ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯ ಪರಿಹಾರದ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ: ಸಚಿವ ಜಗದೀಶ್‌ ಶೆಟ್ಟರ್‌

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಕಾರಣ ತೊಂದರೆಗೀಡಾಗಿರುವ ರಾಜ್ಯದ ಕೈಗಾರಿಕಾ ಕ್ಷೇತ್ರದ ಸಮಸ್ಯೆಗಳಿಗೆ ಅಗತ್ಯವಿರುವ ಪರಿಹಾರದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್‌ ಶೆಟ್ಟರ್‌ ಭರವಸೆ ನೀಡಿದರು.

ಇಂದು ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಕೈಗಾರಿಕಾ ಸಂಘಟನೆಗಳಾದ ಕಾಸಿಯಾ, ಎಫ್‌ಐಸಿಸಿಐ ಮತ್ತು ಎಫ್‌ಕೆಸಿಸಿಐ ನ ಅಧ್ಯಕ್ಷರನ್ನು ಭೇಟಿ ಮಾಡಿ ವಿಸ್ತ್ರುತವಾಗಿ ಚರ್ಚೆ ನಡೆಸಿದರು. ಕೋವಿಡ್‌ ಎರಡನೇ ಅಲೆಯು ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ತನ್ನದೇ ಆದಂತಹ ಸವಾಲುಗಳನ್ನು ಹುಟ್ಟು ಹಾಕಿದೆ. ರಾಜ್ಯದ ಮತ್ತು ದೇಶದ ಆರ್ಥಿಕತೆಗೆ ಸಾಕಷ್ಟು ಕೊಡುಗೆ ನೀಡುವ ಈ ಉದ್ಯಮಗಳು ಲಾಕ್‌ಡೌನ್‌ ನಿಂದಾಗಿ ತೀವ್ರ ತೊಂದರೆಗೆ ಈಡಾಗಿವೆ. ಈ ನಿಟ್ಟಿನಲ್ಲಿ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳು ನಮ್ಮ ಗಮನ ಸೆಳೆದಿದ್ದಾರೆ. ಅಲ್ಲದೆ, ವಿದ್ಯುತ್‌, ತೆರಿಗೆ ಸೇರಿದಂತೆ ಕೆಲವು ರಿಯಾಯತಿಗಳನ್ನು ಕೇಳಿದ್ದಾರೆ ಎಂದರು.

ಕೈಗಾರಿಕಾ ಕ್ಷೇತ್ರದ ಮತ್ತೆ ತನ್ನ ಸಂಪೂರ್ಣ ಕಾರ್ಯಾಚರಣೆ ನಡೆಸಲು ಲಾಕ್‌ಡೌನ್‌ ನಂತರವೂ ಸಾಕಷ್ಟು ಸಮಯ ಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ನೀಡಿರುವ ಈ ಮನವಿಯ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಅಗತ್ಯ ತೀರ್ಮಾನಗಳನ್ನು ತಗೆದುಕೊಳ್ಳುವುದಾಗಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಭರವಸೆ ನೀಡಿದರು.

ಎಫ್‌ಐಸಿಸಿಐ ಕರ್ನಾಟಕ ಅಧ್ಯಕ್ಷರಾದ ಉಲ್ಲಾಸ್‌ ಕಾಮತ್‌, ಎಫ್‌ಕೆಸಿಸಿಐ ಅಧ್ಯಕ್ಷರಾದ ಪೆರಿಕಾಲ್‌ ಎಂ ಸುಂದರಮ್‌, ಕಾಸಿಯಾ ಅಧ್ಯಕ್ಷರಾದ ಕೆ ಬಿ ಅರಸಪ್ಪ ಉಪಸ್ಥಿತರಿದ್ದರು. ಕೈಗಾರಿಕಾ ಸಂಘ ಸಂಸ್ಥೆಗಳ ಪರವಾಗಿ ಇದೇ ಸಂಧರ್ಭದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

32 mins ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

34 mins ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

36 mins ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

47 mins ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

54 mins ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

56 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420