ) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾ. ವೀರಭದ್ರಪ್ಪ.ಆರ.ಕೆ. ಅವರು ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದರು. ಪಕ್ಷದ ಸದಸ್ಯರಾದ ಕಾ. ಶಿಲ್ಪಾ ಬಿ.ಕೆ. ಅವರು ಕ್ರಾಂತಿಗೀತೆ ಹಾಡಿದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

5 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

8 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

13 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

15 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420