ಬಿಸಿ ಬಿಸಿ ಸುದ್ದಿ

ನಿರ್ಗತಿಕ ಮಕ್ಕಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ

ಬೀದರ್:  ತಾಲ್ಲೂಕಿನ ಚಿಟ್ಟಾವಾಡಿ ಗ್ರಾಮದಲ್ಲಿರುವ ವಿಶ್ವನಾಥ ನಿರ್ಗತಿಕ ಮಕ್ಕಳ ಕುಟಿರದಲ್ಲಿ ತಂದೆ ಅಥವಾ ತಾಯಿ ಇಲ್ಲದ ೧ನೇ ತರಗತಿಯಿಂದ ೭ನೇ ತರಗತಿ ವರೆಗಿನ ಎಲ್ಲ ವರ್ಗದ(ಪರಿಶಿಷ್ಟ ಜಾತಿಯಿಂದ ಹಿಡಿದು ಸಾಮಾನ್ಯ ವರ್ಗದ ಆದಿಯಾಗಿ) ಮಕ್ಕಳಿಗೆ ಉಚಿತ ವಸತಿ ನಿಲಯದ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಸ್ಥೆ ಶೋಭಾವತಿ ಫುಲಿಕರ್ ಅವರು ತಿಳಿಸಿದ್ದಾರೆ.

ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಶೌಚಾಲಯಗಳು, ಸೋಲಾರಯುಕ್ತ ಬಿಸಿ ನೀರಿನ ಸ್ನಾನಗೃಹಗಳು, ಸೋಲಾರ ವಿದ್ಯುತ್ ಸೌಕರ್ಯ, ನುರಿತ ಶಿಕ್ಷಕರಿಂದ ಟಿವಿಶನ್ ಸೌಕರ್ಯ, ಪೌಷ್ಟಿಕ ಯುಕ್ತ ಆಹಾರ, ಹಾಲು, ಮೊಟ್ಟೆ, ಶಾಲೆಗೆ ಹೋಗಿ ಬರಲು ವಾಹನದ ವ್ಯವಸ್ಥೆ ಇತ್ಯಾದಿ ಉತ್ತಮ ವ್ಯವಸ್ಥೆಯುಳ್ಳ ಹಾಸ್ಟೆಲ್ ಸೌಲಭ್ಯ ಇದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಆಸಕ್ತರು ಜೂನ್ ೩೦ರೊಳಗಾಗಿ ಶೋಭಾವತಿ ಫುಲಿಕರ್, ಮುಖ್ಯಸ್ಥರು, ವಿಶ್ವನಾಥ ನಿರ್ಗತಿಕ ಮಕ್ಕಳ ಕುಟಿರ, ಅಂಬೇಡ್ಕರ್ ವೃತ್ತದ ಬಲಗಡೆ, ಚಿಟ್ಟಾವಾಡಿ, ತಾ.ಜಿ-ಬೀದರ್-೫೮೫೪೦೩ ದೂರಬಾಣಿ ಸಂಖ್ಯೆ 9889698044 /6364383324 ಈ ದೂರವಾಣಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago