ಕಲಬುರಗಿ: ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತರ ಆದೇಶ

ಕಲಬುರಗಿ: ಕೋವಿಡ್ ಎರಡನೇ ಅಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯಂತೆ ಕಲಬುರಗಿ ನಗರದಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144 ರನ್ವಯ 2021ರ ಏಪ್ರಿಲ್ 27 ರ ರಾತ್ರಿ 9 ಗಂಟೆಯಿಂದ 2021ರ ಮೇ 12ರ ಬೆಳಗಿನ 6 ಗಂಟೆಯವರೆಗೆ ಕೆಳಕಂಡ ಷರತ್ತುಗೊಳಪಟ್ಟು ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ನಗರ ಪೆÇಲೀಸ್ ಆಯುಕ್ತರಾದ ಎನ್. ಸತೀಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.

ಈ ನಿಷೇಧಾಜ್ಞೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ 4 ಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವುದನ್ನು ನಿಷೇಧಿಸಿದೆ. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಮತ್ತು ಐ.ಪಿ.ಸಿ. ಕಲಂ 188 ರನ್ವಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಅವಧಿಯಲ್ಲಿ ವಿಮಾನ ಮತ್ತು ರೈಲುಗಳು ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿದ್ದು, ವಿಮಾನ ಮತ್ತು ರೈಲು ಪ್ರಯಾಣದ ಟಿಕೇಟ್‍ಗಳನ್ನು ಟ್ಯಾಕ್ಸಿ, ಕ್ಯಾಬ್, ಅಟೋ ರಿಕ್ಷಾಗಳು, ವಿಮಾನ ಹಾಗೂ ರೈಲು ನಿಲ್ದಾಣಕ್ಕೆ ಸಂಚರಿಸಲು ಪಾಸ್ ಗಳಾಗಿ ಕಾರ್ಯನಿರ್ವಹಿಸುತ್ತವೆ. ಟ್ಯಾಕಿಸ್ (ಆಟೋ ರಿಕ್ಷಾ ಒಳಗೊಂಡಂತೆ) ಕ್ಯಾಬ್ ಸಂಚಾರಕ್ಕೆ ತುರ್ತು ಸೇವೆಗಳಿಗೆ ಸರ್ಕಾರದ ಮಾರ್ಗಸೂಚಿಗಳಿಗೆ ಒಳಪಟ್ಟು ಅನುಮತಿಸಿದೆ. ನಗರದ ಎಲ್ಲಾ ಶಾಲೆ, ಕಾಲೇಜು, ಶಿಕ್ಷಣ-ಸಂಸ್ಥೆಗಳು, ತರಬೇತಿ ಸಂಸ್ಥೆಗಳು ಮುಚ್ಚುವಂತೆ ಆದೇಶಿಸಿದೆ. ಆನ್‍ಲೈನ್ ಕ್ಲಾಸಸ್/ ಡಿಸ್ಟನ್ಸ್ ಲರ್ನಿಂಗ್‍ಗೆ ಅನುಮತಿಸಿದೆ. ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳಿಗೆ ಕೋವಿಡ್ ನಿಯಮಾವಳಿಗೆ ಒಳಪಟ್ಟು ಅನುಮತಿಸಿದೆ.

ಹೋಟೆಲ್, ರೆಸ್ಟಾರೆಂಟ್, ಆತಿಥ್ಯ ಸೇವೆ ಒದಗಿಸುವ ಸಂಸ್ಥೆಗಳಿಗೆ, ಸರ್ಕಾರಿ ಅಧಿಕಾರಿ, ಪೊಲೀಸ್, ಆರೋಗ್ಯ ಸಹಾಯಕರಿಗೆ ಆಹಾರ ಪೂರೈಸಲು ಅನುಮತಿಸಿದೆ. ಹೋಟೆಲ್, ರೆಸ್ಟಾರೆಂಟ್, ತಿನಿಸು ಕೇಂದ್ರಗಳಿಗೆ ಪಾರ್ಸಲ್ ಮತ್ತು ಹೋಮ್ ಡಿಲೇವರಿಗೆ ಅನುಮತಿಸಿದೆ. ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳು, ಶಾಪಿಂಗ್ ಮಾಲ್ಸ್, ಜಿಮ್ ಕೇಂದ್ರಗಳು, ಸ್ಪೋಟ್ರ್ಸ್ ಕಾಂಪ್ಲೆಕ್ಸ್, ಸ್ವಿಮಿಂಗ್ ಪೂಲ್ಸ್, ಮನೋರಂಜನೆ ಪಾರ್ಕ್‍ಗಳು, ಥೇಟರ್ಸ್, ಬಾರ್ ಮತ್ತು ಅಡಿಟೋರಿಯಂ, ಅಸೆಂಬ್ಲಿ ಹಾಲ್‍ಗಳು ಮುಚ್ಚುವಂತೆ ಸೂಚಿಸಿದೆ. ಕ್ರೀಡಾಂಗಣ ಹಾಗೂ ಆಟದ ಮೈದಾನ ಮುಚ್ಚುವಂತೆ ಆದೇಶಿಸಿದೆ. ಕ್ರೀಡಾ ಘಟನೆಗಳನ್ನು ನಿರ್ಣಯಿಸುವುದು ಹಾಗೂ ಪ್ರೇಕ್ಷಕರಿಲ್ಲದೇ ತರಬೇತಿಗೆ ಮಾತ್ರ ಅನುಮತಿಸಿದೆ.

ಸ್ವಿಮಿಂಗ್ ಫೆಡ್ರೆಶನ್ ಆಫ್ ಇಂಡಿಯಾದಿಂದ ಅನುಮತಿ ಪಡೆದ ಈಜು ಕೇಂದ್ರಗಳಿಗೆ ಕ್ರೀಡಾಪಟುಗಳಿಗೆ ತರಬೇತಿಗೆ ಮಾತ್ರ ಅನುಮತಿಸಿದೆ. ಎಲ್ಲಾ ಸಾಮಾಜಿಕ/ ರಾಜಕೀಯ/ ಕ್ರೀಡೆ/ ಮನೋರಂಜನೆ /ಸಂಸ್ಕ್ರತಿಕ/ ಧಾರ್ಮಿಕ ಹಾಗೂ ಇತರೆ ಜನದಟ್ಟನೆಯಿಂದ ಕೂಡುವ ಕಾರ್ಯಕ್ರಮ ನಿಷೇಧಿಸಿದೆ. ನಗರದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪೂಜೆ ಮಾಡುವುದನ್ನು ನಿಷೇಧಿಸಿದೆ.

ದಿನನಿತ್ಯದ ಧಾರ್ಮಿಕ ಪೂಜೆ ಕಾರ್ಯಕ್ರಮಗಳನ್ನು ಸಾರ್ವಜನಿಕರು ಇಲ್ಲದೆ ಮುಂದುವರೆಸಲು ಅನುಮತಿಸಿದೆ. ತುರ್ತು ಸೇವೆ ಒದಗಿಸುವ ಎಲ್ಲಾ ಸರಕಾರಿ ಕಚೇರಿಗಳು ಕೆಲಸ ನಿರ್ವಹಿಸತಕ್ಕದ್ದು. ಆರೋಗ್ಯ ಮತ್ತು ತುರ್ತು ಸೇವೆ ಒದಗಿಸುವ ಔಷಧ ಅಂಗಡಿಗಳು, ಆರೋಗ್ಯ ಕೇಂದ್ರಗಳು, ಪಶು ವೈದ್ಯಕೀಯ ಆಸ್ಪತ್ರೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಬೇಕು.

ಅಂತರ ಜಿಲ್ಲಾ/ ರಾಜ್ಯ ಆರೋಗ್ಯ ತುರ್ತು ಸೇವೆ ಒದಗಿಸುವ ಲ್ಯಾಬ್ ಟೆಕ್ನಿಶಿಯನ್ಸ, ಫಾರ್ಮಾಸಿಸ್ಟ್, ವಿಜ್ಞಾನಿಗಳಿಗೆ ಹಾಗೂ ಇತರೆ ಆರೋಗ್ಯ ಸೇವೆ ಒದಗಿಸುವವರಿಗೆ ಸಂಚಾರಕ್ಕೆ ಅನುಮತಿಸಿದೆ. ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳಿಗೆ ಅನುಮತಿಸಿದೆ. ಸರಕು ಸಾಗಾಣಿಕೆಗಳಿಂದ ತುಂಬಿರುವ ಹಾಗೂ ಖಾಲಿ ಇರುವ ವಾಹನಗಳು, ಹೋಮ ಡಿಲೇವರಿ, ಮಾಡುವ ವಾಹನಗಳು, ಇ-ಕಾಮರ್ಸ್ ಕಂಪನಿಯ ವಾಹನಗಳು ಸಂಚರಿಸಲು ಅನುಮತಿಸಿದೆ. ಸಾರ್ವಜನಿಕ, ಖಾಸಗಿ ಬಸ್ ಸೇವೆ ಹಾಗೂ ಪ್ರಯಾಣಿಕರ ವಾಹನ ಸಂಚಾರ ನಿಷೇಧಿಸಿದೆ.(ಸರಕಾರದ ಮಾರ್ಗಸೂಚಿಗಳಿಗೆ ಒಳಪಟ್ಟುವುಗಳಿಗೆ ಹೊರತುಪಡಿಸಿ).

