ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

0
21

ಕಲಬುರಗಿ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಅಂಗನವಾಡಿ ನೌಕರರ ಮನೆ ಮನೆಯಿಂದ ಕೆಲಸದ ಸ್ಥಳದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಬೇಡಿಕೆ ಹಾಗೂ ಸವಲತ್ತುಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿತ್ತು.

ಲಸಿಕೆ ನೀಡಿ ಜಿವ ಉಳಿಸಿ ಪರಿಹಾರ ನೀಡಿ ನೀರ ರಕ್ಷಿಸಿ, ಉದ್ಯೋಗ ವೇತನ ಸಂರಕ್ಷಣೆ ನೀಡಿ, ಬೇಸಿಗೆ ರಜೆ ರದ್ದು ಮಾಡಿರುವುದನ್ನು ಖಂಡನೆ, ಮಳೆಗಾದಲ್ಲಿ ಬೇಸಿಗೆ ರಜೆ ನೀಡಬೇಕು. ಇಲ್ಲವೆ ೧೫ ದಿನದ ಹೆಚ್ಚುವರಿ ಗೌರವ ಧನ ನೀಡಬೇಕು. ೫೦ ವರ್ಷ ಮೇಲ್ಪಟ್ಟವರು, ಗರ್ಬಿಣಿ ಹಾಲುಣಿಸುವ ತಾಯಂದಿರು, ತೀವ್ರ ಕಾಯಿಲೆಗಳು ಇದ್ದವರಿಗೆ ವಿನಾಯಿತಿ ನೀಡಬೇಕು. ಕರೋನಾ ಕೆಲಸಕ್ಕೆ ನೇಮಿಸುವವರಿಗೆ ಪ್ರತ್ಯೇಕ ಆದೇಶ ನೀಡಬೇಕು.

Contact Your\'s Advertisement; 9902492681

ನಾರಾಯಣಪುರ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಶಾಸಕ ಡಾ. ಅಜಯ್ ಸಿಂಗ್ ಆಗ್ರಹ

ಕರೋನಾ ವಾರಿಯರ್ಸ್ ಆಗಿ ನಿಧನ ಹೊಂದಿದ ೨೩ ಜನರಿಗೆ ೩೦ ಲಕ್ಷ ರೂ. ಪರಿಹಾರ ನೀಡಬೇಕು. ಬಾಕಿ ಇರುವ ಗೌರವಧನ, ಮೊಟ್ಟೆ ಹಣ ಬಿಡುಗಡೆ ಮಾಡಬೇಕು. ಕರೋನಾ ಕೆಲಸ ಮಾಡಲು ಅಂಗನವಾಗಿ ನೌಕರರಿಗೆ ಸೂಕ್ತ ಭದ್ರತೆ ನೀಡಬೇಕು. ಎರಡನೇ ಅಲೆಯಲ್ಲಿ ಮೃತರಾದ ೧೯ ಜನರಿಗೆ ಪರಿಹಾರ ನೀಡಬೇಕು. ೩೦ ಲಕ್ಷ ವಿಮೆ ಮರು ಆದೇಶ ಮಾಡಬೇಕು. ಹೆಚ್ಚುವರಿ ಕರೋನಾ ಕೆಲಸಕ್ಕೆ ಹೆಚ್ಚುವತಿ ವೇತನ ನೀಡಬೇಕು. ಆದಾಯ ತೆರಿಗೆ ವ್ಯಪ್ತಿಗೆ ಒಳಪಡದ ಕುಟುಂಬಕ್ಕೆ ತಿಂಗಳಿಗೆ ಹತ್ತು ಸಾವಿರ ರೂ. ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಮುಂದುವರೆಸಿ ಕೂಲಿ ಹೆಚ್ಚಳ ರೂ. ೬೦೦ ಮಾಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಜಿಲ್ಲಾಧ್ಯಕ್ಷೆ ಗೌರಮ್ಮ ಪಿ.ಪಾಟೀಲ್, ಕಲಾವತಿ, ಸಾಕ್ಷಿ, ಅರ್ಪಿತಾ ಭಾವೇಶ ವೆಂಕಟೇಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here