ಆಹಾರ ಸರಬರಾಜಿನ ಪ್ರಾಮುಖ್ಯತೆಯನ್ನು ಮನಗಂಡು ಸರಕಾರ ಲಾಕ್ ಡೌನ್ ಸಮಯದಲ್ಲಿ ಫುಡ್ ಡೆಲಿವರಿಯನ್ನು ಅಗತ್ಯ ಸೇವೆಗಳ ಅಡಿಯಲ್ಲಿ ಗುರುತಿಸಿತು. ಝೋಮ್ಯಾಟೋ ಸಿಗಲಿ ಮಂಜು ಹಾಗೂ ಮತ್ತಿತರ ಪ್ಲಾಟ್ಫಾರ್ಮ್ ಗಳಿಗೆ ಲಕ್ಷಾಂತರ ಆಹಾರ ಸರಬರಾಜು (ಫುಡ್ ಡೆಲಿವರಿ) ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.ತಮ್ಮ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಈ ಕೊರೋನಾ ಸಾಂಕ್ರಮಿಕ ಸಮಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಪೂರ್ಣಾವಧಿ ಕೆಲಸದಲ್ಲಿ ತೊಡಗಿದ್ದಾರೆ. ಕೆಲವರಷ್ಟೇ ಅಲ್ಪಾವಧಿ ಕೆಲಸ ಮಾಡಿ ಹೋಗುತ್ತಾರೆ. ಕುಟುಂಬ ನಿರ್ವಹಣೆಗೆ ಈ ದುಡಿಮೆ ಮೇಲೆ ಅವಲಂಬಿತರಾದವರು ಹೆಚ್ಚು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ಹಿಂದೆಯೂ ತರಲಾಗಿದೆ. ನಮ್ಮ ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್ನರ್ಸ್ ಯೂನಿಯನ್(UFDFU) ವತಿಯಿಂದ ಕಳೆದ ಬಾರಿ ದಿಡೀರನೆ ಲಾಕ್ಡೌನ್ ವಿಧಿಸಿದಾಗಲೂ ಈ ಕ್ಷೇತ್ರದ ಕಾರ್ಮಿಕರಿಗೆ ಪರಿಹಾರ ಪ್ಯಾಕೇಜ್ ಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದೆವು. ಆದರೆ ನಮ್ಮ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತ್ತು ಈ ಕ್ಷೇತ್ರದ ಕಾರ್ಮಿಕರನ್ನು ಮತ್ತೆ ಸರ್ಕಾರ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿಯೂ ಲಾಕ್ಡೌನ್ ನಲ್ಲಿ ಕೆಲ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಸಾಕಷ್ಟು ಜನ ಈ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ಆರ್ಡರ್ ಗಳ ಸಂಖ್ಯೆ ಕಡಿಮೆಯಾಗಿದೆ ಜೊತೆಗೆ ಪೆಟ್ರೋಲ್ ಬೆಲೆ ಏರಿದೆ ಇವರು ಹೆಚ್ಚಿನ ಜನರನ್ನು ಭೇಟಿ ಮಾಡುವುದರಿಂದ, ಹೈರಿಸ್ಕ್ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಹೀಗಾಗಿ ಅವರ ಕುಟುಂಬಸ್ಥರು ಅಪಾಯದಂಚಿನಲ್ಲಿ ಜೀವನ ಕಳೆಯುತ್ತಾರೆ.
ಇಂಥ ಸಾಂಕ್ರಮಿಕ ದಂತ ವಿಷಮ ಪರಿಸ್ಥಿತಿಯಲ್ಲಿ ಈ ಕಾರ್ಮಿಕರು ಸೇವೆಯನ್ನು ನೀಡುತ್ತಿದ್ದಾರೆ ಇದನ್ನು ಮನಗಾಣದ ರಾಜ್ಯ ಸರಕಾರ ಫುಡ್ ಡೆಲಿವರಿ ಕಾರ್ಮಿಕರಿಗೆ ಯಾವುದೇ ರೀತಿಯ ಪ್ಯಾಕೇಜನ್ನು ಘೋಷಣೆ ಮಾಡದಿರುವುದು ಅತ್ಯಂತ ಖಂಡನೀಯ ಆಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇವರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಯುನಿಟೆಡ್ ಫುಡ್ ಡೆಲಿವರಿ ಪಾರ್ಟ್ನರ್ಸ್ ಯೂನಿಯನ್ ಕಲಬುರಗಿ ಜಿಲ್ಲಾ ಘಟಕ ಆಗ್ರಹಿಸುತ್ತದೆ.
ಭೀಮಾಶಂಕರ್ ಪಾಣೇಗಾಂವ್,
ಸಂಚಾಲಕರು ಯುನಿಟೆಡ್ ಫುಡ್ ಡೆಲಿವರಿ ಪಾರ್ಟ್ನರ್ ಯೂನಿಯನ್(UFDPN)
ಕಲಬುರಗಿ, 934104822