ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

ಕಲಬುರಗಿ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಅಂಗನವಾಡಿ ನೌಕರರ ಮನೆ ಮನೆಯಿಂದ ಕೆಲಸದ ಸ್ಥಳದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಬೇಡಿಕೆ ಹಾಗೂ ಸವಲತ್ತುಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿತ್ತು.

ಲಸಿಕೆ ನೀಡಿ ಜಿವ ಉಳಿಸಿ ಪರಿಹಾರ ನೀಡಿ ನೀರ ರಕ್ಷಿಸಿ, ಉದ್ಯೋಗ ವೇತನ ಸಂರಕ್ಷಣೆ ನೀಡಿ, ಬೇಸಿಗೆ ರಜೆ ರದ್ದು ಮಾಡಿರುವುದನ್ನು ಖಂಡನೆ, ಮಳೆಗಾದಲ್ಲಿ ಬೇಸಿಗೆ ರಜೆ ನೀಡಬೇಕು. ಇಲ್ಲವೆ ೧೫ ದಿನದ ಹೆಚ್ಚುವರಿ ಗೌರವ ಧನ ನೀಡಬೇಕು. ೫೦ ವರ್ಷ ಮೇಲ್ಪಟ್ಟವರು, ಗರ್ಬಿಣಿ ಹಾಲುಣಿಸುವ ತಾಯಂದಿರು, ತೀವ್ರ ಕಾಯಿಲೆಗಳು ಇದ್ದವರಿಗೆ ವಿನಾಯಿತಿ ನೀಡಬೇಕು. ಕರೋನಾ ಕೆಲಸಕ್ಕೆ ನೇಮಿಸುವವರಿಗೆ ಪ್ರತ್ಯೇಕ ಆದೇಶ ನೀಡಬೇಕು.

ನಾರಾಯಣಪುರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಶಾಸಕ ಡಾ. ಅಜಯ್ ಸಿಂಗ್ ಆಗ್ರಹ

ಕರೋನಾ ವಾರಿಯರ್ಸ್ ಆಗಿ ನಿಧನ ಹೊಂದಿದ ೨೩ ಜನರಿಗೆ ೩೦ ಲಕ್ಷ ರೂ. ಪರಿಹಾರ ನೀಡಬೇಕು. ಬಾಕಿ ಇರುವ ಗೌರವಧನ, ಮೊಟ್ಟೆ ಹಣ ಬಿಡುಗಡೆ ಮಾಡಬೇಕು. ಕರೋನಾ ಕೆಲಸ ಮಾಡಲು ಅಂಗನವಾಗಿ ನೌಕರರಿಗೆ ಸೂಕ್ತ ಭದ್ರತೆ ನೀಡಬೇಕು. ಎರಡನೇ ಅಲೆಯಲ್ಲಿ ಮೃತರಾದ ೧೯ ಜನರಿಗೆ ಪರಿಹಾರ ನೀಡಬೇಕು. ೩೦ ಲಕ್ಷ ವಿಮೆ ಮರು ಆದೇಶ ಮಾಡಬೇಕು. ಹೆಚ್ಚುವರಿ ಕರೋನಾ ಕೆಲಸಕ್ಕೆ ಹೆಚ್ಚುವತಿ ವೇತನ ನೀಡಬೇಕು. ಆದಾಯ ತೆರಿಗೆ ವ್ಯಪ್ತಿಗೆ ಒಳಪಡದ ಕುಟುಂಬಕ್ಕೆ ತಿಂಗಳಿಗೆ ಹತ್ತು ಸಾವಿರ ರೂ. ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಮುಂದುವರೆಸಿ ಕೂಲಿ ಹೆಚ್ಚಳ ರೂ. ೬೦೦ ಮಾಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಜಿಲ್ಲಾಧ್ಯಕ್ಷೆ ಗೌರಮ್ಮ ಪಿ.ಪಾಟೀಲ್, ಕಲಾವತಿ, ಸಾಕ್ಷಿ, ಅರ್ಪಿತಾ ಭಾವೇಶ ವೆಂಕಟೇಶ ಇದ್ದರು.

emedialine

Recent Posts

ಸತ್ಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ

ಕಲಬುರಗಿ: ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.‌ಎಂ.ಎಂ.‌ಕಲಬುರ್ಗಿ ಯವರು ಸತ್ಯದ ಸಂಶೋಧಕರಾಗಿದ್ದರು ಎಂದು…

29 mins ago

ಮಕ್ಕಳೊಂದಿಗೆ ಹುಟ್ಟ ಹುಬ್ಬ ಆಚರಿಸಿಕೊಂಡ ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಸಂಜೆ ತಮ್ಮ ಹುಟ್ಟು ಹಬ್ಬವನ್ನು ಕಲಬುರಗಿ ನಗರದ ಆಳಂದ ನಾಕಾ ರಸ್ತೆಯಲ್ಲಿರುವ…

1 hour ago

ಚಿಂಚೋಳಿ ಗ್ರಾಮ ಅಡಳಿತಾಧಿಕಾರಿಗೆ ಡಿ.ಸಿ. ಪ್ರಶಂಸನಾ ಪತ್ರ; ಪಹಣಿಗೆ ಆಧಾರ್ ಜೋಡಣೆಯಲ್ಲಿ ಸಾಧನೆ

ಕಲಬುರಗಿ; ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಪಹಣಿಗೆ ಆಧಾರ್ ಜೋಡಣೆ ಮತ್ತು ಸರ್ಕಾರಿ ಜಮೀನುಗಳ ಸಂರಕ್ಷಣೆಯ ಲ್ಯಾಂಡ್ ಬೀಟ್ ಅಪ್ಲಿಕೇಶನ್ ನಲ್ಲಿ…

1 hour ago

ಉಚಿತ ಆರೋಗ್ಯ ತಪಾಸಣೆ| ರಾಜಾ ಕೃಷ್ಣಪ್ಪ ನಾಯಕ ಚಾಲನೆ

ಸುರಪುರ: ಹಿಂದಿನ ಕಾಲದಲ್ಲಿ ಅನೇಕ ಜನ ರಾಜರು ಸ್ವತಃ ತಾವೇ ಪಾರಂಪರಿಕ ವೈದ್ಯರಾಗಿದ್ದು ಬೇಟೆಗೆ ಹೋದ ಸಂದರ್ಭದಲ್ಲಿ ತಾವೇ ಮದ್ದು…

1 hour ago

ಲೋಕಾಯುಕ್ತ ಪೊಲೀಸ್ ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ

ಸುರಪುರ: ಸಾರ್ವಜನಿಕರು ತಮ್ಮ ಕೆಸಲ ಕಾರ್ಯಗಳಿಗಾಗಿ ಕಚೇರಿಗೆ ಬಂದಾಗ ವಿಳಂಬ ಮಾಡದೆ ನ್ಯಾಯಯುತವಾದ ಅರ್ಜಿಗಳ ಕೆಲಸ ಮಾಡಿಕೊಡುವಂತೆ ಕರ್ನಾಟಕ ಲೋಕಾಯುಕ್ತ…

2 hours ago

ಡಾ.ಶಂಕರ ವ್ಹಿ ಸನ್ಮಾನ

ರಾಯಚೂರು; ವಿಶ್ವವಿದ್ಯಾಲಯದ ಆಡಳಿತ ವಿಭಾಗದ ನೂತನ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದ ಡಾ.ಶಂಕರ ವ್ಹಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಹಾಪರ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420