ಬಿಸಿ ಬಿಸಿ ಸುದ್ದಿ

ಕಲಬುರಗಿಯಲ್ಲಿ ಸೋಮವಾರದಿಂದ ‘ವಚನ ಆಷಾಢ’ ಪ್ರವಚನ

ಕಲಬುರಗಿ: ಇಲ್ಲಿನ ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸೋಮವಾರದಿಂದ ಪ್ರತಿ ದಿನ ಸಂಜೆ 6 ಗಂಟೆಗೆ ವಚನ ಆಷಾಢ ಪ್ರವಚನ ಕಾರ್ಯಕ್ರಮ ನೆರವೇರಲಿದೆ ಎಂದು ಡಾ. ವಿಲಾಸವತಿ ಖೂಬಾತಾಯಿ ಹೇಳಿದರು.

ಕಳೆದ ವರ್ಷ ಬೀದರ್ ಬಸವ ಗಿರಿಯ ಅಕ್ಕ ಅನ್ನಪೂರ್ಣತಾಯಿ ಅವರಿಂದ ತಿಂಗಳಪರ್ಯಂತ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ಜುಲೈ 1 ರಿಂದ 24 ರವರೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಈ ಮುಂಚೆ ವಚನ ಶ್ರಾವಣ ಎಂದು ಶ್ರಾವಣ ಮಾಸದಲ್ಲಿ ಪ್ರವಚನ ಆಯೋಜಿಸಲಾಗುತ್ತಿತ್ತು. ಆದರೆ ಎರಡು ವರ್ಷಗಳಿಂದ ವಚನ ಆಷಾಢ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು “ಇ-ಮೀಡಿಯಾ ಲೈನ್”ನೊಂದಿಗೆ ಮಾತನಾಡುತ್ತ ತಿಳಿಸಿದರು.

ಶ್ರಾವಣ ಮಾಸ ಅಂದರೆ ಒಳ್ಳೆಯ ದಿನಗಳು. ಆಷಾಢ ಮಾಸ ಅಂದರೆ ಕೆಟ್ಟ ದಿನಗಳು ಎಂಬ ಮನೋಭಾವನೆಯನ್ನು ಹೋಗಲಾಡಿಸಿ ಬಸವಾದಿ ಶರಣರ ಅಧ್ಯಾತ್ಮಿಕ ಮಹೋನ್ನತಿ ಬಿತ್ತರಿಸುವುದಕ್ಕಾಗಿ ಕಳೆದ ವರ್ಷದಿಂದ ವಚನ ಶ್ರಾವಣ ಇದ್ದುದನ್ನು ವಚನ ಆಷಾಡ ಎಂದು ಹೆಸರಿಟ್ಟು ಪ್ರವಚನ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಕ್ಕೆ ಅಲ್ಲಿನ ಸಾರ್ವಜನಿಕರ ಸಹಭಾಗಿತ್ವ ಮೆಚ್ಚುವಂಥದ್ದು.

-ಅರವಿಂದ ಜತ್ತಿ, ಅಧ್ಯಕ್ಷರು, ಕೇಂದ್ರ ಬಸವ ಸಮಿತಿ

ಜುಲೈ 1 ರಂದು ಸಂಜೆ 6 ಗಂಟೆಗೆ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶ್ರಾಂತ ನ್ಯಾಯಮೂರ್ತಿ ಚೆನ್ನಮಲ್ಲಪ್ಪ ಬೆನಕನಳ್ಳಿ ರಟಕಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹುನ್ನೂರ-ಮಧುರಖಂಡಿ ಬಸವಜ್ಞಾನ ಗುರುಕುಲದ ಡಾ. ಈಶ್ವರ ಮಂಟೂರ ಅವರು “ಶರಣರ ಜೀವನ ದರ್ಶನ ಕುರಿತು ಆದ್ಯಾತ್ಮಿಕ ಪ್ರವಚನ ನಡೆಸಿಕೊಡಲಿದ್ದಾರೆ ಎಂದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಕಲಬುರಗಿ ಬಸವ ಸಮಿತಿ ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಸಹಾಯಕ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ನೀಲಕಂಠರಾವ ಮಾಲಿಪಾಟೀಲ ಹಾಗರಾಗಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಕೃಷಿ ಅಧಿಕಾರಿ ಗೂಳಪ್ಪ ಯೋಗಪ್ಪನವರ್, ನಂದಿ ಬಸವೇಶ್ವರ ಟ್ರಸ್ಟ್ ನ ಗೌರವಾಧ್ಯಕ್ಷ ಶಾಂತಪ್ಪ ಭೋಗಶೆ, ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಾಂತಪ್ಪ ಏರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಶಂಕ್ರಯ್ಯ ಆರ್. ಗುರುಮಠ ವಚನ ಸಂಗೀತ ನೀಡಲಿದ್ದು, ಸಿದ್ಧೇಶಕುಮಾರ ಲಿಂಗನಬಂಡಿ ತಬಲಾ ಸಾಥ್ ನೀಡಲಿದ್ದಾರೆ. 24 ದಿನಗಳ ಕಾಲ ನಡೆಯಲಿರುವ ಈ ಪ್ರವಚನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವಂತೆ ಅವರು ಮನವಿ ಮಾಡಿದರು.

emedialine

Recent Posts

ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…

2 hours ago

ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…

2 hours ago

ಕಲಬುರಗಿ; ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…

2 hours ago

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

3 hours ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

3 hours ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

3 hours ago