ಕಲಬುರಗಿ: ರಾಜ್ಯ ವಿಧಾನ ಪರಿಷತ್ ನೂತನ ಸದಸ್ಯ ಹಾಗೂ ಕಾಯಕ ಶರಣರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ್ ಅವರನ್ನು ಅವರ ಗಂಗಾನಗರದ ನಿವಾಸದಲ್ಲಿ ಕಾಯಕ ಶರಣರ ಸಮಾಜದ ಸೇವಾ ಸಂಘದ ಪದಾಧಿಕಾರಿಗಳು ಹೂಮಾಲೆ ಹಾಕಿ, ಶಾಲು ಹೊದಿಸಿ, ಸ್ಮರಣಿಕೆ ಕೊಟ್ಟು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಭೀಮಣ್ಣ ಬೋನಾಳ್, ಉಪಾಧ್ಯಕ್ಷ ಭಾಷಾ ಚೋಗೇ, ಪ್ರಧಾನ ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಗೌಳಿ, ಡಿ.ಬಿ. ಭಜಂತ್ರಿ, ಸಾಯಬಣ್ಣಾ ಹೋಳ್ಕರ್, ಎಂ.ಎನ್. ಸಗಂದಿ, ಬಿ.ಎಚ್. ಬರಗಾಲಿ (ಕುಸನೂರು) ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಗೌಳಿ ಅವರು ಮಾತನಾಡಿ, ಸಂಘವು ನಿಜಶರಣ ಅಂಬಿಗರ ಚೌಡಯ್ಯ, ಬಿದಿರು ಕಾಯಕದ ಮೇದಾರ ಕೇತಯ್ಯ, ನೂಲಿಯ ಚಂದಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚೆನ್ನಯ್ಯ, ಉರಿಲಿಂಗ ಪೆದ್ದಿ, ಕುರುಬ ಗೊಲ್ಲಾಳೇಶ್ವರ್, ಜೇಡರ ದಾಸಿಮಯ್ಯ, ಗಾಣದ ಕಣ್ಣಪ್ಪ, ಸಿದ್ಧರಾಮೇಶ್ವರ್, ಒಕ್ಕಲಿಗ ಮುದ್ದಣ್ಣ, ಯಾಳವಾರ್ ಭೃಂಗೇಶ್ವರ್, ಮಸಣಸಿದ್ದಯ್ಯ, ಹೆಂಡದ ಮಾರಯ್ಯ, ಹೂಗಾರ್ ಮಾದಯ್ಯ, ಹಡಪದ್ ಅಪ್ಪಣ್ಣ, ಕುಂಬಾರ್ ಗುಂಡಯ್ಯ, ಗಾಳದ ಕಣ್ಣಪ್ಪ, ವೈದ್ಯ ಸಂಗಣ್ಣ, ಕಿನ್ನರಿ ಬಮ್ಮಯ್ಯ, ಮಡಿವಾಳ್ ಮಾಚಯ್ಯ ಮುಂತಾದ ಸಮಾಜಗಳನ್ನು ಒಳಗೊಂಡಿದ್ದು, ಆ ಎಲ್ಲ ಸಮಾಜದಲ್ಲಿನ ಪ್ರತಿಭಾವಂತ ಮಕ್ಕಳಿಗೆ ಜುಲೈನಲ್ಲಿ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸಂಘದ ಬೇಡಿಕೆಗಳನ್ನು ಮುಂದಿಟ್ಟ ಅವರು, ಕಲ್ಯಾಣ ಮಂಟಪ ನಿರ್ಮಾಣವು ಅಗತ್ಯವಾಗಿದ್ದು, ಆ ಕುರಿತು ಬೇಡಿಕೆ ಇಡೇರಿಸಬೇಕು ಎಂದು ಮನವಿ ಮಾಡಿದರು. ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಮಾತನಾಡಿ, ನಾನು ಸದಾ ನಿಮ್ಮೊಂದಿಗಿದ್ದೇನೆ. ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…