(ಇಂದು 22 ರಂದು 249ನೇ ಜನ್ಮ ದಿನದ ಪ್ರಯುಕ್ತ ಕಿರು ಲೇಖನ )
ರಾಜಾರಾಮ್ ಮೋಹನ್ ರಾಯ್ ರ ಜೀವನ ಮತ್ತು ಛಾತಿಯೇ ಅಂತದ್ದು, ಅಂದುಕೊಂಡದ್ದನ್ನು ಸಾಧಿಸಬೇಕು. ಬೇಡವಾದುದ್ದನ್ನು ಖಂಡಿಸಿಯೇ ತಿರುತ್ತಿದ್ದರು. ಈ ಕಠೋರ ನಡತೆ ಅವರ ಪಾಲಿಗೆ ಹಲವು ಬಾರಿ ಧಾರ್ಮಿಕ ಹಿಂದೂ ವಾದಿಗಳ ವಿರೋಧಕ್ಕೂ ಕಾರಣವಾಗಿತ್ತು. ಆದರೂ ಅವರು ಧಾರ್ಮಿಕ ಕಂದಾಚಾರ, ವಸಾಹತುಶಾಹಿ ಹಾಗೂ ಸಾಮಾಜಿಕ ಪಿಡುಗುಗಳ ವಿರುದ್ಧ ಸಿಡಿದೆದ್ದು, ಗಟ್ಟಿಯಾಗಿ ಹೋರಾಡಿದ್ದರು.
19ನೇ ಶತಮಾನದಲ್ಲಿ ನಡೆದ ಫ್ರಾನ್ಸ್ ಮಹಾಕ್ರಾಂತಿ, ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿಗಳ ಮೂಲಕ ವಿಶ್ವ ಸಮುದಾಯಕ್ಕೆ ಹೊಸ ಪ್ರಗತಿಪರ ವಿಚಾರಧಾರೆಯನ್ನು ರಾಜಾರಾಮ್ ಮೋಹನ್ ರಾಯ್ ಧಾರೆ ಎರೆದರು.ಇದು ನವೋದಯದ ಕಾಲ ಎಂದೇ ಖ್ಯಾತಿ ಪಡೆದಿತ್ತು.
ತಂದೆ ರಮಾಕಾಂತ್ ರಾಯರು ತಾಯಿ ತಾರಿಣಿದೇವಿ ಬ್ರಾಹ್ಮಣ ದಂಪತಿಗಳ ಕುಟುಂಬದಲ್ಲಿ ಇಂತಹ ಅಪೂರ್ವ ಚೇತನ 1772 ಮೇ 22ರಂದು ಪಶ್ಚಿಮ ಬಂಗಾಳದ ರಾಧಾ ನಗರದಲ್ಲಿ ಜನಿಸಿದರು. ಮನೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಹಿಂದೂ ಧರ್ಮದ ಎಲ್ಲಾ ಪವಿತ್ರಗ್ರಂಥಗಳನ್ನು ಮನನ ಮಾಡಿಕೊಂಡರು.ಇಷ್ಟಕ್ಕೆ ಸೀಮಿತರಾಗದೇ ಮನೆಯಿಂದ ಮೌಲ್ವಿಯಿಂದ ಪಾರಸಿ, ಅರಬ್ಬಿ, ಆಂಗ್ಲ, ಪರ್ಷಿಯನ್, ಬಂಗಾಳಿ ಸೇರಿದಂತೆ ಹಲವು ಭಾಷೆಗಳು ಕಲಿತರು. ಜಗತ್ತಿನ ವಿವಿಧ ಮತ್ತು ಮತ ಗಳ ಬಗ್ಗೆ ಆಳವಾಗಿ ಅಭ್ಯಸಿಸಿದರು.
