ಆಂಧ್ರ ಪ್ರದೇಶದಂತೆ ರಾಜ್ಯದಲ್ಲಿ ಸಹ ಉಚಿತ ಕೋವಿಡ್ ಚಿಕಿತ್ಸೆ ನೀಡಲು ಆಗ್ರಹ

ಕಲಬುರಗಿ: ದೇಶಾದ್ಯಾಂತ ಹೆಚ್ಚುತ್ತಿರುವ ಕರೋನಾ ವೈರಸ್‌ನ ಅಟ್ಟಹಾಸಕ್ಕೇ ಈಗಾಗಲೇ ಜನಜೀವನ ತತ್ತರಿಸಿ ಹೋಗಿದ್ದು, ಬಡವರಿಗೆ ಜೀವನ ನಡೆಸುವದು ಸವಾಲಾಗಿದ್ದು, ಇಂತಹ ಸಮಯದಲ್ಲಿ ಕರೋನಾ ರೋಗಕ್ಕೆ ಒಳಗಾದ ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹೋದರೆ ಹಣವಿಲ್ಲದೆ ಒದ್ದಾಡುವಂತಾಗುತ್ತಿದೆ,  ಆಂದ್ರ ಪ್ರದೇಶದ ಜಗನ ಮೋಹನ ರೆಡ್ಡಿಯವರ ಆಡಳಿತ ಸರಕಾರವು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆಗೆ ಆದೇಶಿಸಿದೆ. ಅದರಂತೆ ಕರ್ನಾಟಕ ಸರಕಾರವು  ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಕೋವಿಡ ಚಿಕಿತ್ಸೆಗೆ ಆದೇಶ ಹೊರಡಿಸಬೇಕೆಂದು ಕರ್ನಾಟಕ ವಿಜಯ ಸೇನೆ ಜಿಲ್ಲಾದ್ಯಕ್ಷರಾದ ರಾಜು ಎಮ್ ಹಿರೇಮಠ ಅವರು ಸರಕಾರಕ್ಕೇ ಆಗ್ರಹಿಸದ್ದಾರೆ.

ಕೋವಿಡ್ ಹೆಸರಲ್ಲಿ ರಾಜ್ಯದ ಖಾಸಗಿ ಆಸ್ಪತ್ರೆಗಳು ಹಣ ವಸೂಲಿಗೆ ಬೆನ್ನಹತ್ತಿವೆ ಎಂಬ ಮಾತು ಸಹ ಜನರ ಬಾಯಲ್ಲಿ ಕೇಳಿ ಬರುತ್ತಿದ್ದೆ, ಇದನ್ನು ಆಲಿಸಿದ ಬಡವರು ಎಲ್ಲಿ ಖಾಸಗಿ ಆಸ್ಪತ್ರೆಯವರು ಹೆಚ್ಚಿನ ಹಣ ವಸೂಲಿ ಮಾಡುತ್ತಾರೊ ಎಂಬ ಭಯದಿಂದ ಖಾಸಗಿ ಆಸ್ಪತ್ರಗೆ ಬರದೆ ಹಿಂಜರಿಯುತ್ತಿದ್ದು, ಇದರಿಂದ ಬಡವರು ಜೀವ ಕಳೆದುಕೊಳ್ಳುವಂತಾಗುತ್ತಿದೆ, ಬಡವರ ಮನೆ, ಮನದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ, ಪಕ್ಕದ ರಾಜ್ಯ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದ ಜಗನ ಮೋಹನ ರೆಡ್ಡಿಯವರು ಆಂದ್ರ ಪ್ರದೇಶದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆಗೆ ಆದೇಶಿಸಿದ್ದು, ಜಗನ ಮೋಹನ ರೆಡ್ಡಿಯವರ ಈ ಆದೇಶ ಆಂದ್ರ ಪ್ರದೇಶದ ಜನರಲ್ಲಿ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ.

