ಕಲಬುರಗಿ: ಜನರ ಕಷ್ಟವನ್ನು ನೋಡಿ ನಲುಗಿ ಹೋಗಿದ್ದೇನೆ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು ಇಷ್ಟೊಂದು ಅಸಹಾಯಕನಾಗಿದ್ದೇನೆ, ಕೊರೊನಾ ಸೋಂಕಿತರ ಪಾಡು ನಮ್ಮ ಶತ್ರುವಿಗೂ ಬರಬಾರದು, ನೀವೇ ಏನೇ ಮಾಡ್ರಿ, ನಿಮ್ ಕೈ ಮೀಗಿತೀನಿˌ ಪ್ಲೀಸ್ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಯ ಮುಂದೆ ದಯನೀಯವಾಗಿ ಬೇಡಿಕೊಳ್ಳುತ್ತಿರುವವರು ಬೇರಾರು ಅಲ್ಲ ಚಿತ್ತಾಪುರ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ.
ಹೌದುˌ ಅಕ್ಷರಶ: ಪ್ರಿಯಾಂಕ್ ಖರ್ಗೆ ಜಿಲ್ಲೆಯ ಜನರ ಕಷ್ಟವನ್ನು ನೋಡಿ ದಿನವಿಡಿ ಚಿಂತಿತರಾಗುತ್ತಿದ್ದಾರೆ. ಮುಖ್ಯಮಂತ್ರಿˌ ಆರೋಗ್ಯ ಮಂತ್ರಿ ಸೇರಿದಂತೆ ಹಲವರಿಗೆ ನಮ್ಮ ಜಿಲ್ಲೆಗೆ ಆಕ್ಸಿಜನ್ ಕೊಡಿ ಎಂದು ನಿರಂತರ ಪತ್ರˌ ಫೋನ್ ಗಳ ಮೂಲಕ ಮನವಿ ಮಾಡುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಭೇಟಿ ನೀಡಿ, ಕಲಬುರಗಿ ಜಿಲ್ಲೆಗೆ ಬೇಕಾಗುವ ಬೆಡ್ˌ ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಹಲವಾರು ಸೌಲಭ್ಶ ಕೊಟ್ಟು ನಮ್ಮ ಜಿಲ್ಲೆಯ ಜನರ ಪ್ರಾಣ ಉಳಿಸಿ ಕೊಡಿ ಎಂದು ಬೇಡಿಕೊಂಡಿದ್ದಾರೆ.
ಕೊರೊನ ಸೋಂಕಿತರು ಮತ್ತು ಅವರ ಕುಟುಂಬದವರ ಕಷ್ಟ ಯಾವ ಶತ್ರುವಿಗೂ ಬರಬಾರದೆಂದು ಪ್ರಾರ್ಥಿಸುತ್ತಿದ್ದಾರೆ. ಅವರ ಕಷ್ಟ ಸೋಂಕಿತರ ಕುಟುಂಬಸ್ಥರಿಂದ ನನಗೆ ದಿನವಿಡೀ ಕರೆಗಳು ಬರುತ್ತಲೇ ಇವೆ, ಈಗಲೂ ಫೋನ್ ಕಾಲ್‌ಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಒಬ್ಬರ ಸಮಸ್ಯೆ ಆಲಿಸುತ್ತಿರುವಾಗಲೇ, ಇನ್ನೂ ಐದಾರು ಜನರ ಕರೆಗಳು ಕಾಯುತ್ತಿರುತ್ತವೆ. ಅವರ ಕಷ್ಟದಲ್ಲಿ ನಾನೂ ಭಾಗಿದಾರನಾಗುತ್ತಿದ್ದುˌ ಸರ್ಕಾರವೂ ಅವರಿಗೆ ಸಹಾಯ ಹಸ್ತ ಚಾಚಲು ಮನವಿ ಮಾಡುತ್ತಿದ್ದೇನೆ.
ಜಿಲ್ಲಾಸ್ಪತ್ರೆಯ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ನಾನು ಚಿತ್ತಾಪುರದಲ್ಲೇ ನಾನೇ ಖುದ್ದು ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದ್ದೇನೆ. ಇದನ್ನೇ ಬೇರೆ ತಾಲೂಕಿನವರೂ ಅನುಸರಿಸಬೇಕೆಂದು ಮನವಿ ಮಾಡಿದ್ದೇನೆ, ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಸಂಸದರಿಗೆ ಹೇಳಿದ್ದೇನೆ. ಆದರೆ, ಈ ಕುರಿತು ಯಾರೂ ಸಹ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.
ಬೆಡ್, ಆಕ್ಸಿಜನ್, ವೆಂಟಿಲೇಟರ್, ರೆಮಿಡಿಸಿವರ್ ಅವಶ್ಯಕತೆ ಬಹಳಷ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಕೊರೋನಾವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ವೈದ್ಯರುಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ, ನಾನು ಹಿಂದಿನ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೆ. ಆದರೆ ಸರ್ಕಾರದ ಕಡೆಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸರ್ಕಾರ ಸಂಪೂರ್ಣವಾಗಿ ಕೈಚೆಲ್ಲಿ ಕೂತಿದೆ. ಕಲಬುರಗಿಯನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ಪರಿಸ್ಥಿತಿಯ ಮಧ್ಯೆಯೂ ಕೂಡಾ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಜಿಲ್ಲಾ ಪಂಚಾಯತಿ ಸಿಇಓ ಜೊತೆಗೆ ನಾನು ದಿನನಿತ್ಯ ಮಾತನಾಡಿ ನನ್ನ ಕೈಲಾದ ಮಟ್ಟಿಗಿನ ಸಹಾಯವನ್ನು ನನ್ನ ಜನರಿಗಾಗಿ ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದೇನೆ. ಸರ್ಕಾರವನ್ನು ಕೆಲಸ ಮಾಡುವಂತೆ ಪ್ರೇರೇಪಿಸಲು ನಾನು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿದ್ದೇನೆ. ಜಿಲ್ಲೆಯ ಜನರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದೇನೆ, ಮನವಿ ಮಾಡಿದ್ದೇನೆ, ಕೈ ಮುಗಿದು ಬೇಡಿಕೊಂಡಿದ್ದೇನೆ. ಆದರೆ, ಸರ್ಕಾರ ಈವರೆಗೂ ನಮ್ಮ ಜಿಲ್ಲೆಯತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿಯಾಗಿ ಜಿಲ್ಲೆಯ ಜನರ ಜೀವ ಉಳಿಸಲು ಬೇಕಾಗುವ ವ್ಯವಸ್ಥೆಯನ್ನು ಬೇಗನೆ ಮಾಡಿಕೊಡಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಉಸ್ತುವಾರಿ ಸಚಿವರಲ್ಲಿ ಪ್ರಿಯಾಂಕ್ ಖರ್ಗೆ ಭಾವುಕರಾಗಿ ಮನವಿ ಮಾಡಿದ್ದಾರೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…