ಕಲಬುರಗಿ: ಕಳೆದ ಬಾರಿ ಉತ್ತಮ ಮಳೆÉಯಾದ ಕಾರಣ ಜೇವರ್ಗಿ ಮತಕ್ಷೇತ್ರದಲ್ಲಿ ಬೇಸಿಗೆ ಶುರುವಾದರೂ ಇಲ್ಲಿಯವರೆಗೆ ಅಷ್ಟೊಂದು ನೀರಿನ ಸಮಸ್ಯೆ ಕಾಡಿಲ್ಲ, ಆದಾಗ್ಯೂ ನೀರಿನ ಅಲ್ಪ ಸಮಸ್ಯೆ ಎದುರಾಗಿರುವ ಯಾಳವಾರ, ಕೆಲ್ಲೂರ, ಕೊಡಚಿಗಳಲ್ಲಿ ಸಮಸ್ಯೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಜೇವರ್ಗಿ ಮತಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ನೀರಿನ ಸಮಸ್ಯೆ ಎದುರಾಗಿರುವ ಯಾಳವಾರದಲ್ಲಿ ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಕೆಲ್ಲೂರಲ್ಲಿಯೂ ಬಾಡಿಗೆ ಬೋರ್‍ವೆಲ್ ಪಡೆಯಲಾಗಿದೆ. ಕೊಡಚಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಜರುಗಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಇರುವ ತಾಲೂಕು ಕಾರ್ಯಪಡೆಯಲ್ಲಿ ಅದಾಗಲೇ 25 ಲಕ್ಷ ರು ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳಲ್ಳಲಾಗಿದೆ. ಯಾವ ಊರಲ್ಲಿ ಸಮಸ್ಯೆ ಕಾಣುವುದೋ ಅಲ್ಲಿ ತಕ್ಷಣ ಕೊಳವೆ ಬಾವಿ ಕೊರೆಯುವ, ಅಥವಾ ಬಾಡಿಗೆ ಖಾಸಗಿ ಬಾವಿ ಪಡೆದು ಪೈಪ್‍ಲೈನ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕೇಂದ್ರದ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿಯೂ ನೀರಿನ ಸಮಸ್ಯೆ ಎದುರಾಗುವ ಊರುಗಳಲ್ಲಿ ಮನೆ ಮನೆ ನಲ್ಲಿ ನೀರು ಪೂರೈಸುವ ಯೋಜನೆ ಅನು,್ಠನಕ್ಕೆ ಬುರತ್ತಿದೆ. ಸದರಿ ಯೋಜನೆಯಲ್ಲಿ ಕಳೆದ ವರ್ಷ 2020- 21 ರಲ್ಲಿ 57 ಗ್ರಾಮಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಮತಕ್ಷೇತ್ರದ ರz್ದÉೀವಾಡಗಿ, ಜಮಖಂಡಿ, ಬಿಲ್ಲಾಡ (ಕೆ), ಜಮಖಂಡಿ ತಾಂಡಾ, ಅಂಕಲಗಾ, ಹಂಚನಾಳ, ಕಣಮೇಶ್ವರ, ಶಖಾಪೂರ ಎಸ್‍ಎನ್ ಸೇರಿದಂತೆ ಸಮಸ್ಯಾತ್ಮಕ ಆಯ್ದ 67 ಗ್ರಾಮಗಳನ್ನೇ ಜಲ್ ಜೀವನ ಮಿಷನ್ ಯೋಜನೆಯಡಿ ಆಯ್ಕೆಮಾಡಿಕೊಳ್ಳಲಾಗಿದೆ. ಅದಾಗಲೇ 16 ಹಳ್ಳಿಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸಗಳು ಶುರುವಾಗಿವೆ, 51 ಕಾಮಗಾರಿಗಳು ಡಿಪಿಆರ್ ಸಿದ್ಧತೆ ಹಾಗೂ ಟೆಂಡರ್ ಹಂತದಲ್ಲಿವೆ.
ಬೇಸಿಗೆ ತೀವ್ರಗೊಂಡಲ್ಲಿ ಬರುವ ದಿನಗಳಲ್ಲಿ ಬಿಳವಾರ, ಶಿವಪುರ, ಅಣಜಗಿ, ಗೋದಿಹಾಳ್, ಸಾತಖೇಡ್, ಕರಕಿಹಳ್ಳಿ, ಜಕಣಾಪುರ, ಚಿಗರಳ್ಳಿ, ಯಾಳವಾರ ಇಲ್ಲೆಲ್ಲಾ ಸಮಸ್ಯೆ ಎದುರಾಗುವ ಆತಂಕವಿದೆ. ಇದಲ್ಲದೆ ಆಲೂರಲ್ಲಿ ಕೊಳವೆ ಮಾರ್ಗದ ಪುಟ್ಟ ಸಮಸ್ಯೆಯಿಂದಾಗಿ ನೀರಿನ ಸಮಸ್ಯೆ ಕಾಡಿರೋದು ಗಮನಕ್ಕೆ ಬಂದಿದ್ದು ತಕ್ಷಣ ಕೊಳವೆ ಬಾವಿ ಕೊರೆದು ಸಮಸ್ಯೆ ಪರಿಸಲು ಸಂಬಂಧಪಟ್ಟಂತಹ ಇಂದಿನಿಯರ್ ಪಂಚಾಯ್ತಿ ಪಿಡಿಓಗೆ ಸೂಚಿಸಲಾಗಿದೆ, ತಾಲೂಕಿನಲ್ಲಿ ಯಾವುದೇ ಹಳ್ಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೂ ಅದನ್ನು ಆದ್ಯತೆ ಮೇರೆಗೆ ಹಾಗೂ ವಿಳಂಬವಿಲ್ಲದಂತೆ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ತಾವು ಖಡಕ್ ಸೂಚನೆ ನೀಡಿದ್ದಾಗಿ ಶಾಸಕರಾದ ಡಾ ಅಜಯ್ ಸಿಂಗ್ ಹೇಳಿದ್ದಾರೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…