ತಮ್ಮ 15ನೇ ವಯಸ್ಸಿನಲ್ಲಿ ಮೂಢನಂಬಿಕೆ, ಕಂದಾಚಾರದ ಅನಿಷ್ಟಗಳಾದ ಬಾಲ್ಯವಿವಾಹ, ಬಹುಪತ್ನಿತ್ವ, ಸತಿ ಪದ್ಧತಿಗಳ ವಿರುದ್ಧ ರಾಜಿ ರಹಿತವಾಗಿ ದನಿಯೆತ್ತಿದ್ದರು. ಮೌಢ್ಯ ಮತ್ತು ಕಂದಾಚಾರಗಳನ್ನು ಗಳನ್ನು ವಿರೋಧಿಸಿದ್ದಕ್ಕೆ ಖುದ್ದು ತಮ್ಮ ಪಾಲಕರಿಂದಲೂ ಅಪಾರವಾದ ವಿರೋಧ ವ್ಯಕ್ತವಾಯಿತು. ಆದರೂ ತಮ್ಮ ದಾರಿಯನ್ನು ಮಾತ್ರ ಅವರು ಬಿಡಲಿಲ್ಲ.
ಬ್ರಿಟಿಷರ ಹಿಡಿತದಲ್ಲಿದ್ದ ನಮ್ಮ ದೇಶದಲ್ಲಿಯೂ ಜನತಾಂತ್ರಿಕ ಸುಧಾರಣೆ ತರಲು ಹಗಲಿರುಳು ಶ್ರಮಿಸಿದರು. ಸ್ತ್ರೀ-ಪುರುಷರ ಸಮಾನತೆಗಾಗಿ ಹಾಗೂ ವಿಧವೆಯರ ಪುನರ್ ವಿವಾಹಕ್ಕಾಗಿ ಅವರು ಪ್ರೋತ್ಸಾಹಿಸಿದರು. ಸತಿ ಸಹಗಮನ ಪದ್ಧತಿಯನ್ನು ವಿರೋಧಿಸಿದ್ದಕ್ಕೆ ಕೆಲ ಹಿಂದೂಗಳು ಮೋಹನ್ ರಾಯರನ್ನು ಖಂಡಿಸಿದರು.
ನಂತರದ ಬೆಳವಣಿಗೆಯಲ್ಲಿ 1829 ರಲ್ಲಿ ವಿಲಿಯಂ ಬೆಂಟಿಂಕ್ ಅವರು ಸತಿಸಹಗಮನ ಪದ್ಧತಿ ನಿಷೇಧಿಸಿದವರು. 1828 ರಂದು ಕಲ್ಕತ್ತದಲ್ಲಿ ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು. ಮೌಢ್ಯ, ಅವೈಜ್ಞಾನಿಕ, ಹಳೆಯ ಮೌಲ್ಯಗಳ ನಿವಾರಣೆ, ಉನ್ನತ ಸಂಸ್ಕೃತಿ, ಸಾಮಾಜಿಕ ಪ್ರಗತಿಪರ ವಿಚಾರ ಬಿತ್ತುವುದು ಮುಖ್ಯ ಉದ್ದೇಶವಾಗಿತ್ತು.
ಸಮಸಮಾಜಕ್ಕಾಗಿ ಚಿಂತಿಸುತ್ತಿದ್ದ ಮಹಾನ್ ಚೇತನ ಸೆಪ್ಟೆಂಬರ್ 27 1833 ರಂದು ಇಂಗ್ಲೆಂಡಿನಲ್ಲಿ ಕಣ್ಮರೆಯಾದರು.ಇಂತಹ ಮಹಾನ್ ವ್ಯಕ್ತಿಯ ಆದರ್ಶ ಜೀವನ ಮತ್ತು ವಿಚಾರಗಳು ಇಂದಿನ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಡಲು ನಮ್ಮಗೆಲ್ಲ ಸ್ಫೂರ್ತಿಯಾಗಲಿ ಎಂಬುದು ನನ್ನ ಆಶಯ.
✍️ ಭೀಮಾಶಂಕರ್ ಪಾಣೇಗಾಂವ್, ಹವ್ಯಾಸಿ ಬರಹಗಾರರು, ಕಲಬುರಗಿ.
9341064822
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…