ಸೇಡಂ: ಕರೋನಾ ಸಂಕಷ್ಟದ ಸಂದರ್ಭದಲ್ಲಿ ಬಡವರು ಅಸಾಹಯಕರು, ಅನಾಥರು ಅನ್ನ ನೀರಿಲ್ಲದೆ ಪರದಾಡುವಂತಾಗಿದೆ ಇಂತಹ ಸಂದರ್ಭದಲ್ಲಿ ಅವರಿಗೆ ಕೈಲಾದಷ್ಟು ಸೇವೆ ಮಾಡುವ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗಿ ಅತ್ಮತೃಪ್ತಿ ಪಡೆದುಕೋಳ್ಳುವ ಗುಣ ಬೆಳೆಸಿಕೊಳ್ಳೊಣ ಎಂದು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಹೇಳಿದರು.
ಸೇಡಂ ಮತಕ್ಷೇತ್ರದ ಮಳಖೇಡ ಗ್ರಾಮದಲ್ಲಿ ಬಾಲರಾಜ ಬಿ ಗ್ರೇಡ್ ವತಿಯಿಂದ ಬಡಜನರಿಗೆ ಆಹಾರ ಪದಾರ್ಥದ ಕಿಟ್ ವಿತರಿಸಿ ಮಾತನಾಡಿ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನರನ್ನು ಗುರುತಿಸಿ ಆಹಾರ ಪದಾರ್ಥ ವಿತರಿಸಲಾಗುತಿದೆ.ಕೊರೋನ ನೀಯಂತ್ರಣಕ್ಕಾಗಿ ಜಾರಿಗೆ ತಂದ ಲಾಕಡೌನ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಬಡವರು ಸಂಕಷ್ಟದಲ್ಲಿದ್ದಾರೆ. ಅವರಿಗೆ ವಿವಿಧ ರೀತಿಯಿಂದ ಸಹಾಯ ಮಾಡುವ ಕಾರ್ಯ ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಫೌಂಡೆಷನ್ ವತಿಯಿಂದ ನಡೆದಿದೆ ಪ್ರತಿ ಗ್ರಾಮದಲ್ಲಿ ಸ್ಯಾನಿಟೈಸರ್ ಮಾಡಲಾಗಿದೆ ಮತ್ತು ಆಹಾರ ಪದಾರ್ಥ ಕಿಟ್ ವಿತರಿಸಲಾಗುತಿದೆ ಎಂದರು.
ಈ ಸಂದರ್ಭದಲ್ಲಿ ಸೇಡಂ ಪುರಸಭೆ ಮಾಜಿ ಅಧ್ಯಕ್ಷ ಯಕ್ಬಾಲ್ ಖಾನ್ .ಜೆಡಿಎಸ್ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ. ವಿಜಯಕುಮಾರ ಕುಲಕರ್ಣಿ. ಸಂತೋಷ ಕೇರೋಳ್ಳಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು
ಲಾಕ್ ಡೌನ್ ಇರುವ ಕಾರಣ ಬಹಳಷ್ಟು ಬಡವರು ಹಾಗೂ ನಿರ್ಗತಿಕರು ತುಂಬಾ ಸಂಕಷ್ಟದಲ್ಲಿದ್ದಾರೆ ಆದಕಾರಣ ಸೇಡಂ ಮತಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಆಹಾರ ಪದಾರ್ಥದ ಕಿಟ್ ಹಾಗೂ ಮಾಸ್ಕ್ ಸ್ಯಾನಿಟೈಸರ್ ವಿತರಿಸಲಾಗುತಿದೆ. -ಬಾಲರಾಜ ಗುತ್ತೇದಾರ, ಜೆಡಿಎಸ್ ಮಖಂಡರು ಸೇಡಂ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…