ಕಲಬುರಗಿ ನಗರದ ನೀರು ಸರಬರಾಜು ನಿರ್ವಹಣೆಯನ್ನು ಐ&ಖಿ ಕಂಪನಿಗೆ ಹಸ್ತಾಂತರ ಮಾಡುವ ಮುನ್ನ ಹೋಗುತ್ತಿಗೆ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಮತ್ತು ಬಾಕಿ ಉಳಿಸಿಕೊಂಡಿರುವ ವೇತನವನ್ನು ಪಾವತಿ ಮಾಡಿದ ತರುವಾಯ ನೀರು ಸರಬರಾಜು ನಿರ್ವಹಣೆಯನ್ನು ಎಲ್&ಟಿ ಕಂಪನಿ ಹಸ್ತಾಂತರ ಮಾಡಬೇಕೆಂದು ಆಗ್ರಹಿಸಿ ಗಣಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ಇರಾಣಿ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಕಲಬುರ್ಗಿ ಮಹಾನಗರದ ಪಾಲಿಕೆಯ ಅಧೀನದಲ್ಲಿರುವ ನೀರು ಸರಬರಾಜು ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೂ ನಿರ್ವಹಿಸುತ್ತಿದ್ದು, ಪ್ರಸ್ತುತ ವ?ದಿಂದ ನೀರು ಸರಬರಾಜು ನಿರ್ವಹಣೆಯ ಜವಾಬ್ದಾರಿಯನ್ನು ಐ&ಖಿ ಕಂಪೆನಿಗೆ ವಹಿಸಿಕೋಡುವ ಬಗ್ಗೆ ಸರ್ಕಾರದ ಆದೇಶವಾಗಿದೆ. ಕಲಬುರ್ಗಿ ವಿಭಾಗದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋರಗುತ್ತಿಗೆ ಸಿಬ್ಬಂದಿಗಳಿಗೆ ೦೨/೨೦೧೯, ೦೩/೨೦೧೯,ಮತ್ತು ೦೪/೨೦೧೯ ರ ಅವಧಿಯ ೩ ತಿಂಗಳ ವೇತನ ಪಾವತಿಯಾಗಬೇಕಾಗಿರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂದಿನ ೩ ತಿಂಗಳ ವೇತನವನ್ನು ಪಾವತಿ ಮಾಡಿಕೂಡುವಂತೆ ಮನವಿಯನ್ನು ಸಲ್ಲಿಸಲಾಗಿದೆ, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿರುವುದಿಲ್ಲ. ತಾವು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ನೀರು ಸರಬರಾಜು ನಿರ್ವಹಣೆಯನ್ನು ಹಸ್ತಾಂತರಿಸುವ ಸಂಬಂಧ ಸರ್ಕಾರವು ಜಾರಿಗೊಳಿಸಿರುವ ಆದೇಶಕ್ಕೆ ನಮ್ಮ ಹೋರಗುತ್ತಿಗೆ ನೌಕರರು ಸಂಘವು ಸಹ ಸರ್ಕಾರದ ಆದೇಶವನ್ನು ಗೌವರವಿಸಲು ಸಿದ್ದರಾಗಿದ್ದೇವೆ ಈ ಹಿನ್ನೆಲೆಯಲ್ಲಿ ತಾವುಗಳು ಐ&ಖಿ ಕಂಪನಿಗೆ ನೀರು ಸರಬುರಾಜು ನಿರ್ವಹಣೆಯನ್ನು ವಹಿಸಿಕೋಡುವ ಮುನ್ನ ಹೋರಗುತ್ತಿಗೆ ನೌಕರರ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬಗ್ಗೆ ತಾವುಗಳು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ನಮ್ಮ ಸಂಘದ ಪ್ರತಿನಿಧಿಗಳು ಸೇರಿದಂತೆ ಸಮಸ್ಯೆಯ ಬಗ್ಗೆ ಚರ್ಚಿಸಬೇಕೆಂದು ಮನವಿ ಮಾಡಿಕೊಂಡರು.
ಹೊರ ಗುತ್ತಿಗೆ ನೌಕರರನ್ನು ಸರ್ಕಾರ ಎಲ್&ಟಿ ಕಂಪನಿಗೆ ಹಸ್ತಾಂತರ ಮಾಡುವದು ನಿಲ್ಲಿಸಿ ಮಂಡಳಿಯೇ ವೇತನ ಪಾವತಿ ಮಾಡಬೇಕು. ಹೊರಗುತ್ತಿಗೆ ನೌಕರರು ಮಾರಾಟದ ಸರಕಾಗಿ ಸರ್ಕಾರ ದೊರಣೆಯನ್ನು ನೌಕರರ ಹಿತದೃಷ್ಟಿಯಿಂದ ವಾಪಸ್ ಪಡೆಯಬೇಕು. ಹೊರಗುತ್ತಿಗೆ ಸಿಬ್ಬಂದಿಯನ್ನು ಎಲ್&ಟಿ ಕಂಪನಿಯವರು ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆಯಲು ಮುಂದಾದಲಿ ಅಂತಹ ನೌಕರರುಗಳನ್ನು ಕಲಬುರಗಿಯ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುಬೇಕು.
ಅಂಗವಿಕಲರು ಹಾಗೂ ಮಹಿಳೆಯರನ್ನು ಅನಾವಶ್ಯಕ ಕಾರಣಗಳನ್ನು ನೀಡಿ ಕೆಲಸದಿಂದ ತೆಗೆಯುವ ಸಂದರ್ಭ ಬಂದಲ್ಲಿ ಅವರ ಕುಟುಂಬ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕು ಸೇವೆಯಲ್ಲಿರುವಾಗ ಹೊರಗುತ್ತಿಗೆ ಸಿಬ್ಬಂದಿ ನಿಧನ ಹೊಂದಿದರೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಬದಲಿ ವ್ಯವಸ್ಥೆಯ ಮೂಲಕ ನೌಕರಿಯನ್ನು ನೀಡಬೇಕು. ನೌಕರರಿಗೆ ಪ್ರತಿ ತಿಂಗಳು ೫ ನೇ ತಾರೀಕಿನ ಒಳಗೆ ವೇತನ ನೀಡಬೇಕು. ಸರ್ಕಾರದ ಆದೇಶದಂತೆ ವೇತನ ಸಹಿತ ರಜೆ ನೀಡಬೇಕು ಮತ್ತು ಕೆಲಸ ಮಾಡುವ ಸಮಯದಲ್ಲಿ ಅವಘಡಗಳು ಸಂಭವಿ ಅಕಾಲಿಕ ಮರಣ ಹೊಂದಿದ ಸಮಯದಲ್ಲಿ ಆರ್ಥಿಕ ನೆರವು ನೀಡಬೇಕು ಎಂದು ಸಂಘವು ಮನವಿ ಮಾಡುತ್ತದೆ ಎಂದು ಕಲಬುರಗಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ಬಿಕ್ಕಿ ಹಾಗೂ ಕಲಬುರಗಿ ವಲಯ ಅಧ್ಯಕ್ಷ ಸುನೀಲ ಮಾನಪಡೆ ಅವರುಗಳ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಕಲಬುರಗಿ: ಸಿಪಿಐ(ಎಂ) ಪಕ್ಷವು ನವೆಂಬರ್ 24,25 ನವೆಂಬರ್ ರಂದು ಎರಡು ದಿನಗಳ ಕಾಲ ಜಿಲ್ಲಾ ಸಮ್ಮೇಳನ ನಡೆದು ಜಿಲ್ಲಾ ಕಾರ್ಯದರ್ಶಿಯಾಗಿ…
ಕಲಬುರಗಿ: ಜಯನಗರ ಬಡಾವಣೆಯ ಹಳೆ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗಾಗಿ ಕಲಬುರಗಿ ಬೀದರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ ಇವರ…
ಕಲಬುರಗಿ: ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ವನ್ನು ಸವಿಧಾನ ಪ್ರತಿಯನ್ನು ಓದುವ ಮೂಲಕ ಸವಿಧಾನ ಶಿಲ್ಪಿ…
ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…
ಚಿಂಚೋಳಿ: ತಾಲೂಕಿನ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…