ಬಿಸಿ ಬಿಸಿ ಸುದ್ದಿ

ಹಲೋ ನಾನು ಕೆ.ಬಿ.‌ಶಾಣಪ್ಪ ಮಾತಾಡೋದು!

ರಾಜ್ಯಸಭೆಯ ಮಾಜಿ ಸದಸ್ಯ, ಮಾಜಿ ಸಚಿವ ಕೆ.ಬಿ. ಶಾಣಪ್ಪ ಇನ್ನಿಲ್ಲ. ಅವರು ಕೂಡ ಕೊರೊನಾಕ್ಕೆ ಬಲಿಯಾಗಿದ್ದಾರೆ ಎಂಬ ಸುದ್ದಿ ಇಂದು ಮಧ್ಯಾಹ್ನ ಬಂದ ಕೂಡಲೇ ಮನಸ್ಸು ವ್ಯಾಕುಲಗೊಂಡಿತು.

ಇದೇ ಏಪ್ರಿಲ್ 25ರಂದು ದಢೂತಿ ದೇಹದ ಹರೆಯದ ವ್ಯಕ್ತಿಯೊಬ್ಬರು ನಮ್ಮ ಮನೆ ಮುಂದೆ ನಿಂತು ಸತ್ಯಂಪೇಟೆಯವರ ಮನೆ ಇದೆನಾ? ಎಂದು ಕೇಳಿದ್ದರು. ಹೌದು ಎಂದು ಮನೆಯ ಗೇಟ್ ತೆಗೆದು ತಾವು ಯಾರು? ಎಂದು ಕೇಳಿದಾಗ ನಮ್ಮ ಮುತ್ಯಾ ಕೆ.ಬಿ.ಶಾಣಪ್ಪನವರು ಹಣ ಕೊಡಲು ನಮ್ಮ ಅತ್ತೆ ವಿಜಯಲಕ್ಷ್ಮೀ (ಕೆ.ಬಿ.‌ಶಾಣಪ್ಪ ಅವರ ಪುತ್ರಿ)ಗೆ ಹೇಳಿದ್ದರಂತೆ. ಅತ್ತೆ ಕಳಿಸಿದ್ದಾರೆ ಎಂದು ಹೇಳಿ ಶರಣ ಮಾರ್ಗ ಪತ್ರಿಕೆಯ ಚಂದಾಹಣ ೨೦೦೦ ಕೊಟ್ಟು ರಸೀದಿ ಪಡೆದು ಹೋಗಿದ್ದ.

ಈಗ್ಗೆ ನಾಲ್ಕಾರು ತಿಂಗಳ ಹಿಂದೆ ಒಂದು ದಿನ ಬೆಳಗ್ಗೆ ಫೋನ್ ಮಾಡಿ, “ಸತ್ಯಂಪ್ಯಾಟಿನಾ, ನಾ ಕೆ.ಬಿ.‌ಶಾಣಪ್ಪ ಮಾತಾಡೋದು. ಈ ಬಾರಿಯ ಮಾದಾರ ಚೆನ್ನಯ್ಯನ ಮುಖಪುಟವಿರುವ ಬಸವ ಮಾರ್ಗ (ಶರಣ ಮಾರ್ಗ) ಓದಿದೆ. ಚೆನ್ನಯ್ಯ ತಮಿಳುನಾಡಿನಿಂದ ಬಂದವರು ಎಂದು ಲೇಖಕರು ಬರೆದಿದ್ದಾರೆ. ಮೋಳಿಗಿ ಮಾರಯ್ಯ ಕಾಶ್ಮೀರದಿಂದ ಬಂದ, ಸೊನ್ನಲಗಿಯಿಂದ ಸಿದ್ಧರಾಮ
ಹೀಗೆ ನಾಡಿನ ಉದ್ದಗಲದಿಂದ ಕಲ್ಯಾಣಕ್ಕೆ ಬಂದ ಶರಣು ಕನ್ನಡ ಹೇಗೆ ಕಲಿತರು? ಅವರು ಕನ್ನಡದಲ್ಲಿ ವಚನಗಳನ್ನು ಬರೆಯಲು ಹೇಗೆ ಸಾಧ್ಯವಾಯಿತು? ಹಿಂದಿನ ಕವಿಗಳೆಲ್ಲರೂ ಶರಣರ ಬಗ್ಗೆ ಕೆಲ ಉತ್ಪ್ರೇಕ್ಷೆ ಯ ಮಾತುಗಳನ್ನು ಬರೆದುಕೊಂಡು ಬಂದಿದ್ದಾರೆ. ನಿಮ್ಮಪ್ಪನ ಜೊತೆ ನಾ ಇದೇ ಡಿಸ್ಕಸ್ ಮಾಡುತ್ತಿದ್ದೆ. ಬೆಂಗಳೂರಿಗೆ ಬಂದರೆ ಅವರ ನಮ್ಮ ರೂಂನಲ್ಲಿಯೇ ಖಾಯಂ ಆಗಿ ಉಳಿಯುತ್ತಿದ್ದರು. ಶರಣರ ಬಗೆಗಿನ ಕೆಲ ಸಂಶಯ ನನಗಿನ್ಮೂ ನಿವಾರಣೆ ಆಗಿಲ್ಲ” ಎಂದರು. ನನಗೆ ತಿಳಿದಷ್ಟು ಹೇಳಲು ಯತ್ನಿಸಿದರೂ ಅದ್ಯಾಕೋ ನನಗೆ ಉತ್ಪ್ರೇಕ್ಷೆ ಅನ್ನಿಸುತ್ತಿದೆ ಎಂದಿದ್ದರು.

ಪತ್ರಿಕೆಯ ಮರು ಸಂಚಿಕೆಯಲ್ಲಿ ಅವರ ಪತ್ರ ಪ್ರಕಟಿಸಿದ್ದೆ. ಮೇಲಾಗಿ ಮುಂದಿನ ಎರಡು ಸಂಚಿಕೆಯಲ್ಲಿ ಅವರ ಸಂಶಯಕ್ಕೆ ಉತ್ತರ ಎನ್ನುವಂತೆ ಒಂದಿಬ್ಬರ ಲೇಖನ ಕೂಡ ಪ್ರಕಟಿಸಲಾಗಿತ್ತು. ನಾನಿರುವ ನೃಪತುಂಗ ಕಾಲನಿಯ ಗಾರ್ಡ್ ನ್ ನಲ್ಲಿ ಭೇಟಿಯಾದಾಗ, ನನಗಿನ್ನೂ ನೀ ಉತ್ತರ ಕೊಟ್ಟಿಲ್ಲ ಎಂದು ನೆನಪಿಸಿದ್ದರು. ವಯಸ್ಸು ೮೩ ಆಗಿದ್ದರಿಂದ ದೈಹಿಕವಾಗಿ ಸ್ವಲ್ಪ ಕುಗ್ಗಿದಂತೆ ಕಂಡು ಬರುತ್ತಿದ್ದರು. ಆದರೆ ಸ್ಮರಣಶಕ್ತಿ ಮಾತ್ರ ಅವರು ಕಳೆದುಕೊಂಡಿರಲಿಲ್ಲ.

ಇದಕ್ಕೂ ಮೊದಲು ಕಾಲನಿಯಲ್ಲಿ ಸಸಿ ನೆಡುವಾಗ, “ಬಾ ಸತ್ಯಂಪ್ಯಾಟಿ, ನಿಮ್ಮಪ್ಪ ನಾವು ಬಾಳ ದೋಸ್ತರು. ನೀ ನಮ್ಮ ಕಾಲನಿಗೆ ಬಸವಣ್ಣ ಬಂದಂಗಾಗ್ಯಾದ. ನೀನು ಒಂದು ಸಸಿಗೆ ನೀರುಣಿಸು”ಎಂದು ಒತ್ತಾಯಿಸಿ ನನ್ನಿಂದಲೂ ಒಂದು ಸಸಿ ನಾಟಿಸಿದ್ದರು. ಇದಕ್ಕೂ ಮುಂಚೆ ಇಂತಹ ಹತ್ತಾರು ಭೇಟಿ, ಮಾತುಕತೆ ಆಗಿದ್ದವು.‌

ರಷ್ಯಾ ಸೇರಿದಂತೆ ಎಂಟತ್ತು ದೇಶಗಳನ್ನು ಸುತ್ತಾಡಿ ಬಂದಿದ್ದ ಕೆ.ಬಿ. ಶಾಣಪ್ಪನವರು, ಅಲ್ಲಿ ಕಂಡುಂಡ ಅನುಭವವನ್ನು ಈಗಲೂ ಹೇಳುತ್ತಿದ್ದರು. ಇಂಗ್ಲಿಷ್, ಉರ್ದು ಹಾಗೂ ಕನ್ಡಡ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದ್ದ ಇವರು ಶಹಾಬಾದ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕ ನಾಯಕರಾಗಿ ರಾಜಕೀಯ ಕ್ಷೇತ್ರ ಸೇರಿದ್ದರು.

ಕಾಲನಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹಬ್ಬ, ಮಹನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೊಸ ಐಡಿಯಾಲಜಿ ಹೇಳುತ್ತಿದ್ದರು. ನನ್ನ ಮಕ್ಕಳಾದ ಪ್ರಮಥ- ಪ್ರಣವರ ಭಾಷಣ ಕೇಳಿ, ಈ ಹುಡುಗರು ಯಾರ ಮಕ್ಕಳು? ಎಂದು ಪಕ್ಕದಲ್ಲಿದ್ದವರನ್ನು ಕೇಳುತ್ತಿದ್ದರಂತೆ. ಶಿವರಂಜನ್ ಸತ್ಯಂಪೇಟೆಯವರ ಮಕ್ಕಳು ಎಂದು ಹೇಳಿದಾಗ, ಸತ್ಯಂಪೇಟೆ ಮನೆತನವೇ ಹಾಗೆ. ಇವರ ಮುತ್ಯಾ ಲಿಂಗಣ್ಣ ಕೂಡ ಹಾಗೆಯೇ. ಏನೇ ಆಗ್ಲಿ ಮಕ್ಕಳ ಶಾಣ್ಯಾ ಹುಟ್ಯಾರ” ಎಂದು ಮಕ್ಕಳ ಮೈದಡವಿ ಕಳಿಸುತ್ತಿದ್ದರು.

ಅದು ೨೦೧೭, ಆಗಸ್ಟ್ ೧೫. ಕಲಬುರಗಿಯ ನಮ್ಮ‌ “ಬಸವ ಮಾರ್ಗ” ಮನೆ ಪ್ರವೇಶ ನಿಮಿತ್ತ ನನ್ನ “ಮುಖಾಮುಖಿ” ಪುಸ್ತಕ ಬಿಡುಗಡೆ ಸಮಾರಂಭವಿತ್ತು.‌ ಸಮಾರಂಭದ ಅಧ್ಯಕ್ಷತೆ ಇವರದ್ದೆ ಆಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಪುಸ್ತಕ ಬಿಡುಗಡೆ ಮಾಡಿದ್ದರು. ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಮುಖ್ಯ ಅತಿಥಿಯಾಗಿದ್ದರು. ಸುಲಫಲಶ್ರೀ, ಭಾಲ್ಕಿಶ್ರೀ, ಗುರುಮಠಕಲ್ ಶ್ರೀ ಆಗಮಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾನು, ನನ್ನ ಅದುವರೆಗಿನ ವಾರ್ಷಿಕ ಆದಾಯ, ಮನೆಯ ಖರ್ಚು,ಉಳಿತಾಯದ ಹಣ, ಸಾಲದ ಬಾಬತ್ತನ್ನು (ಸಾರ್ವಜನಿಕ ಅಫಿಡವಿಟ್) ಸಭೆಗೆ ಸಲ್ಲಿಸಿದೆ. ಆಗ ವೇದಿಕೆಯಲ್ಲಿ ಕುಳಿತಿದ್ದ ಕೆ.ಬಿ. ಅವರು ‘ ನಾವೇನು ನಿನಗೆ ಕೇಳಿವೇನು ಎಂದು ನಗಿಸಿದ್ದರು. ಬಿ.ಜಿ. ಪಾಟೀಲರಂತೂ ಆಶ್ಚರ್ಯಚಕಿತರಾಗಿದ್ದರು.

ಸತ್ಯಂ ಪೇಟೆಯಲ್ಲಿ ನಡೆಯುತ್ತಿದ್ದ ಅಜ್ಜ ಗುರಪ್ಪನವರ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ನಾನು ಕೂಡ ಇದೇ ಸುರಪುರ-ಶಹಾಪುರದಲ್ಲಿ ಹುಟ್ಟಿದವನು. ನಮ್ಮ ತಾಯಿ ತವರುಮನೆ ಮುನಮುಟಗಿ ಎಂದು ಜವಾರಿ ಭಾಷೆಯಲ್ಲಿಯೇ ಮಾತನಾಡುತ್ತಿದ್ದರು.

ಮಾರ್ಕ್ಸ್, ಲೆನಿನ್, ಪ್ಲೇಟೋ ಅಲ್ಲದೆ ಕನ್ನಡ, ಇಂಗ್ಲಿಷ್ ಕವಿ ಸಾಹಿತಿಗಳ ವಿಚಾರಗಳನ್ನು ಬಹಳ ನಿರರ್ಗಳವಾಗಿ ಹೇಳುತ್ತಿದ್ದರು. ಚರ್ಚಿಸುತ್ತಿದ್ದರು. ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿದ್ದರೂ ಪಕ್ಜಾ ಕಮ್ಯೂನಿಸ್ಟ ವಿಚಾರಗಳನ್ನು ಹೊಂದಿದ್ದರು. ಅಂತೆಯೇ ಇವರ ಮುಂಚೂಣಿಯಲ್ಲಿ
ನಿರ್ಮಾಣಗೊಂಡಿರುವ ನೃಪತುಂಗ ಕಾಲನಿಯಲ್ಲಿ ಮಂದಿರ, ಮಸೀದಿ ಚರ್ಚುಗಳಿಲ್ಲ ಎಂಬುದು ಗಮನಾರ್ಹ ಸಂಗತಿ.

-ಡಾ. ಶಿವರಂಜನ್ ಸತ್ಯಂಪೇಟೆ
emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

35 mins ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

37 mins ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

41 mins ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

46 mins ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

50 mins ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

55 mins ago