ಶಹಾಬಾದಗೂ ಶಾಣಪ್ಪಗೂ ಅವಿನಾಭಾವ ನಂಟು

ಶಹಾಬಾದ: ಮಾಜಿ ಸಚಿವ ಕೆ.ಬಿ.ಶಾಣಪ್ಪ ಅವರಿಗೂ ಶಹಾಬಾದ ನಗರಕ್ಕೂ ಹಲವಾರು ದಶಕಗಳ ನಿಕಟ ಸಂಪರ್ಕವಿತ್ತು.ಇಲ್ಲಿನ ಯಾವುದೇ ಸಭೆ ಸಮಾರಂಭ, ವಿವಿಧ ಪಕ್ಷದ ಮುಖಂಡರ ಹಾಗೂ ಗಣ್ಯರ ಜತೆ ಅವಿನಾಭಾವ ಸಂಬಂಧವಿರುವುದನ್ನು ಇಲ್ಲಿನ ಹಿರಿಯ ಮುಖಂಡರು ಇಂದಿಗೂ ಸ್ಮರಿಸುತ್ತಾರೆ.

ಅದರಲ್ಲೂ ಕೆ.ಬಿ.ಶಾಣಪ್ಪನವರಿಗೂ ಶಹಾಬಾದ ನಗರಕ್ಕೂ ಅವಿನಾಭಾವ ನಂಟು ಇತ್ತು.ಕಾರಣ ಇದೇ ನಗರದಲ್ಲಿ ಓದಿದ್ದು, ಎಸಿಸಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಎಬಿಎಲ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿದು, ಕಾರ್ಮಿಕರ ನಾಯಕನಾಗಿ ಹೊರಹೊಮ್ಮಿದ್ದು ಇದೇ ನಗರದಿಂದ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.

ಯಾವಾಗಲೂ ದಲಿತರ, ಶೋಷಿತ ವರ್ಗದ ಪರವಾಗಿ ಮಾತನಾಡುವ ಸ್ವಭಾವ ಅವರದಾಗಿತ್ತು. ಇದ್ದದ್ದು ಇದ್ದಂತೆ ಗ್ರಾಮೀಣ ಭಾಷೆಯಲ್ಲಿ ಹೇಳುವ ಜಾಯಮಾನ ಅವರಲ್ಲಿತ್ತು. ಅವರು1960-1963ರಲ್ಲಿ ಎಸಿಸಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿದವರು.ನಂತರ ಎಬಿಎಲ್ ಕಾರ್ಖಾನೆ( ಇಂದಿನ ಜಿಇ ಕಾರ್ಖಾನೆ)ಯಲ್ಲಿ 1960=1974 ವರೆಗೆ ನಂತರ 1978-1980ವರೆಗೆ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದಾರೆ.

ನಂತರ ಕಮ್ಯೂನಿಸ್ಟ ಪಕ್ಷದಲ್ಲಿ ಸೇರ್ಪಡೆಯಾಗಿ ಎಬಿಎಲ್ ಕಾರ್ಖಾನೆಯಲ್ಲಿ ಟ್ರೇಡ್ ಯೂನಿಯನ್ ಸ್ಥಾಪಿಸಿ ಎಐಟಿಯುಸಿ ಸ್ಥಾಪಿಸಲಾಯಿತು.ನಂತರ 1974ರಲ್ಲಿ ಕಾರ್ಮಿಕರ ಹಕ್ಕುಗಳ ಹೋರಾಟಕ್ಕಾಗಿ ಎಬಿಎಲ್ ಕಾರ್ಖಾನೆಯ ವಿರುದ್ಧ ಸತತ 74 ದಿನಗಳ ಮುಷ್ಕರ ಕೈಗೊಂಡಿದಕ್ಕೆ ಅವರನ್ನು ಕೆಲಸದಿಂದ ಕಂಪನಿಯ ಆಡಳಿತ ವರ್ಗ ಅವರನ್ನು ಕೆಲಸದಿಂದ ವಜಾಗೊಳಿಸಿದರು.

ಕಮ್ಯೂನಿಸ್ಟ ಪಕ್ಷದಲ್ಲಿ ಅವಿರತವಾಗಿ ಶ್ರಮಿಸಿದಕ್ಕೆ ಅವರನ್ನು 1983-84 ಡಿಸೆಂಬರ್ ವರೆಗೆ ಕಮ್ಯೂನಿಸ್ಟ ಪಕ್ಷದ ಶಾಸಕನಾಗಿ ವಿಧಾನಸಭೆಗೆ ಆಯ್ಕೆಯಾದರು.ನಂತರ 1992ರಲ್ಲಿ ಕಮ್ಯೂನಿಸ್ಟ ಪಕ್ಷ ಬಿಟ್ಟಿ ಜನತಾ ದಳ ಪಕ್ಷಕ್ಕೆ ಪ್ರವೇಶವಾದರು. ನಂತರ ಅನೇಕ ಹುದ್ದೆಗಳನ್ನು ಅಲಂಕರಿಸಿದಲ್ಲದೇ ಜೆ.ಹೆಚ್.ಪಟೇಲ್ ಅವರ ಕ್ಯಾನಿನೆಟ್‍ನಲ್ಲಿ ಅಬಕಾರಿ ಸಚಿವರಾಗಿ ಕರ್ತವ್ಯ ನಿರ್ವಹಣೆ ಮಾಡಿದರು. ನಂತರ 1996-2002 ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನವಾದರು.

2003ರಲ್ಲಿ ಜನತಾ ದಳದಿಂದ ನಿರ್ಗಮನ ಹೊಂದಿ ಬಿಜೆಪಿ ಸದಸ್ಯರಾಗಿ ಪಕ್ಷ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2006-2012 ವರೆಗೆ ಬಿಜೆಪಿಯಿಂದ ರಾಜ್ಯ ಸಭೆಯ ಸದಸ್ಯರಾಗಿ ಆಯ್ಕೆಯಾದರು.ನಂತರ ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ ಅವರನ್ನು ಘೋಷಿಸಿದಕ್ಕೆ ಅಸಮಾಧಾನಗೊಂಡು ಬಿಜೆಪಿ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ತಮ್ಮ ರಾಜಕೀಯ ಜೀವನದಲ್ಲಿ ಎಲ್ಲಾ ಪಕ್ಷದಲ್ಲಿ ಸೇವೆ ಸಲ್ಲಿಸಿದರೂ ಯಾರೊಂದಿಗೂ ವೈರತ್ವ ಬೆಳೆಸಿಕೊಳ್ಳದೇ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದರು. ಅದರಲ್ಲೂ ಶಹಾಬಾದನ ಜನರು, ಕಾರ್ಮಿಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಆದರೆಆ ಪ್ರಭಾವಿ ದಲಿತ ನಾಯಕ ಇನ್ನಿಲ್ಲ. ಆ ನೆನಪು ಮಾತ್ರ ಮೆಲುಕು ಹಾಕುವಂತಾಗಿದೆ.

ಶೋಕ : ಮಾಜಿ ಸಚಿವ ಕೆ.ಬಿ.ಶಾಣಪ್ಪ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ, ಮೃತ್ಯಂಜಯ್ ಹಿರೇಮಠ, ಗಿರೀಶ ಕಂಬಾಣೂರ, ಅಜೀತಕುಮಾರ ಪಾಟೀಲ, ನಾಗಣ್ಣ ರಾಂಪೂರೆ,ಸುಭಾಷ ಪಂಚಾಳ, ಶಿವರಾಜ ಕೋರೆ, ಕಿರಣಕುಮಾರ ಕೋರೆ, ನಾಗರಾಜ ಸಿಂಘೆ, ದೇವೆಂದ್ರಪ್ಪ ಗಾಯಕವಾಡ,ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯವರು, ಕಸಾಪದ ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420