ಬಿಸಿ ಬಿಸಿ ಸುದ್ದಿ

ಬರಗೆಟ್ಟ ಮಾಧ್ಯಮಗಳು, ಥೂ… !

ಮಾಧ್ಯಮಗಳು ಹಾಗೂ ಅಲ್ಲಿ ಕೆಲಸ ಮಾಡುವ ಜನಗಳು ಯಾವ ವಸ್ತುವಿನಿಂದ ನಿರ್ಮಾಣವಾದವರು ಎಂಬುದನ್ನು ಗಮನಿಸುವುದಕ್ಕೆ ಇದೊಂದೇ ಸುದ್ದಿ ಸಾಕೆನಿಸುತ್ತದೆ. ಜಗತ್ತಿನ ಯಾರೂ ಗರ್ಭಿಣಿ ಆಗೋದಿಲ್ಲ ಎನ್ನುವ ರೀತಿಯ ಸುದ್ದಿಯನ್ನು ಬಿತ್ತರಿಸುವ ಇವರಿಗೆ ಮಿದುಳು ಇದೆ ಎಂದು ನನಗೆ ಅನಿಸುತ್ತಿಲ್ಲ.

ರಾಧಿಕಾ ಪಂಡಿತ ಸೆಲೆಬ್ರಿಟಿಯೇ ಆಗಿರಬಹುದು. ಆಕೆ ಗರ್ಭಿಣಿ ಆಗಿರುವುದು ಆಕೆಯ ಕೌಟುಂಬಿಕ ಸಂಗತಿ. ಇದನ್ನು ಢಾಣಾ ಡಂಗುರ ಮಾಡುವ ಅನಿವಾರ್ಯತೆ ಇವುಗಳಿಗೆ ಯಾಕೆ ಉಂಟಾಯಿತೋ ನನಗಂತೂ ಅರ್ಥವಾಗುವುದಿಲ್ಲ. ಈ ಸಂಗತಿಯನ್ನು ಹಂಚಿಕೊಂಡು ಸಂಭ್ರಮ ಪಡಬೇಕಾದವರು ಅವರ ಕುಟುಂಬದ ನೆಂಟರಿಷ್ಟರು. ತಿರುಬೋಕಿ ಮಾಧ್ಯಮದರು ಮಾತ್ರ ಇಂಥ ಸಂಗತಿಗಳನ್ನು ಪ್ರಕಟಿಸಿ, ಜನರ ತಲೆಗೆ ಮಣ್ಣು ತುಂಬುತ್ತಾರೆ. ನಮ್ಮ ರಾಷ್ಟ್ರದಲ್ಲಿ ಜ್ವಲಂತವಾದ ಹಲವಾರು ಸಮಸ್ಯೆಗಳಿವೆ. ಕಾಶ್ಮೀರದಲ್ಲಿ ಉಗ್ರರ ಉಪಟಳವಿದೆ. ಸಾಕಷ್ಟು ಜನರಿಗೆ ಇರಲು ಒಂದು ಸಣ್ಣ ಜೋಪಡಿಯೂ ಇಲ್ಲ. ಉಣ್ಣುವುದಕ್ಕೆ ಪೌಷ್ಠಿಕವಾದ ಆಹಾರವಿಲ್ಲ. ಭಾರತ ಬರಬರುತ್ತ ನಿರುದ್ಯೋಗಿಗಳ ತಾಣವಾಗಿ ಮಾರ್ಪಡುತ್ತಿದೆ. ದೇವರು, ಧರ್ಮದ ಗುತ್ತೇದಾರರು ಒಂದೇ ಸಮ ಠೇಂಕಾರದ ಮಾತನಾಡುತ್ತಿದ್ದಾರೆ.

ದೇವರು ಧರ್ಮದ ಜೇಡ ಬಲೆಯಲ್ಲಿ ಅಜ್ಞಾನಿ ಮನುಷ್ಯನನ್ನು ಹೆಡಮುರಗಿ ಕಟ್ಟಿ ಆ ವ್ಯವಸ್ಥೆ ಬೆಚ್ಚಿ ಬೀಳಿಸಿದೆ. ಕರ್ಮ ಸಿದ್ಧಾಂತದ ಬಲೆಯಲ್ಲಿ ಸಿಲುಕಿಸಿ ಮನಸ್ಸು ಮಸಣವಾಗಿಸಿದ್ದಾರೆ. ಯುವಕರು ಮೋಬೈಲ್ ಗಳ ಕಲ್ಪನಾ ಲೋಕದಲ್ಲಿ ಮುನ್ನಡೆದಿದ್ದಾರೆ. ರಾಜಕಾರಣಿಗಳಂತೂ ಲಜ್ಜೆಗೆಟ್ಟು ಹೋಗಿದ್ದಾರೆ. ಸತ್ಯದ ಜಾಗವನ್ನು ಸುಳ್ಳು ಸಂಪೂರ್ಣ ಆಕ್ರಮಿಸಿದೆ. ಸತ್ಯ ಮೂಲೆಗುಂಪಾಗಿದೆ.