ಆಳಂದ: ಬಿಜೆಪಿ ಕೋವಿಡ್ ನಿರ್ವಹಣಾ ಘಟಕ ರಚನೆ

ಅದೇ ರೀತಿ ಅವರ ಈ ಆದೇಶ ದೇಶ ವ್ಯಾಪ್ತಿಯಲ್ಲಿ ಹರದಾಡುತ್ತಿದೆ. ಇದರಿಂದ ಆಂಧ್ರ ಪ್ರದೇಶದ ಬಡವರಲ್ಲಿ ಅಡಗಿಡ ಕೋವಿಡ್ ರೋಗದ ಭಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಆಂದ್ರ ಪ್ರದೇಶದಲ್ಲಿ ರೋಗಿಗಳು ಯಾವುದೆ ಖಾಸಗಿ ಆಸ್ಪತ್ರೆಗೆ ಹಿಂಜರಿಕೆ ಇಲ್ಲದೆ ದಾಖಲಾಗುತ್ತಿದ್ದಾರೆ. ಸದ್ಯ ಕರ್ನಾಟಕದಲ್ಲಿ ಕೋವಿಡ್ ರೋಗದ ಕುರಿತು ಖಾಸಗಿ ಆಸ್ಪತ್ರೆಗಳ ಕುರಿತು ಭಯದ ವಾತಾವರಣವಿದ್ದು, ಇದನ್ನು ಶಮನಗೊಳಿಸಲು ಈ ಕೂಡಲೇ ರಾಜ್ಯ ಸರಕಾರ ಉಚಿತ ಕೊವಿಡ್ ಚಿಕಿತ್ಸೆಗೆ ಆದೇಶಿಸಿ ಬಡವರ ಕಣ್ಣಿರು ಒರೆಸುವ ಕೆಲಸ ಮಾಡಬೇಕೆಂದು ಅವರು ತಿಳಿಸಿದರು.

ಅಮಾಯಕ ಜನರು ಖಾಸಗಿ ಆಸ್ಪತ್ರೆಗೆ ಹೋದರೆ ಇಲ್ಲ ಸಲ್ಲದ ವಿಚಾರ ಹೇಳಿ ಬಡವರನ್ನು ಭಯ ಭೀತರನ್ನಾಗಿ ಮಾಡಿ ಹಣ ವಸೂಲಿ ದಂಧೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಸಹ ಎಲ್ಲಾ ಮನೆಮನಗಳಲ್ಲಿ ಹರದಾಡುತ್ತಿದ್ದು, ಇದನ್ನು ಅರಿತು ಸರಕಾರ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆಗೆ ಮುಂದಾಗಿ ಬಡವರ ಕಷ್ಟಕ್ಕೆ ಸ್ಪಂಧಿಸಿಬೇಕು, ಕರ್ನಾಟಕದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆಗೆ ಮುಂದಾದರೆ ಜನರು ಆತ್ಮಸ್ಥೈರ್ಯದೊಂದಿಗೆ ಯಾವುದೆ ಹಿಂಜರಿಕೆ ಇಲ್ಲದೆ ಹಣದ ಚಿಂತೆ ಇಲ್ಲದೆ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ, ಇಂತಹ ಆದೇಶ ಆಲಿಸಿದ ರೋಗಿಗಳಲ್ಲಿ ಹೊಸ ಚೈತನ್ಯ ಬಂದು ಸ್ವಯಂ ಪ್ರೇರಿತರಾಗಿ ಕೋವಿಡ್ ರೋಗಕ್ಕೆ ಒಳಗಾದವರು ಆಸ್ಪತ್ರೆ ಯಾವುದೆ ಹಿಂಜರಿಕೆ ಇಲ್ಲದೆ ದಾಖಲಾಗುತ್ತಾರೆ, ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ವಸೂಲಿಗೆ ಕಡಿವಾಣ ಹಾಕಲು ಕಡಕ ಆದೇಶ ಹೊರಡಿಸುವದು ಸೂಕ್ತವೆಂದು ಅವರು ಅಭಿಪ್ರಾಯ ಪಟ್ಟರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

3 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

14 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 day ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago