ವೃತ್ತಿಯಲ್ಲಿ ಪತ್ರಕರ್ತರಾಗಿರುವ,ಹಿತ ಮಿತವಾದ ಮಾತುಗಾರಿಕೆ ಹಾಗೂ ಕ್ರಿಯಾಶೀಲ ಬರಹದೊಂದಿಗೆ ನಾಡಿಗೆ ಚಿರಪರಿಚಿತರಾಗಿರುವ ಡಾ. ಶಿವರಂಜನ್ ಸತ್ಯಂಪೇಟೆ ಅವರ ಸಂಪಾದನೆಯಲ್ಲಿ ಹೊರಬಂದ “ಕೊ ರೋನಾ ಕಲಿಸಿದ ಪಾಠ” ಕೃತಿಯನ್ನು ಅವಲೋಕಿಸಿದಾಗ ಪ್ರಸ್ತುತ ಸಂಕಲನದಲ್ಲಿ 30ಕ್ಕೂ ಹೆಚ್ಚು ಬರಹಗಳಿವೆ. ಎಲ್ಲವೂ ಪುಟಗಳ ಮಿತಿಯಲ್ಲಿ ಕಿರಿಯವು. ಆದರೆ ವಿಷಯ ಮಾತ್ರ ಜಗತ್ತನ್ನೇ ಕಂಗೆಡಿಸಿದ “ಕೊರನಾ ವೈರಸ್ ಕಲಿಸಿದ ಪಾಠ”ಗಳಿಗೆ ಸಂಬಂಧಿಸಿದ್ದು ಮಹಿಳೆ-ಪುರುಷರ ಎಂಬ ಭೇದವಿಲ್ಲದೆ ಬದುಕಿನ ವಿವಿಧ ವಲಯಗಳಲ್ಲಿ ಕ್ರಿಯಾಶೀಲರಾದ ಯುವಪಡೆಯು ಇಲ್ಲಿಯ ರಚನೆಗಳ ಕರ್ತೃಗಳು. ಲೇಖನಗಳನ್ನು ಓದಿದರೆ ಬಹುತೇಕರು ಮಧ್ಯಮ ವರ್ಗದಿಂದ ಬಂದವರೇ ಎಂಬುದು ಎದ್ದು ಕಾಣುತ್ತದೆ.
ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಲಾಕ್ಡೌನ ಘೋಷಿಸಿದ ಮೇಲೆ ಜನರ ಬದುಕಿನಲ್ಲಿ ಉಂಟಾದ ಪರಿಣಾಮಗಳನ್ನು ಕುರಿತು ಇಲ್ಲಿ ಬಹು ಮಹತ್ವದ ಲೇಖನಗಳಿವೆ. ಕೊರೋನಾ ನಮಗೆ ಹಲವು ಒಳ್ಳೆಯ ಪಾಠಗಳನ್ನು ಕಲಿಸಿದೆ ಎಂಬುದನ್ನು ಬಹುತೇಕರ ಅಭಿಪ್ರಾಯ ಕುಟುಂಬದವರ ಜೊತೆಗೆ ಸಮರಸದಿಂದ ಬಾಳುವ ಬಗೆಯನ್ನು ಕಲಿಸಿದೆ. ವಯಸ್ಸಾದ ಪಾಲಕರನ್ನು ಪ್ರೀತಿಸಲು ಕಲಿಸಿದೆ.
ಮಕ್ಕಳಿಗೆ ಸಮಯ ಕೊಡುವುದನ್ನು ಕಲಿಸಿದೆ. ಹೋಟೆಲ್ ಉಟಕ್ಕಿಂತ ಮನೆಯ ಊಟ ಆರೋಗ್ಯದಾಯಕ ಎನ್ನುವುದನ್ನು ಕಲಿಸಿದೆ.ಪಿಜ್ಜಾ ಬರ್ಗರ್ ಗಿಂತ ರೊಟ್ಟಿ ಪುಂಡಿಪಲ್ಯ ಶೇಂಗಾ ಚಟ್ನಿ ರುಚಿ ದಾಯಕ ಎಂಬುದನ್ನು ಕಲಿಸಿದೆ.ಸಿಕ್ಕಸಿಕ್ಕ ಹುಳಹುಪ್ಪಡಿ,ಪಶುಪಕ್ಷಿಗಳನ್ನು ತಿನ್ನುವುದಕ್ಕಿಂತ ಸಸ್ಯಾಹಾರವೇ ಮಿಗಿಲು ಎಂಬುದನ್ನು ತಿಳಿಸಿದೆ. ಮಹಿಳೆಯರಿಗೆ ಮಾರ್ಕೆಟ್ ಮಾಡುವ ಹುಚ್ಚನ್ನು ಪುರುಷರಿಗೆ ಸುರಪಾನ ದುಶ್ಚಟವನ್ನು ಬಿಡಿಸಿದೆ. ಅಲ್ಲದೆ ಇಲ್ಲಿಯ ಬಹುತೇಕ ಬರಹಗಳು ಸ್ವತಃ ಅನುಭವದಿಂದ ಒಡಮೂಡಿವೆ.
ಅಧ್ಯಯನ ಆಲೋಚನೆಗಳಿಗಿಂತ ಸಾಂದರ್ಭಿಕವಾಗಿ ಹೊರಹೊಮ್ಮುವ ಭಾವನೆಗಳಿಗೆ ಆದ್ಯತೆ ದೊರೆತಿದೆ.ಎಂಥ ಸಂಕಟದಲ್ಲೂ ಸಕಾರಾತ್ಮಕತೆ ಯನ್ನು ಕಾಣಬೇಕೆಂಬ ಇತ್ತೀಚಿನ ವ್ಯಕ್ತಿತ್ವ ವಿಕಾಸದ ತರಬೇತಿ ಮತ್ತು ಪುಸ್ತಕಗಳ ಸಂದೇಶವು ಇಲ್ಲಿ ಪರೋಕ್ಷವಾಗಿ ದಾಖಲಾತಿ ಪಡೆದಿದೆ. ಅಲ್ಲದೆ ಇದೊಂದು ಸಾಂದರ್ಭಿಕವಾಗಿ ವಿವಿಧ ಮನಸ್ಸುಗಳು ಪ್ರತಿಬಂಧಿಸಿ ತಮ್ಮ ಅನುಭವಗಳನ್ನು ದಾಖಲು ಪಡಿಸಿದ ಬರಹಗಳ ಗುಚ್ಛವಾಗಿದೆ ಆಕಸ್ಮಿಕವಾಗಿ ಮಾನವಕುಲಕ್ಕೆ ಬಂದೆರಗಿದ ಸ್ಥಿತಿಯನ್ನು ಯುವಸಮೂಹ ಹೇಗೆ ಸ್ವೀಕರಿಸಿದೆ ಎಂಬುದೇ ಇಲ್ಲಿ ನಮೂದಾಗಿದೆ.
ವಿಜ್ಞಾನ,ತಂತ್ರಜ್ಞಾನ,ವೈದ್ಯಕೀಯ ವಿಜ್ಞಾನಗಳು ಎಷ್ಟೆಲ್ಲಾ ವ್ಯಾಪಕವಾಗಿ ಬೆಳೆದು ನಿಂತರು: ಪ್ರಕೃತಿಯ ಮುಂದೆ ಮಾನವ ಪ್ರಯತ್ನ ಹೇಗೆ ಮುಸುಕಾಗಿ ಬಿಡುತ್ತದೆ ಎಂಬ ಸತ್ಯವನ್ನು ಕರೋನವೈರಸ್ ಮನವರಿಕೆ ಮಾಡಿಕೊಟ್ಟಿದೆ. ದೇವರು, ಧರ್ಮ, ದೇಗುಲ ಗಳಿಗಿಂತ ಮಾನವ ಸಂಬಂಧ ಮತ್ತು ಕೌಟುಂಬಿಕ ಬದುಕು ವಾಸ್ತವಿಕ ಸತ್ಯ ಎಂಬುದನ್ನು ಕರೋನ ನಮಗೆ ಕಲಿಸಿಕೊಟ್ಟಿದೆ ಎಂಬ ಅನುಭವ ಈ ಕೃತಿಯ ಓದಿನಿಂದ ಮೂಡುತ್ತದೆ. ಅಲ್ಲದೆ ಕೊರೊನಾ ಎಲ್ಲಿಂದ ಬಂತು, ಆ ಅವಧಿಯಲ್ಲಿ ಬೇರೆ ಬೇರೆ ಪ್ರಮುಖ ದೇಶಗಳಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಮೃತಪಟ್ಟವರ ಸಂಖ್ಯೆ ನೀಡಲಾಗಿದೆ.
ಮೇಲಾಗಿ ಇದನ್ನು ಧೈರ್ಯದಿಂದ ಎದುರಿಸಬೇಕು, ಜೊತೆಗೆ ಇಂದಿನ ರಾಜಕೀಯ ಅವ್ಯವಸ್ಥೆಯನ್ನು ಪೂರ್ಣಚಂದ್ರ ಸತ್ಯಂಪೇಟೆ ಅವರು ಮಾಹಿತಿ ನೀಡಿದ್ದಾರೆ.ಈ ಪುಸ್ತಕವುಶರಣ ಮಾರ್ಗ ಚಾರಿಟೇಬಲ್ ಟ್ರಸ್ಟ್ ಕಲಬುರ್ಗಿ ವತಿಯಿಂದ ಪ್ರಕಟಗೊಂಡಿದ್ದು 116 ಪುಟಗಳಿರುವ ಕೃತಿಯ ಬೆಲೆ 125 ರೂಪಾಯಿಗಳ ಆಗಿದೆ. ಬೇಕಾದಲ್ಲಿ 9448204548 ಗೆ ಸಂಪರ್ಕಿಸಬಹುದು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…