ಬಿಸಿ ಬಿಸಿ ಸುದ್ದಿ

ಕಾಮಿ೯ಕ ಸಂಹಿತೆ ನಿಯಮ ರಚಿಸುವ ತರಾತುರಿಯ ಬದಲು ಜನರ ಜೀವ ಉಳಿಸಲು ಸಿಪಿಐ(ಎಂ) ಒತ್ತಾಯ

ಕಲಬುರಗಿ: ರಾಜ್ಯ ಬಿಜೆಪಿ ಸಕಾ೯ರವು ಕೋವಿಡ್ ಸೋಂಕಿತರ ಸಾವು ನೋವು ತಡೆಯುವ ಬದಲು ಕಾಮಿ೯ಕ ಸಂಹಿತೆಗಳ ಅಡಿ ನಿಯಮಗಳನ್ನು ರಚಿಸಿ ಜಾರಿಗೆ ತರಲು ತರಾತುರಿಯಲ್ಲಿ ಇರುವುದು ಅವಿವೇಕದ ಪರಮಾವಧಿ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ) ಕಲಬುರಗಿ ಜಿಲ್ಲಾ ಸಮಿತಿ ಖಂಡಿಸಿವೆ. ನಿಯಮ ರಚಿಸಲು ಗಮನ ‌ನೀಡುವ ಬದಲು ರಾಜ್ಯದ ಜನತೆಯ ಜೀವ ಉಳಿಸಲು ಆಧ್ಯತೆ ನೀಡಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪಾ ಮಮಶೆಟ್ಟಿ ತಿಳಿಸಿದ್ದಾರೆ.

SSP ಶಿಷ್ಯವೇತನ ಸ್ಕಾಲರ್ಶಿಪ್ ಮೇ. 31 ಅವಧಿ ವಿಸ್ತರಣೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಮಿ೯ಕ ಸಂಹಿತೆಗಳ ಅಡಿ ಕೇಂದ್ರ ಸರ್ಕಾರವೆ ನಿಯಮಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ರಾಜ್ಯ ಸಕಾ೯ರವು ವೇತನ ಸಂಹಿತೆಗಳ ಅಡಿ ನಿಯಮಗಳನ್ನು ರಚಿಸಿ ಜಾರಿಗೆ ತರಲು ಮುಂದಾಗಿದೆ. ಇಂದು ಮೇ 3 ರಂದು ರಾಜ್ಯ ಸಕಾ೯ರವು ಕರೆದಿದ್ದ ಆನ್‌ಲೈನ್ ಸಮಾಲೋಚನ ಸಭೆಯನ್ನು ಎಲ್ಲಾ ಕೇಂದ್ರ ಕಾಮಿ೯ಕ ಸಂಘಟನೆಗಳು ಬಹಿಷ್ಕರಿಸಿ ಕೋವಿಡ್ ಆರೋಗ್ಯ ತುತು೯ ಮುಗಿದ ನಂತರ ದೈಹಿಕ ಸಭೆ ಕರೆಯಲು ಒತ್ತಾಯಿಸಿವೆ.

ಕೊರೊನಾ ನಿಯಂತ್ರಣ ರಾಜ್ಯ ಸರ್ಕಾರ ವಿಫಲ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ

ಆನಂತರ ಅದನ್ನು ಅಂತಿಮಗೊಳಿಸ ಬೇಕೆಂದು ಆಗ್ರಹಿಸಿವೆ. ಆದರು ಸಹಾ ಮಾಲೀಕರ ಪ್ರತಿನಿಧಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿರುವ ರಾಜ್ಯ ಬಿಜೆಪಿ ಸರಕಾರಕ್ಕೆ  ಜನರ ಜೀವಕ್ಕಿಂತ ಬಂಡವಾಳಿಗರ ಸೇವೆಯೆ ಆಧ್ಯತೆಯಾಗಿದೆ ಎಂದಿದೆ ಸಿಪಿಐ(ಎಂ). ಇದರ ಜೊತೆಯಲ್ಲೆ ಕೈಗಾರಿಕಾ ಸಂಬಂಧಗಳ ಸಂಹಿತೆ  ಅಡಿ ಕರಡು ನಿಯಮಾವಳಿಗಳನ್ನು ಇಂದು ಮೇ 3 ರಂದು ಪ್ರಕಟಿಸಿ 30 ದಿನಗಳಲ್ಲಿ ಆಕ್ಷಪಣೆಗಳು ಏನಾದರು ಇದ್ದಲ್ಲಿ  ಸಲ್ಲಿಸಲು ಕೋರಿದೆ.

ಕಲಬುರಗಿಯಲ್ಲಿ ಆಕ್ಸಿಜನ್ ಕೊರತೆ ಇದ್ದರೂ ಬೇರೆ ರಾಜ್ಯಕ್ಕೆ ಪೂರೈಕೆ!?

ಕೋವಿಡ್ ಎರಡನೆ ಅಲೆ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿ ಸಾವು ನೋವಿಗೆ ತುತ್ತಾಗಿರುವ ಕಾಮಿ೯ಕರಿಗೆ ನೆರವು ಪರಿಹಾರ ನೀಡಬೇಕಾದ ಕಾಮಿ೯ಕ ಇಲಾಖೆಯ ಮೇಲೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾ೯ರಗಳು ಒತ್ತಡ ಹೇರಿ ಕಾಮಿ೯ಕರ ಪರಿಹಾರ ಕಾಯ೯ಗಳ ಬದಲು ಬಂಡವಾಳಿಗರ ಸೇವೆಯಲ್ಲಿ ತೊಡಗಿಸಿವೆ ಕೋವಿಡ್ ಎರಡನೇ ಅಲೆಯ ಸಂಕಷ್ಟ ,ಲಾಕ್ಡೌನ್ ತೆರವಿನ ನಂತರ ದೈಹಿಕ ಸಭೆ ನಡೆಸಿ ಚಚಿ೯ಸ ಬೇಕೆಂದು ಮತ್ತು ಸರ್ಕಾರದ ಪೂರ್ಣ ಸಮಯ ಶಕ್ತಿಯನ್ನು ಕೋವಿಡ್ ನಿಯಂತ್ರಣಕ್ಕೆ ಮತ್ತು ಸಾವು ನೋವು ತಡೆಯಲು ಹಾಗು ಪರಿಹಾರ ಒದಗಿಸುವ ಕಾಯ೯ಕ್ಕೆ ವಿನಿಯೋಗಿಸ ಬೇಕೆಂದು ಪಕ್ಷ ಒತ್ತಾಯಿಸಿದೆ ಎಂದು ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago