ಕಲಬುರಗಿ: ಪಡಿತರ ಅಂಗಡಿಗಳಲ್ಲಿ ನೀಡುವ ಎರಡು ಕೆ.ಜಿ ಅಕ್ಕಿ, ಮೂರು ಕೆ.ಜಿ ಜೋಳದಿಂದ ಬದುಕಲಾದೀತೆ? ಉಳಿದ ದಿನ ಉಪವಾಸದಿಂದ ಸಾಯಬೇಕೆ ಎಂದು ಪ್ರಶ್ನಿಸಿದ ಗದಗ್ ಜಿಲ್ಲೆಯ ರೈತ ಸಂಘದ ಕಾರ್ಯಕರ್ತನನ್ನು ಸಾಯಿ ಎಂದ ಆಹಾರ ಸಚಿವರ ಉದ್ಧಟತನದ ಹೇಳಿಕೆಯ ವಿರುದ್ಧ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯಸಮಿತಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ ಈ ಹಿಂದೆ ಕೂಡಾ ಮನೆಯಲ್ಲಿ ಟಿ.ವಿ. ಇದ್ದವರಿಗೆ ಬಿ.ಪಿ.ಎಲ್ ರೇಷನ್ ಕಾರ್ಡ್ ಹಿಂಪಡೆಯುವ ಮಾತುಗಳನ್ನಾಡಿ ನಂತರ ಜನತೆಗೆ ಆಹಾರ ಸಚಿವರು ಕ್ಷಮೆ ಕೇಳಿದ್ದರು, ಈಗ ಮತ್ತೆ ಜನವಿರೋಧಿ ಹೇಳಿಕೆ ನೀಡುವ ಮೂಲಕ ಸಚಿವ ಸ್ಥಾನಕ್ಕೆ ಕಂಳಕ ತರುತ್ತಿದ್ದಾರೆ. ಜನಪ್ರತಿನಿಧಿಗಳಾಗಿ ಪಾಳೇಗಾರರಂತೆ ವರ್ತಿಸುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರು ಸಚಿವರಾಗಿ ಮುಂದುವರೆಯಲು ಅನರ್ಹರು ಕೂಡಲೆ ರಾಜೀನಾಮೆ ನೀಡಬೇಕೆಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷೆರಾದ ಕೆ ನೀಲಾ ಆಗ್ರಹಿಸಿದ್ದಾರೆ.
ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದ ವಿಶ್ವ ಗುರು ಭಾರತದ ಬಗ್ಗೆ ನಿಮಗೆ ಗೊತ್ತಾ?
ರಾಜ್ಯದ ಜನರು ಬರ, ನೆರೆ, ಕೋವಿಡ್ ಪರಿಣಾಮಗಳಿಂದಾಗಿ ಸಂಕಷ್ಟದಲ್ಲಿದ್ದು ಪಡಿತರ ವ್ಯವಸ್ಥೆಯ ಮೂಲಕ ನೀಡುವ ದಿನಸಿಯನ್ನು ಅವಲಂಬಿಸಿದ್ದಾರೆ. ಬಿ.ಪಿ.ಎಲ್ ಕಾರ್ಡ್ ಮೂಲಕ ನೀಡುವ ಎರಡು ಕೆ.ಜಿ ಅಕ್ಕಿ, ಮೂರು ಕೆ.ಜಿ ಜೋಳ/ರಾಗಿಯಿಂದ ಒಬ್ಬರ ಹೊಟ್ಟೆಯಾದರು ತುಂಬಲು ಸಾಧ್ಯವಾ ಎಂದು ಸಚಿವರು ವಿಚಾರ ಮಾಡಬೇಕು. ಸ್ವತಃ ಅವರು ಬಿ.ಪಿ.ಎಲ್ ಕಾರ್ಡ್ ಮೂಲಕ ನೀಡುವ ದಿನಸಿಯನ್ನು ಒಂದು ತಿಂಗಳ ಕಾಲ ತಿಂದು ತೋರಿಸಬೇಕು ಎಂದು ಸಂಘಟನೆಯು ಒತ್ತಾಯಿಸಿದೆ.
ಅನ್ನ ಭಾಗ್ಯ ಯೋಜನೆಯ ಪಡಿತರದ ಅಕ್ರಮ ಮಾರಾಟ ತಡೆಯುವಲ್ಲಿ ಕೂಡಾ ಕರ್ನಾಟಕ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗೆ ಪೂರಕವಾಗಿ ಪಡಿತರ ವ್ಯವಸ್ಥೆಯನ್ನು ಕಳಚಿ ಹಾಕಿ ಖಾಸಗಿ ಕಾರ್ಪೊರೇಟ್ ವ್ಯಾಪಾರಕ್ಕೆ ಸಾರ್ವಜನಿಕ ಪಡಿತರದ ಪಲಾನುಭವಿಗಳನ್ನು ಬಲಿ ಕೊಡಲು ರಾಜ್ಯ ಸರ್ಕಾರ ಎಲ್ಲ ತಯಾರಿ ನಡೆಸಿದೆ ಎಂದು ಆರೋಪಿಸಿದ್ದಾರೆ.
ಆಂಧ್ರ ಪ್ರದೇಶದಂತೆ ರಾಜ್ಯದಲ್ಲಿ ಸಹ ಉಚಿತ ಕೋವಿಡ್ ಚಿಕಿತ್ಸೆ ನೀಡಲು ಆಗ್ರಹ
ಕೋವಿಡ್ ಮತ್ತು ಇತರೆ ಸಾಂಕ್ರಾಮಿಕ ರೋಗ ರುಜಿನಗಳನ್ನ ಎದುರಿಸಲು ದೇಹಕ್ಕೆ ಜೀವ ನಿರೋಧಕ ಶಕ್ತಿ ಇರಬೇಕೆಂದು ಇದೇ ಸರ್ಕಾರದ ಆರೋಗ್ಯ ಇಲಾಖೆ ಹೇಳುತ್ತಿದೆ…ಇಂಥಹ ಸಂದರ್ಭದಲ್ಲಿ ನೀಡುತ್ತಿರುವ ಪಡಿತರವನ್ನು ಕಡಿತಗೊಳಿಸಿ ಸರ್ಕಾರ ಜನತೆಯನ್ನು ಸಾವಿನಂಚಿಗೆ ದೂಡುತ್ತಿರುವುದು ರಾಜ್ಯ ಬಿ.ಜೆ.ಪಿ ಸರ್ಕಾರದಲ್ಲಿ ಸುಸ್ಪಷ್ಟ ವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಉಮೇಶ್ ಕತ್ತಿ ಮತ್ತೆ ಮತ್ತೆ ಜನತೆಯ ಕ್ಷಮೆ ಕೇಳಲು ಸಹ ಅನರ್ಹರಾಗಿದ್ದು, ಕೂಡಲೆ ರಾಜೀನಾಮೆ ನೀಡಬೇಕೆಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಂದಾದೇವಿ ಮಂಗೊಂಡಿ ಒತ್ತಾಯಿಸುತ್ತದೆ.
ಚಿಂಚೋಳಿ: ತಾಲೂಕಿನ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
View Comments
ಒಳ್ಳೆಯ ಸುದ್ದಿ. ಬದುಕಲು ಆಹಾರ ಮುಖ್ಯ.