ಇಂಥ ಕೆಟ್ಟ ಸ್ಥಿತಿ ಯಾವ ನಾಡಿಗೂ ಬೇಡ.

ಈ ಸಂದರ್ಭಗಳಲ್ಲಿಯೇ ಮಾಧ್ಯಮದ ಮಿತ್ರರ ಕೆಲಸ ಇರುತ್ತದೆ. ಅಜ್ಞಾನಿಯನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗುವುದು. ಭ್ರಷ್ಟನನ್ನು ಶಿಷ್ಟನನ್ನಾಗಿಸಿವುದು. ಹುಂಬನನ್ನು ಮನುಷ್ಯನನ್ನಾಗಿಸುವುದು ಪತ್ರಕರ್ತರ ಕರ್ತವ್ಯ. ಬಡತನ ನಿರುದ್ಯೋಗಗಳ ಪ್ರಮಾಣವನ್ನು ಸರಕಾರಕ್ಕೆ ತಿಳಿಸಿ ಸಮಸ್ಯೆಯನ್ನು ಪರಿಹರಿಸುವುದು ಮಾಧ್ಯಮದ ಅಲಿಖಿತ ಕರ್ತವ್ಯ. ಮನುಷ್ಯ ಭಾವನಾತ್ಮಕತೆಯ ದುರುಪಯೋಗ ಪಡೆಯುತ್ತ, ತಮ್ಮ ಬೇಳೆ ಬೇಯಿಸಿಕೊಳ್ಳುವ ಜನಗಳನ್ನು ಹರಿತ ಮಾತುಗಳಿಂದ ಎಚ್ಚರಿಸುವುದು ಮಾಧ್ಯಮ ಮಿತ್ರರ ಕೆಲಸ.

ಆದರೆ ಇಲ್ಲಿ ಆಗುತ್ತಿರುವುದೇನು ?

ಕಾರ್ಯಾಂಗ, ಶಾಸಕಾಂಗಗಳು ದಾರಿ ತಪ್ಪಿ ನಡೆಯುವಾಗ ಎಚ್ಚರಿಸಬೇಕಾದ ಮಾಧ್ಯಮಾಂಗವೇ ಕೆಟ್ಟು ಕೆಸರೆದ್ದು ಹೋದಾಗ ಎಚ್ಚರಿಸಬೇಕಾದವರು ಯಾರು ?

ಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದೊಡೆ ನಿಲಬಹುದೆ ?
ಏರಿ ನೀರೊಂಬಡೆ, ಬೇಲಿ ಕೇಯ ಮೇವೊಡೆ
ನಾರಿ ತನ್ನ ಮನೆಯಲ್ಲಿ ಕಳವೊಡೆ
ಇನ್ನಾರಿಗೆ ದೂರುವೆ ತಂದೆ
ಕೂಡಲಸಂಗಮದೇವ

ಎಂಬ ವಚನದಂತೆ ಕಾಪಾಡಬೇಕಾದವರೆ ಕೊಲ್ಲಲು ನಿಂತಾಗ ಯಾರಿಗೆ ದೂರಬೇಕು ? ಇದ್ದಲಿ ಮಸಿಗೆ ಬುದ್ದಿ ಹೇಳುವ ಸ್ಥಿತಿಗೆ ಮಾಧ್ಯಮಗಳು ಬಂದು ನಿಂತಿವೆ. ಇಂಥ ಕೆಟ್ಟ ಸ್ಥಿತಿಯಲ್ಲಿ ಪ್ರಜ್ಞಾವಂತರು ಮಾಡಬೇಕಾದುದು ಇಷ್ಟೆ :

ಬರಗೆಟ್ಟ ಇಂಥ ಸುದ್ದಿಗಳನ್ನು ಪ್ರಕಟಿಸುವ, ದೃಶ್ಯ ಮಾಧ್ಯಗಳನ್ನು ಬಹಿಷ್ಕರಿಸಬೇಕು. ನಾವು ಎಲ್ಲಿಯವರೆಗೆ ಇಂಥ ನಾಟಕಗಳನ್ನು ಬಾಯ್ತೆರೆದು ನೋಡುತ್ತೇವೆಯೋ ಅಲ್ಲಿಯವರೆಗೆ ಇವರು ತೋರಿಸಿತ್ತಲೇ ಇರುತ್ತಾರೆ. ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕೆ ಹೊರತು, ಇನ್ನಾರೋ ಬಂದು ದಾರಿ ತೋರಿಸಿತ್ತಾರೆ ಎಂದು ನಂಬುವುದೇ ಮೂರ್ಖತನ, ಅಲ್ಲವೆ ?

emedialine

View Comments

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago