ಬಿಸಿ ಬಿಸಿ ಸುದ್ದಿ

ಕಾಮನವೆಲ್ತ್ ಸಂಸ್ಥಾಪನಾ ದಿನಾಚರಣೆ

ಕಾಮನ್‍ವೆಲ್ತ್ ಹೊಸ ರಾಷ್ಟ್ರಗಳ ಒಕ್ಕೂಟದ ಸಂಸ್ಥೆ
ಕಲಬುರಗಿ: ದ್ವಿತೀಯ ಮಹಾ ಯುದ್ಧದ ನಂತರ ಬ್ರಿಟೀಷ ಸಾಮ್ರಾಜ್ಯ ಪತನವಾಯಿತು. ಆದರೆ ಕಾಮನ್‍ವೆಲ್ತ್ ರಾಷ್ಟ್ರಗಳ ಒಕ್ಕೂಟದ ಪರಿಕಲ್ಪನೆ ಮೂಡಿದ್ದು, 1926ರಲ್ಲಿ ಸ್ವಾಯತ್ತತೆ ಪಡೆದ ಪ್ರದೇಶಗಳು ಈ ಒಕ್ಕೂಟದ ಸದಸ್ಯರಾಗಬಹುದೆಂದು ನಿರ್ಣಯಿಸಲಾಯಿತು. ಬ್ರಿಟೀಷ ಅಧೀನ, ಆಶ್ರಿತ ಹಾಗೂ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳನ್ನೊಳಗೊಂಡ ಈ ಒಕ್ಕೂಟವನ್ನು ಬ್ರಿಟೀಷ ಕಾಮನ್‍ವೆಲ್ತ್ ಎಂಬ ಹೆಸರಿನಿಂದ ಪರಿಗಣಿಸಲಾಗಿದ್ದು, ಹೊಸ ರಾಷ್ಟ್ರಗಳ ಒಕ್ಕೂಟದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಸರಳವಾಗಿ ಜರುಗಿದ ‘ಕಾಮನವೆಲ್ತ್ ಸಂಸ್ಥಾಪನಾ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಮನವೆಲ್ತ್ ಒಕ್ಕೂಟದ ಕಾರ್ಯಾಲಯವು ಲಂಡನನಲ್ಲಿದ್ದು, 1965ರಲ್ಲಿ ಪ್ರಾರಂಭವಾಗಿದೆ. ಇದರ ಕಾರ್ಯವನ್ನು ಜಾರಿಗೊಳಿಸಲು ಪ್ರಧಾನ ಕಾರ್ಯದರ್ಶಿಯವರು ಇರುತ್ತಾರೆ. ಕಾಮನ್‍ವೆಲ್ತ್ ಒಕ್ಕೂಟದಲ್ಲಿ ಒಟ್ಟು 53 ಸದಸ್ಯ ರಾಷ್ಟ್ರಗಳಿವೆ. ಈ ಒಕ್ಕೂಟ ಒಂದು ಅನೌಪಚಾರಿಕ ಸಂಸ್ಥೆಯಾಗಿದೆ. ಯಾವುದೇ ವಿಷಯವನ್ನು ಸಭೆಯಲ್ಲಿ ಚರ್ಚಿಸಬಹುದೆ ಹೊರತು, ಮತಕ್ಕೆ ಹಾಕಿ ನಿರ್ಣಯಿಸುವಂತಿಲ್ಲ. ಒಂದು ಸದಸ್ಯ ರಾಷ್ಟ್ರ ಇನ್ನೊಂದು ಸದಸ್ಯ ರಾಷ್ಟ್ರದಲ್ಲಿ ತನ್ನ ರಾಯಭಾರಿಯನ್ನು ನೇಮಿಸಬಹುದಾಗಿದೆ. ಅವರನ್ನು ‘ಹೈ ಕಮೀಷನರ್’ ಎನ್ನುತ್ತಾರೆ. ಸಾಮಾನ್ಯವಾಗಿ 2 ವರ್ಷಕ್ಕೊಮ್ಮೆ ಶೃಂಗಸಭೆ ಯು.ಕೆ. ಯಲ್ಲಿ ಜರುಗುತ್ತದೆ. ಆದರೆ, ಸದಸ್ಯ ರಾಷ್ಟ್ರಗಳ ವಿನಂತಿ ಮೇರೆಗೆ ಸ್ಥಳ ಬದಲಾವಣೆ ಮಾಡಬಹುದಾಗಿದೆಯೆಂದು ಅದರ ಕಾರ್ಯವಿವರಣೆಯನ್ನು ತಿಳಿಸಿದರು.

ಸಹ ಶಿಕ್ಷಕ ಅಣ್ಣಾರಾಯ.ಎಚ್.ಮಂಗಾಣೆ ಮಾತನಾಡಿ, ಕಾಮನ್‍ವೆಲ್ತ್ ಒಕ್ಕೂಟವು ಒಂದು ನೆನಪಿನ ಸಂಘಟನೆಯಾಗಿದೆ. ಇಲ್ಲಿ ಕೇವಲ ಚರ್ಚೆಯಾಗಬಹುದೆ ಹೊರತು, ನಿರ್ಣಯಕ್ಕೆ ಬರುವಂತಿಲ್ಲ ಎಂಬ ಅಂಶ ನಿಜಕ್ಕೂ ವಿಪರ್ಯಾಸವೇ ಸರಿ. ಸಾಮಾನ್ಯ ಒಕ್ಕೂಟದ ಶೃಂಗ ಸಭೆಯಲ್ಲಿ ಅನೇಕ ವಿಷಯಗಳು ಚರ್ಚೆಯಾಗುತ್ತವೆ. ಅದೇ ರೀತಿ ಅನೇಕ ವಿಷಯಗಳು ಬೆಳಕಿಗೆ ಬರುವಂತಾಗುತ್ತದೆ. ಹಾಗೂ ದೇಶಗಳು ಪ್ರತ್ಯೇಕವಾಗಿ ಗಮನ ಹರಿಸಲು ಸಾಧ್ಯವಾಗುತ್ತದೆಯೆಂದರು.

ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ದೇವಿಂದ್ರಪ್ಪ ಗಣಮುಖಿ, ಸಂಜಯಕುಮಾರ ಖಜೂರಿ, ಶಿವಪುತ್ರಯ್ಯ ಸ್ವಾಮಿ ಬೆಣ್ಣೂರು ಇದ್ದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

10 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

10 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

10 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

10 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

10 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

10 hours ago