ಬಿಸಿ ಬಿಸಿ ಸುದ್ದಿ

ಕೋವಿಡ್ ನಿಯಮ ಪಾಲಿಸುವಂತೆ: ಯಲ್ಲಗೊಂಡ ಕರೆ

ಆಳಂದ: ಕೊರೋನಾ ವೈರಸ್ ಮಹಾಮಾರಿಯಿಂದ ಭಾರತ ದೇಶವನ್ನು ಲಾಕ್‍ಡೌನ ಮಾಡಿ ನಿಯಂತ್ರಣ ತರುವುದಕ್ಕೆ ಸರ್ಕಾರಗಳು ಸ್ಪಂದಿಸುತ್ತಿವೆ, ಹೀಗಿರುವಾಗ ಪ್ರತಿಯೊಬ್ಬರು ಕೋವಿಡ-19 ನಿಯಮಗಳನ್ನು ಪಾಲಿಸಬೇಕೆಂದು ಯಲ್ಲಗೊಂಡ ಕುರುಬರು ಹೇಳಿದರು.

ತಾಲೂಕಿನ ನಿಂಬರ್ಗಾ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಪ್ರಮುಖ ರಸ್ತೆಗಳು, ದೇವಸ್ಥಾನ ಕಟ್ಟೆಗಳು, ಮಠಗಳಲ್ಲಿ, ವಿವಿಧ ಬಡಾವಣೆಯ ಮನೆ, ಮನೆಗೂ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದವರು ಕೊರೋನಾ ವೈರಸ್ ನಿಂದ ಬಳಲುತ್ತಿರುವ ವ್ಯಕ್ತಿಗಳು ಯಾರು ಭಯಪಡದೆ ವೈದ್ಯರಿಂದ ಸೂಕ್ತವಾದ ಚಿಕಿತ್ಸೆಯನ್ನು ಪಡೆದು ಅವರು ನೀಡುವ ಸಲಹೆ, ಮಾರ್ಗದರ್ಶನ ಪಾಲಿಸಬೇಕೆಂದು ಗ್ರಾಮ ಪಂಚಾಯತ ಅಧಿಕಾರಿ ಯಲ್ಲಗೊಂಡ ಕುರುಬರು ಕರೆ ನೀಡಿದರು.

ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ವೈರಸ್ ಹೆಚ್ಚಳವಾಗುತ್ತಿರುವುದರಿಂದ ಗ್ರಾಮದ ತುಂಬಾ ಸಂಪೂರ್ಣವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಮೂಲಕ ಗ್ರಾಮವನ್ನು ಕೊರೋನಾ ಮುಕ್ತ ಮಾಡುವುದಕ್ಕೆ ಗ್ರಾಮ ಪಂಚಾಯತ ಸರ್ವ ಸದಸ್ಯರು ದುಡಿಯುತಿದೇವೆ, ಕೊರೋನಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಜನರಲ್ಲಿ ನಿರಂತರವಾಗಿ ವಾಹನದಲ್ಲಿ ಕೊರೋನಾ ಜಾಗೃತ ಅಭಿಯಾನದ ಪ್ರಚಾರ ಮಾಡಲಾಗುತಿದೆ ಎಂದು ಗ್ರಾ.ಪಂ. ಅಧ್ಯಕ್ಷರಾದ ಸಾತಣ್ಣಾ ಮಂಟಗಿ ತಿಳಸಿದರು.

ಗ್ರಾಮದಲ್ಲಿ ಕೊರೋನಾ ವೈರಸ್‍ನಿಂದ ಸಾವುನೋವುಗಳು ಸಂಭವಿಸುತಿರುವುದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಆದರೆ ಯಾರು ಕೂಡ ಭಯಭೀತರಾಗದೆ ಕೊರೋನಾ ಲಕ್ಷಣಗಳಾದ ಜ್ವರ, ನೇಗಡಿ, ಕೆಮ್ಮು, ಹಾಗು ತಲೆ ನೋವು ಕಂಡು ಬಂದರೆ ತಕ್ಷಣವೇ ಆಶಾಕಾರ್ಯಕರ್ತೆಯರೀಗೆ ಅಥವಾ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿ, ವೈದ್ಯರಿಂದ ಸೂಕ್ತವಾದ ಚಿಕಿತ್ಸೆಯನು ಪಡೆದುಕೊಳಬೇಕು, ವೈರಸ್ ಬಗ್ಗೆ ಬೇಜವಾಬ್ದಾರಿ ತೋರಿಸಿದರೆ ನಿಮ್ಮ ಕುಟುಂಬವು ತೊಂದರೆ ಅನುಭವಿಸುವುದಷ್ಟೆಯಲ್ಲ ಗ್ರಾಮಕ್ಕೂ ಅಪಾಯಕ್ಕೆ ಸಿಲುಕುವಂತಾಗುತ್ತದೆ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಶ್ರೀಮಂತ ವಗ್ಧರ್ಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗುರಣ್ಣಾ ಕಾಮಣಗೋಳ, ಈರಣ್ಣಾ ನಾಗಶೇಟ್ಟಿ, ಸೂರ್ಯಕಾಂತ ಚಿಂಚೂರ, ಗ್ರಾ.ಪಂ.ಸದಸ್ಯರಾದ ಮೋಹನ ನಿರ್ಮಲ್ಕರ್, ಸುರೇಖಾ ಸೂರ್ಯಕಾಂತ ಜಿಡಗಿ, ರಾಮಣ್ಣಾ ದುಗೊಂಡ, ಸುರೇಖಾ ಸೋಮಣ್ಣಾ ನಾಗೂರ, ಶಶಿಧರ್ ನವರಂಗ, ರುಭಾಸ್ವಾಮಿ ನಿಂಬರ್ಗಿಕರ್ ಹಾಗೂ ಗ್ರಾಮದ ಹಿರಿಯ ಮುಖಂಡರು ಇದ್ದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

7 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

7 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

7 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

7 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

7 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

7 hours ago