ಬಿಸಿ ಬಿಸಿ ಸುದ್ದಿ

ಜಾತೀಯತೆ,ಮೌಢ್ಯತೆ, ಕಂದಾಚಾರ ವಿರುದ್ಧ ಎದೆಗಾರಿಕೆ ತೋರಿದವರು ಬಸವಣ್ಣ

ಶಹಾಬಾದ: ರಾಜಾಶಾಹಿ ವ್ಯವಸ್ಥೆ ಮತ್ತು ಜಾತೀಯತೆ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸಮಾಜದ ಬೇರೂರಿದ್ದ ಜಾತೀಯತೆ, ಅಂಧಕಾರ, ಮೌಡ್ಯತೆ, ಕಂದಾಚಾರವನ್ನು ಹೋಗಲಾಡಿಸಲು ಅರಸನ ಆಡಳಿತದ ವಿರುದ್ಧ ದಿಟ್ಟ ಎದೆಗಾರಿಕೆ ತೋರಿದವರು ಅಣ್ಣ ಬಸವಣ್ಣನವರು ಎಂದು ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ಶುಕ್ರವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ರಾಜಾಶಾಹಿ ವ್ಯವಸ್ಥೆಯಲ್ಲಿ ಮಂತ್ರಿಯಾಗಿ ಕೆಲಸ ನಿರ್ವಹಿಸುತ್ತ, ಸಮಾಜದಲ್ಲಿ ಮೇಳು-ಕೀಳು ಭಾವನೆಯನ್ನು ತೊಡೆದು ಹಾಕಲು ಅರಸನ ವಿರುದ್ಧ ಅಂದು ಅಂತರ್ಜಾತಿ ವಿವಾಹ ಮಾಡಿದ ಬಸವಣ್ಣನವರು ಪ್ರಪಂಚದ ಮೊಟ್ಟ ದಾರ್ಶನಿಕ ಪುರುಷ. ಜ್ಯೋತಿ ತಾನು ಬೆಳುಗುವುದಲ್ಲದೇ, ಇತರರಿಗೆ ಬೆಳಕು ಕೊಟ್ಟ ರೀತಿಯಲ್ಲಿ ಕುಲಕ್ಕೊಬ್ಬ ಶರಣರನ್ನು ಸೃಷ್ಠಿಸಿ, ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪವನ್ನು ರೂಪಿಸಿದವರು ಬಸವಣ್ಣನವರು ಎಂದು ಹೇಳಿದರು.

ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು: ಗುರಲಿಂಗಪ್ಪ

ಸಾಮಾಜಿಕ ಚಿಂತಕ ಗುರು ರೇವಣಸಿದ್ಧ ಪೂಜಾರಿ ಮಾತನಾಡಿ, ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಸಮಪಾಲು, ಸಮಬಾಳು ಬಿತ್ತಿದಂಥ ಬೀಜ ಇಂದು ವಿಶ್ವದಾದ್ಯಂತ ಪಸರಿಸಿದೆ. ಅವರು ಎಂದಿಗೂ ಕೇವಲ ಹೇಳುವಂತವರಾಗಿರಲಿಲ್ಲ. ನುಡಿದಂತೆ ನಡೆದವರು.ವಿಪ್ರ ಸಮಾಜದಲ್ಲಿ ಹುಟ್ಟಿ ಅಲ್ಲಿನ ಗೊಡ್ಡು ಆಚರಣೆಗಳನ್ನು ತೀರಸ್ಕರಿಸಿ ಲಿಂಗಾಯತ ಧರ್ಮವನ್ನು ಕೊಟ್ಟರು.ಜಗತ್ತು ಇಂದು ಬಸವಣ್ಣವರನ್ನು ಒಪ್ಪಿಕೊಂಡಿದೆ ಮತ್ತು ಅಪ್ಪಿಕೊಂಡಿದೆ ಎಂದರೆ ಅದು ಅವರ ಕಾಯಕ, ದಾಸೋಹ ಹಾಗೂ ನುಡಿದಂತೆ ನಡೆಯುವ ತತ್ವಗಳಿಂದ ಮಾತ್ರ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುಮಾರ ತೇಜಸ್.ಜಿ.ಪೂಜಾರಿ ವಚನಗಳ ಪಠಣ ಮಾಡಿದರು. ನಗರಸಭೆಯ ಸದಸ್ಯ ಮಲ್ಲಿಕಾರ್ಜುನ ವಾಲಿ,ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ನಾಗಣ್ಣ ಬಿ ಪಾಟೀಲ, ಮರಲಿಂಗ ಕಮರಡಗಿ, ಅರುಣ ಜಾಯಿ,ರಮೇಶ್ ಜೊಗದನಕರ,ಶರಣಪ್ಪ ಪೂಜಾರಿ,ಬಸವರಾಜ ಕೊಳಕೂರ ಇತರರು ಇದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

8 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

19 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

19 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

21 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

21 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

21 hours ago