ಬೀದರ್: ಮಮ್ಮಾ ಎಂದು ಕರೆಯಲ್ಪಡುವ ನಾರಿ ಶಿರೋಮಣಿ ಜಗದಂಬಾ ಸರಸ್ವತಿ ಅವರ ಬದುಕು ಇಂದಿನ ಮಹಿಳಾ ಜಗತ್ತಿಗೆ ಮಹಾಸ್ಪೂರ್ತಿ ಹಾಗೂ ಶಕ್ತಿ ನೀಡಬಲ್ಲದು ಎಂದು ಪ್ರಜಾಪಿತಃ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‌ಜಿ ತಿಳಿಸಿದರು.
ನಗರದ ಜನವಾಡಾರಸ್ತೆಯಲ್ಲಿರುವ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದಲ್ಲಿ ಜರುಗಿದ ’ಮಮ್ಮಾ ಡೇ’ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು, ತಾನೋರ್ವ ಸ್ತ್ರೀ ಎಂಬುದನ್ನು ಮರೆತು ಧೈರ್ಯದಿಂದ ಬಾಬಾ ಲೇಖರಾಜ(ಬ್ರಹ್ಮಾ ಬಾಬಾ) ಅವರು ಸ್ಥಾಪಿಸಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ಸಂಸ್ಥೆ ಸೇರಿ ನೂರಾರು ಕನ್ನೆಯರನ್ನು ಈಶ್ವರೀಯ ಸೇವೆಗೆ ಸೇರಿಸಿದರು. ಇದನ್ನು ಸಹಿಸದ ಹಲವರು ಮಮ್ಮಾ ಅವರನ್ನು ಮುಗಿಸಲು ವಿಫಲ ಯತ್ನ ನಡೆಸಿದರು. ಸಮಾಜದ ಯಾವ ದುಷ್ಟ ಶಕ್ತಿಗಳಿಗೆ ಹೆದರದೆ, ಧೈರ್ಯದಿಂದ ಮುನ್ನುಗ್ಗಿ ಅಜನ್ಮ ಬ್ರಹ್ಮಚರ್ಯ ಜೀವನ ನಡೆಸಿ ಬ್ರಹ್ಮಾಕುಮಾರಿಯರಿಗೆ ಆದರ್ಶ ಗುರುವಾಗಿ ಮಾರ್ಗದರ್ಶನ ನೀಡಿದ ಮಮ್ಮಾ ಅವರ ಜೀವನ ಇಂದಿನ ಮಹಿಳಾ ಸಂಕುಲವು ಮಾದರಿಯಾಗಿಸಿಕೊಳ್ಳಲು ಕರೆ ಕೊಟ್ಟರು.
ಬಿ.ಕೆ ಗುರುದೇವಿ ಅಕ್ಕನವರು ಮುರ್ಲಿ ಪಠಿಸಿದರು. ಬಿ.ಕೆ ಮಂಗಲಾ ಬಹೆನ್ ಸ್ವಾಗತಿಸಿದರು. ಬಿ.ಕೆ ವಿಜಯಲಕ್ಷ್ಮೀ ಬಹೆನ್ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ ಶಿಲ್ಪಾ ಬಹೆನ್ ವಂದನೆ ಸಲ್ಲಿಸಿದರು. ಕೇಂದ್ರದ ಎಲ್ಲ ಸಹೋದರ, ಸಹೋದರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…