ಕಲಬುರಗಿ: ನಗರದ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ವಿಭಾಗವು ಆಯೋಜಿಸಿದ ರಸ್ತೆ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಕುರಿತ ಒಂದು ವಾರದ ಆನ್ಲೈನ್ ತರಬೇತಿಗೆ (ಮೂರನೇ ಆವೃತ್ತಿ) ಗುರುವಾರ 20 ರಂದು ಬೆಳಗ್ಗೆ 10.30 ಗಂಟೆಗೆ ಹೆಚ್ ಕೆ ಈ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ ಹಾಗೂ ಡಾ. ಪ್ರತಾಪ್ ಸಿಂಹ ಕೆ ದೇಸಾಯಿ ಅಧ್ಯಕ್ಷ ISTE NEW DELHI ಅವರು ಚಾಲನೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಎಸ್. ಹೆಬ್ಬಾಳ ಅವರು ಸ್ವಾಗತಿಸಿ ಕಾಲೇಜಿನ ಸಾಧನೆಗಳ ಬಗ್ಗೆ ವಿವರಿಸಿ ಹಾಗೂ Covid-19 ನಿಂದಾಗಿ ಕಾಲೇಜಿನ ಹಲವಾರು ಕಾರ್ಯಕ್ರಮಗಳಿಗೆ ನಾವು ಇನ್ನಷ್ಟು ಪ್ರಯೋಗಾತ್ಮಕವಾಗಿ ತಂತ್ರಜ್ಞಾನವನ್ನು ಪರಿಸ್ಥಿತಿಗೆ ಅನುಗುಣವಾಗಿ ಮಕ್ಕಳಿಗೆ ತಿಳಿಯ ಹೇಳಬೇಕಿದೆ ಎಂದರು.
ರಿಫ್ರೇಶರ ಕಾರ್ಯಕ್ರಮದ ಸಂಯೋಜಕರಾದ ಡಾ. ಅರವಿಂದ ಕುಮಾರ್ ಹರವಾಳಕರ ಮಾತನಾಡಿ ಕಾರ್ಯಕ್ರಮದ ವಿವರವನ್ನು ನೀಡಿದರು.
ಪ್ರೊ ಶ್ರುತಿ ಜಿ , ಮುಖ್ಯ ಅತಿಥಿಯ ಪರಿಚಯ ನೀಡಿದರು ಹಾಗೆಯೇ ಪ್ರೊ. ಮಲ್ಲಿಕಾರ್ಜುನ ಇವರು ಗೆಸ್ಟ್ ಆಫ್ ಆನರ್ ಅವರ ಪರಿಚಯವನ್ನು ಸಭಿಕರಿಗೆ ನೀಡಿದರು
ಮುಖ್ಯ ಅತಿಥಿ ಡಾ ಪ್ರತಾಪ್ ಸಿಂಹ ಕೆ ದೇಸಾಯಿ ಅವರು ತಮ್ಮ ಭಾಷಣದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಮಹತ್ವ ಅರಿತು ನಾವು ಮುನ್ನಡೆಯಬೇಕಾಗಿದೆ ಎಂದರು.
ನಾವೀನ್ಯತೆಯನ್ನು ವಾಣಿಜ್ಯ ಪೇಟೆಂಟ್ ಮತ್ತು ಸ್ಟಾರ್ಟ್ಅಪ್ಗಳಾಗಿ ಪರಿವರ್ತಿಸುವ ಬಗ್ಗೆ ಹೇಳಿದರು ಮತ್ತು ಶಿಕ್ಷಣವನ್ನು ಉದ್ಯಮಕ್ಕೆ ಸಂಬಂಧಿಸಿದ ತಂತ್ರಜ್ಞಾನವಾಗಿ ಪರಿವರ್ತಿಸುವ ಬಗ್ಗೆ ಮತ್ತು ಸಾಧನೆಗಳಿಗಾಗಿ ಹೆಚ್ಚಿನ ಗುರಿಗಳನ್ನು ಇಟ್ಟುಕೊಳ್ಳುವಲ್ಲಿ ಒತ್ತು ನೀಡಿದರು.
ಗೆಸ್ಟ್ ಆಫ್ ಆನರ್ ISTE, New Delhi, ಸದಸ್ಯರಾದ ಡಾ. ಶರಣಪ್ಪ ಜಿ ಮಲಶೆಟ್ಟಿ ಅವರು ಸಿವಿಲ್ ವಿಭಾಗವು ರೆಫ್ರೇಶರ್ ಕಾರ್ಯಕ್ರಮ ಮೊದಲನೇ ಹಾಗೂ ಎರಡನೆ ಆವೃತ್ತಿ ಯನ್ನು ಡಿಸೆಂಬರ್ ಹಾಗೂ ಮಾರ್ಚ್ ನಲ್ಲಿ ಯಶಸ್ವಿ ಯಾಗಿ ಪೂರ್ಣಗೊಳಿಸಿದೆ, ಮೂರನೇ ಅವೃತಿಯು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ ಎಂದು ಹಾರೈಸಿದರು. ಹಾಗೆಯೇ ISTE ವತಿಯಿಂದ ಇಂತಹ ಕಾರ್ಯಕ್ರಮಗಳಿಗೆ ಆರ್ಥಿಕವಾಗಿ ಹಾಗೂ ಇನ್ನೆಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಹೆಚ್ ಕೆ ಈ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ, ಮಾತನಾಡಿದ ಅವರು ರಸ್ತೆಯ ಮೂಲಸೌಕರ್ಯ ಅಭಿವೃದ್ಧಿಯಿಂದ ಗ್ರಾಮೀಣ ಅಭಿವೃದ್ಧಿಯನ್ನು ಹೆಚ್ಚಿಸಬಹುದು ಎಂದರು.
ಹೆಚ್ ಕೆ ಈ ಸಂಸ್ಥೆ ಹಾಗೂ ಪಿಡಿಎ ತಾಂತ್ರಿಕ ಮಹಾವಿದ್ಯಾಲಯವು ಪ್ರಾದೇಶಿಕ ಹಾಗು ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ ಎಂದರು.
ಡಾ.ಭೀಮಾಶಂಕರ್.ಸಿ. ಬಿಲಗುಂದಿ, ಅಧ್ಯಕ್ಷರು, ಡಾ. ಶರಣಬಸಪ್ಪ. ಆರ್. ಹರವಾಳ, ಉಪಾಧ್ಯಕ್ಷ, ಡಾ. ಜಗನ್ನಾಥ ಬಿ.ಬಿಜಾಪುರ ಕಾರ್ಯದರ್ಶಿ, ಡಾ.ಮಹದೇವಪ್ಪ.ವಿ. ರಾಂಪುರೆ, ಜಂಟಿ ಕಾರ್ಯದರ್ಶಿ, ಹೆಚ್ ಕೆ ಈ ಸಂಸ್ಥೆ ಮತ್ತು ಸಂಸ್ಥೆಯ ಕೌನ್ಸಿಲ್ ಸದಸ್ಯರಾದ ಡಾ.ಶರಣಬಸವಪ್ಪ ಬಿ ಕಾಮರೆಡ್ಡಿ, ಡಾ.ನಾಗೇಂದ್ರ ಎಸ್ ಮಂಥಾಳೆ, ಅರುಣ್ಕುಮಾರ್ ಎಂ ಪಾಟೀಲ್, ಬಸವರಾಜ್ ಜೆ. ಖಂಡೇರಾವ್, ಡಾ.ಕೈಲಾಶ್.ಬಿ.ಪಾಟೀಲ್, ವಿನಯ್.ಎಸ್. ಪಾಟೀಲ್, ಸೋಮನಾಥ್ ಸಿ. ನಿಗುಡ್ಗಿ, ಡಾ.ಅನಿಲ್ ಕುಮಾರ್.ಬಿ.ಪಟ್ಟನ್, ಸಾಯಿನಾಥ.ಎನ್. ಪಾಟೀಲ್, ಎನ್. ಗಿರಿಜಾ ಶಂಕರ್, ಡಾ. ರಜನಿಶ್ ಎಸ್.ವಾಲಿ, ಡಾ.ಪ್ರಕಾಶ್ ಐ ಬಬಲಾದಿ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು.
ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್. ಜಿ. ಪಾಟೀಲ್ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಎಸ್ ಎಸ್ ಕಲಶಟ್ಟಿ , ಡೀನ್ ಅಕಾಡೆಮಿಕ್ ಡಾ. ಸಿದ್ದರಾಮ ಪಾಟೀಲ್, ಪ್ರೊ ಶರಣ ಪಡಶೆಟ್ಟಿ, TEQIP ಸಂಯೋಜಕರು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…