ಅಂತರ ಜಿಲ್ಲಾ/ರಾಜ್ಯ ಪ್ರಯಾಣಕ್ಕೆ ತುರ್ತು ಸೇವೆಗಳಿಗೆ ಮಾತ್ರ ಮಾರ್ಗ ಸೂಚಿಯನ್ವಯ ಅನುಮತಿಸಿದೆ. ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪರಿಕ್ಷಾ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಸಿದೆ. ಅಟೋ ಮತ್ತು ಟ್ಯಾಕ್ಸಿ ತುರ್ತು ಸೇವೆಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿಸಿದೆ.

ರೋಗಿಗಳು ಹಾಗೂ ಅವರ ಸಹಾಯಕರಿಗೆ ತುರ್ತು ಸಂದರ್ಭದಲ್ಲಿ ಸಂಚರಿಸಲು ಅನುಮತಿಸಿದೆ. ಎಲ್ಲಾ ಕೈಗಾರಿಕಾ ಕಂಪನಿಗಳಲ್ಲಿ ರಾತ್ರಿ ಪಾಳೆಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಅನುಮತಿಸಿದೆ, ಕಂಪನಿಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು.

ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್‍ನೇಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ.ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ. ಕೆಲಸ ನಿರ್ವಹಿಸುವ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಎಲ್ಲಾ ಕೈಗಾರಿಕಾ ಕಂಪನಿ/ಸಂಸ್ಥೆ/ ತುರ್ತು ಸೇವೆ ಒದಗಿಸುವ ಸಂಸ್ಥೆಗಳಿಗೆ 24 ಗಂಟೆ ಕೆಲಸ ನಿರ್ವಹಿಸಲು ನೌಕರರಿಗೆ ಅನುಮತಿಸಿದೆ.

ಕಂಪನಿಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್‍ನೇಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ.ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ. ಕೆಲಸ ನಿರ್ವಹಿಸುವ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.

ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಸಾರ್ವಜನಿಕರಿಗೆ ಅವಶ್ಯಕವಾಗಿರುವ ನೆರೆಹೊರೆ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ/ಹಣ್ಣು/ತರಕಾರಿ/ ಹಾಲು/ಮಾಂಸ ಹಾಗೂ ಮೀನು ಮಾರಾಟಕ್ಕೆ ಅನುಮತಿಸಿದೆ. ಅತ್ಯವಶ್ಯಕ ವಸ್ತುಗಳನ್ನು ಮನೆ ವಿತರಣೆ (ಹೋಮ ಡಿಲೆವರಿ) ಮಾಡಲು ಕೋವಿಡ್-19 ನಿಯಮಾವಳಿಯನ್ವಯ ಅನುಮತಿಸಿದೆ.

ಬ್ಯಾಂಕ್/ ಇನ್ಸುರೆನ್ಸ/ ಎಟಿಎಮ್ ಕೆಂದ್ರಗಳು ಕಾರ್ಯನಿರ್ವಹಿಸಲು ಅನುಮತಿಸಿದೆ. ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ಸ್ ಮೀಡಿಯಾ ಕಾರ್ಯನಿರ್ವಹಿಸಲು ಅನುಮತಿಸಿದೆ. ಎಲ್ಲಾ ರೀತಿಯ ಕಟ್ಟಡ ಕಾಮಗಾರಿಗಳಿಗೆ ಅನುಮತಿಸಿದೆ. ಮದುವೆ ಸಮಾರಂಭಗಳಿಗೆ 50 ಜನರಿಗೆ ಮೀರದಂತೆ ಕೋವಿಡ್-19 ಮಾರ್ಗಸೂಚಿ ಪಾಲಿಸುವ ಷರತ್ತುಗೊಳಪಟ್ಟು ಅನುಮತಿ ನೀಡುವುದು. ಅಂತ್ಯ ಕ್ರಿಯೆ/ಶವ ಸಂಸ್ಕಾರಕ್ಕೆ 05 ಜನರಿಗೆ ಮೀರದಂತೆ ಕೋವಿಡ್-19 ಮಾರ್ಗಸೂಚಿ ಪಾಲಿಸುವ ಷರತ್ತುಗೊಳಪಟ್ಟು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

1 hour ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

1 hour ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

1 hour ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

1 hour ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

1 hour ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420