ಬಿಸಿ ಬಿಸಿ ಸುದ್ದಿ

ಶಹಾಬಾದ: ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ಡಾಂಬರೀಕರಣ

ಶಹಾಬಾದ: ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ಡಾಂಬರೀಕರಣ ಮಾಡಿದ ದಿನವೇ ರಸ್ತೆ ಕಿತ್ತು ಹೋಗಿದ್ದರಿಂದ ಸಾರ್ವಜನಿಕರ ದೂರಿನ್ವಯ ಶಾಸಕ ಬಸವರಾಜ ಮತ್ತಿಮಡು ಅವರು ಡಿಯುಡಿಸಿ ಅಧಿಕಾರಿಗಳಿಗೆ ಪರಿಶೀಲಿಸಲು ತಿಳಿಸಿದ್ದರಿಂದ ಜಿಲ್ಲಾ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ,ಇಇ ಶಿವನಗೌಡ ಪಾಟೀಲ, ಎಇಇ ಮೋಹಿಶ್ ಹುಸೇನ್ ಕಾಮಗಾರಿಯನ್ನು ಪರಿಶೀಲಿಸಿದರು.

ಶಾಸ್ತ್ರಿ ವೃತ್ತದಿಂದ ಮಿಲತ್ ನಗರ ಮಜ್ಜಿದ್ ವರೆಗೆ ನಡೆದುಕೊಂಡೆ ಅಧಿಕಾರಿಗಳು ಸಂಪೂರ್ಣ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು. ಕಳಪೆ ಮಟ್ಟದ ಕಾಮಗಾರಿ ಮತ್ತು ಕ್ರೀಯಾಯೋಜನೆ ಪ್ರಕಾರ ಡಾಂಬರೀಕರಣ ಮಾಡದಿರುವುದು ಕಂಡು ಬಂದಿದೆ.ಅಲ್ಲದೇ ವಾರದ ರಜೆ ರವಿವಾರದಂದು ಅಧಿಕಾರಿಗಳಿಲ್ಲದ ಸಮಯದಲ್ಲಿ ಕಾಮಗಾರಿ ಮಾಡಿರುವುದು  ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಎಇಇ ಪುರುಷೋತ್ತಮ, ಜೆಇ ಬಸವರಾಜ ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಳಪೆ ಮಟ್ಟದ  ಡಾಂಬರೀಕರಣ ಮಾಡಿರುವುದರಿಂದ ಸಂಪೂರ್ಣ ಕಿತ್ತು ಹಾಕಿ ಹೊಸದಾಗಿ ಗುಣಮಟ್ಟದ ಕಾಮಗಾರಿ ಮಾಡಿದರೇ ಮಾತ್ರ ಬಿಲ್ ಮಾಡಿ.ಇಲ್ಲದಿದ್ದರೇ ಗುತ್ತಿಗೆದಾರನ ಬಿಲ್ ಮಾಡಕೂಡದು ಎಂದು ನಗರಸಭೆಯ ಪೌರಾಯುಕ್ತರಿಗೆ ತಾಕೀತು ಮಾಡಿದರು.

ಕಲಬುರಗಿ: ವಯೋ ವೃದ್ಧನ ಮೇಲೆ ಹಲ್ಲೆ ನಡೆಸಿ ದರೋಡೆ

ಅಲ್ಲದೇ ಸಂಬಂಧಪಟ್ಟ ಜೆಇ ಕಾಮಗಾರಿ ನಡೆಯುವ ಸಮಯದಲ್ಲಿ ಗುಣಮಟ್ಟ ನಡೆಯುತ್ತದೆಯೇ ಎಂಬುದನ್ನು ಗಮನಿಸುತ್ತಿರಬೇಕು. ಕಾಮಗಾರಿ ಗುಣಮಟ್ಟವನ್ನು ನೋಡುವ ಹೊಣೆಗಾರಿಕೆ ನಿಮ್ಮದು.ಆದರೆ ಅದನ್ನು ಬಿಟ್ಟು ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಳಪೆಯಾಗದಂತೆ ನೋಡಿಕೊಳ್ಳಿ. ಸಂಪೂರ್ಣ ರಸ್ತೆಯನ್ನು ತೆಗೆದು ಹೊಸದಾಗಿ ಡಾಂಬರೀಕರಣಗೊಳಿಸಲು ಗುತ್ತಿಗೆದಾರನಿಗೆ ನೋಟಿಸ್ ಜಾರಿ ಮಾಡಿ ಎಂದು ತಿಳಿಸಿದರು.

ಈ ಸಮಯದಲ್ಲಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ,ಎಇಇ ಪುರುಷೋತ್ತಮ, ಜೆಇ ಬಸವರಾಜ, ಜೆಇ ಮೌಲಾಲಿ ಇತರರು ಇದ್ದರು.

ಕ್ರಮಕೈಗೊಳ್ಳಲು ಆಗ್ರಹ : ನಗರೋತ್ಥಾನ ಮೂರನೇ ಹಂತದ ಟೆಂಡರ್ ಪಡೆದ ಗುತ್ತಿಗೆದಾರ ಮಾಡಿರುವ ಕೆಲಸಗಳು ಸಂಪೂರ್ಣ ಕಳಪೆ ಮಟ್ಟದಾಗಿವೆ.ಆದರೂ ಆತನ ಬಿಲ್ ಪಾವತಿಯಾಗುತ್ತಿರುವುದಕ್ಕೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಳಪೆ ಕಾಮಗಾರಿಯಿಂದ ಕಾಮಗಾರಿ ಕೈಗೊಂಡ ದಿನವೇ ಡಾಂಬರು ಕಿತ್ತು ಬಂದಿದೆ.ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಪರಿಶೀಲನೆ ಮಾಡಿದ್ದಾರೆ.

ಆಟೋ ಚಾಲಕರು, ಕಾರು ಚಾಲಕರಿಗೆ ಆಹಾರ ಕಿಟ್ಟ್ ವಿತರಣೆ

ಈಗಾಗಲೇ ಹಳ್ಳದ ಸೇತುವೆ ಮಾಡಿದ ಕಾಮಗಾರಿ ಕಳಪೆ ಮಟ್ಟದಾಗಿದ್ದರೂ ನಗರಸಭೆಯ ಅಧಿಕಾರಿಗಳು, ಡಿಯುಡಿಸಿ ಅಧಿಕಾರಿಗಳು ಹಾಗೂ ಮೂರನೇ ಹಾಗೂ ನಾಲ್ಕನೇ ವ್ಯಕ್ತಿಯು ಪರಿಶೀಲನೆ ನಡೆಸಿದರೂ ಬಿಲ್ ಪಾವತಿಸಲಾಗಿದೆ.ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಸೇರಿಕೊಂಡು ಜನರಿಗೆ ಯಾಮಾರಿಸುತ್ತಿದ್ದಾರೆ.ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದರೂ ಯಾರು ಗಮನಿಸುತ್ತಿಲ್ಲ.ಜಿಲ್ಲಾಧಿಕಾರಿಗಳೇ ಒಮ್ಮೆ ನಿವೇ ಖುದ್ದಾಗಿ ಬೇಟಿ ನೀಡಿ ನಗರದ ರಸ್ತೆ ಹಾಗೂ ಹಳ್ಳದ ಸೇತುವೆ ಗಮನಿಸಿದರೇ ನಿಮಗೂ ಗೊತ್ತಾಗುತ್ತದೆ ನಿಮ್ಮ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದು.ಕೂಡಲೇ ಬೇಟಿ ನೀಡಿ ಅಧಿಕಾರಿಗಳ ಹಾಗೂ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago