ಕಲಬುರಗಿ: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರೊತೆಯಿಂದ ಒಂದೇ ದಿನದಲ್ಲಿ 24 ಸೋಂಕಿತರು ಸಾವನ್ನಪ್ಪಿದ್ದಾರೆ.ರಾಜ್ಯದ ಹಲವೆಡೆ ಸಾವುಗಳ ಸಂಖ್ಯೆ ಏರುತ್ತಲೇ ಇದೆ.ಜೋತೆಗೆ ದಿನದಿಂದ ದಿನಕ್ಕೆ ಪಾಸಿಟಿವ್ ಕೇಸುಗಳು ಹೆಚ್ಚಾಗುತ್ತಿವೆ.ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ನೀಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಮುಖ್ಯಮಂತ್ರಿಗಳು, ಸಚಿವರುಗಳು ಕ್ರಮ ಕೈಗೊಳ್ಳದೆ ಉಡಾಫೆ ಹೇಳಿಕೆ ನೀಡುತ್ತಿದ್ದಾರೆ.ಆಕ್ಸಿಜನ್ ಕೊರೊತೆಯಿಂದ ಚಾಮರಾಜ ನಗರದಲ್ಲಿ ಹತ್ತಾರು ಸೋಂಕಿತರ ಸಾವಿಗೆ ಕಾರಣರಾಗಿದ್ದಾರೆ.ಇದೊಂದು ದೊಡ್ಡ ದುರಂತವಾಗಿದೆ. ಕಲಬುರಗಿಯಲ್ಲೂ ಆಕ್ಸಿಜನ್ ಸಿಗದೆ 4 ಕೊವೀಡ ರೋಗಿಗಳು ನರಳಾಡಿ ಒಂದೇ ದಿನದಲ್ಲಿ ಸತ್ತಿದ್ದಾರೆ.
ಕಲಬುರಗಿಯಲ್ಲಿ ಆಕ್ಸಿಜನ್ ಕೊರತೆ ಇದ್ದರೂ ಬೇರೆ ರಾಜ್ಯಕ್ಕೆ ಪೂರೈಕೆ!?
ಇಷ್ಟಾದರೂ ಸರಕಾರ ಆಕ್ಸಿಜನ್ ಪೂರೈಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ.ಸಚಿವರು,ಶಾಸಕರು ಸೇರಿದಂತೆ ಅಧಿಕಾರಿಗಳಿಗೆ ಜನರ ಜೀವದ ಬಗ್ಗೆ ಕಾಳಜಿ ಇಲ್ಲ.ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಉದ್ಭವವಾದರೂ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ.ರೆಮ್ಡಿಸಿವಿರ ಇಂಜೆಕ್ಷನ್ ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ.ಸೋಂಕಿತರಿಗೆ ಔಷಧಗಳು ದೊರೆಯುತ್ತಿಲ್ಲ.ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಸಿಟಿವ್ ಬಂದವರಿಗೆ ವಿಚಾರಿಸುತ್ತಿಲ್ಲ.ಸರಿಯಾದ ಮಾಹಿತಿಯೂ ನೀಡುತ್ತಿಲ್ಲ.
ಇನ್ನು ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲವಾದ್ದರಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಬೆಡ್ ಹಾಗೂ ಸಕಾಲಕ್ಕೆ ಚಿಕಿತ್ಸೆ ಸಿಗದೆ ನೂರಾರು ಸೋಂಕಿತರು ಸಾವನ್ನಪ್ಪಿದ್ದಾರೆ.ಪರಿಸ್ಥಿತಿ ಗಂಭೀರ ಆದರೂ ಮುಖ್ಯಮಂತ್ರಿಗಳು ನಿಭಾಯಿಸಲು ವಿಫಲವಾಗಿದ್ದಾರೆ.ಹಾಗೂ ಸಾವಿರಾರು ಜನರ ಸಾವಿಗೆ ನೇರ ಹೊಣೆ ಆಗಿರುವುದರಿಂದ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.